ಆ್ಯಪ್ನಗರ

ಕೂಲಿಕಾರ್ಮಿಕರ ಆರೋಗ್ಯ ತಪಾಸಣೆ

ಗದಗ : ತಾಲೂಕಿನ ಅಸುಂಡಿಯಲ್ಲಿ ಜಿಪಂ ಹಾಗೂ ಜಿಲ್ಲಾ ಆಯುಷ್‌ ಇಲಾಖೆ, ಅಸುಂಡಿ ಗ್ರಾಪಂ, ಸರಕಾರಿ ಹೋಮಿಯೋಪತಿ ಚಿಕಿತ್ಸಾಲಯ ಆಶ್ರಯದಲ್ಲಿ ಉಚಿತ ಆಯುಷ್‌ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಹೋಂಬಳ ರಸ್ತೆಗೆ ಹೊಂದಿಕೊಂಡಿರುವ ಹೊಲದಲ್ಲಿ ನಡೆಯಿತು.

Vijaya Karnataka 18 Jun 2019, 5:00 am
ಗದಗ : ತಾಲೂಕಿನ ಅಸುಂಡಿಯಲ್ಲಿ ಜಿಪಂ ಹಾಗೂ ಜಿಲ್ಲಾ ಆಯುಷ್‌ ಇಲಾಖೆ, ಅಸುಂಡಿ ಗ್ರಾಪಂ, ಸರಕಾರಿ ಹೋಮಿಯೋಪತಿ ಚಿಕಿತ್ಸಾಲಯ ಆಶ್ರಯದಲ್ಲಿ ಉಚಿತ ಆಯುಷ್‌ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಹೋಂಬಳ ರಸ್ತೆಗೆ ಹೊಂದಿಕೊಂಡಿರುವ ಹೊಲದಲ್ಲಿ ನಡೆಯಿತು.
Vijaya Karnataka Web GDG-17RUDRAGOUD1
ಅಸುಂಡಿ ಗ್ರಾಮದ ಹೋಂಬಳ ರಸ್ತೆಗೆ ಹೊಂದಿಕೊಂಡ ಹೊಲದಲ್ಲಿ ಉಚಿತ ಆಯುಷ್‌ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಸುಜಾತಾ ಪಾಟೀಲ ಮಾತನಾಡಿದರು.


ಜಿಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ ಕಾರ್ಯಕ್ರಮ ಉದ್ಘಾಟಿಸಿ, ಬಡ ಕುಟುಂಬದ ಕೂಲಿಕಾರ್ಮಿಕರಿಗೆ ಆರೋಗ್ಯ ಕಾಪಾಡಿಕೊಳ್ಳಬೇಕು.ಎಲ್ಲರೂ ಶಿಬಿರದ ಸದುಪಯೋಗ ಪಡೆದುಕೊಂಡು ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಹೇಳಿದರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಸುಜಾತಾ ಪಾಟೀಲ ಮಾತನಾಡಿ, ಶಿಬಿರದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಕೂಲಿ ಕಾರ್ಮಿಕರಿಗೆ ಇಲಾಖೆಯಿಂದ ವಿಶೇಷವಾಗಿ ಸಾಂಕ್ರಾಮಿಕ ರೋಗಗಳಾದ ಡೆಂಗೆ ಚಿಕುನ್‌ಗುನ್ಯಾಹಾಗೂ ಮಲೇರಿಯಾ ರೋಗಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಕೊಳ್ಳಲು ಉಚಿತವಾಗಿ ವಿತರಿಸಲ್ಪಡುವ ಹೋಮಿಯೋಪತಿ ಔಷಧಿಯನ್ನು 150ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ವಿತರಿಸಲಾಯಿತು.

ಹುಲಕೋಟಿ ಸಹಕಾರ ಶಿಕ್ಷ ಣ ಸಂಸ್ಥೆ ಅಧ್ಯಕ್ಷ ರವೀಂದ್ರ ಮೂಲಿಮನಿ,ಸ್ಥಳೀಯ ವೈದ್ಯಾಧಿಕಾರಿ ಡಾ.ಸಂಜೀವ ನಾರಪ್ಪನವರ ಮಾತನಾಡಿದರು.

ಡಾ.ಜಯಪಾಲಸಿಂಗ್‌ ಸಮೋರೆಕರ, ಡಾ.ಅಶೋಕ ಮತ್ತಿಗಟ್ಟಿ, ಡಾ.ಸಾಯಿಪ್ರಕಾಶ ಮಡಿವಾಳರ, ಡಾ.ಕಮಲಾಕರ ಅರಳೆ, ಮಂಜುನಥ ಸಜ್ಜನ, ದಿವಾಕರ, ಗಿರಡ್ಡಿ ಸೋಮಣ್ಣವರ, ಸದಾನಂದ ವಾಲಿಕಾರ, ಶಣ್ಮಖ ಅಸುಂಡಿ, ಸೋಮರಡ್ಡಿ ರಾಮೇನಹಳ್ಳಿ, ಎಡಿಒ ಬಡಿಗೇರ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ