ಆ್ಯಪ್ನಗರ

ಮಹಿಳೆಯಿಂದ ಆರೋಗ್ಯಕರ ಸಮಾಜ

ಮುಳಗುಂದ: ಪುರುಷ ಪ್ರಧಾನ ಈ ಸಮಾಜದಲ್ಲಿಮಹಿಳೆ ಏನೂ ಕಡಿಮೆಯಿಲ್ಲಎನ್ನುವ ರೀತಿಯಲ್ಲಿಎಲ್ಲರಂಗದಲ್ಲಿಯೂ ದಾಪುಗಾಲನ್ನು ಇಡುತ್ತಿದ್ದಾಳೆ. ಮಹಿಳೆಯಿಲ್ಲದೆ ಆರೋಗ್ಯಕರ ಸಮಾಜ ನಿರ್ಮಾಣ ಕಷ್ಟಸಾಧ್ಯ ಎಂದು ಮಂಗಳಾ ನೀಲಗುಂದ ಹೇಳಿದರು.

Vijaya Karnataka 10 Mar 2020, 5:00 am
ಮುಳಗುಂದ: ಪುರುಷ ಪ್ರಧಾನ ಈ ಸಮಾಜದಲ್ಲಿಮಹಿಳೆ ಏನೂ ಕಡಿಮೆಯಿಲ್ಲಎನ್ನುವ ರೀತಿಯಲ್ಲಿಎಲ್ಲರಂಗದಲ್ಲಿಯೂ ದಾಪುಗಾಲನ್ನು ಇಡುತ್ತಿದ್ದಾಳೆ. ಮಹಿಳೆಯಿಲ್ಲದೆ ಆರೋಗ್ಯಕರ ಸಮಾಜ ನಿರ್ಮಾಣ ಕಷ್ಟಸಾಧ್ಯ ಎಂದು ಮಂಗಳಾ ನೀಲಗುಂದ ಹೇಳಿದರು.
Vijaya Karnataka Web healthy society from woman
ಮಹಿಳೆಯಿಂದ ಆರೋಗ್ಯಕರ ಸಮಾಜ


ಅವರು ಪಟ್ಟಣದ ಜೀಜಾಬಾಯಿ ಸಂಘದ ವತಿಯಿಂದ ಬಿ.ಎಲ್‌.ಜಾಧವ ಅವರ ಮನೆಯಲ್ಲಿಹಮ್ಮಿಕೊಂಡ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸದೃಢ ಸಮಾಜದಲ್ಲಿಮಹಿಳೆಯ ಪಾತ್ರ ನಿರ್ಣಾಯಕವಾಗಿದ್ದು, ಸದೃಢ ಭಾರತ ನಿರ್ಮಾಣದಲ್ಲಿಮಹಿಳೆಯ ಪಾತ್ರ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಮಹಿಳೆಯಿಲ್ಲದ ಸಮಾಜ ಊಹಿಸಲು ಅಸಾಧ್ಯ ಎಂದು ಹೇಳಿದರು. ಮಹಿಳೆ ಸಮಾಜದ ಎಲ್ಲಕ್ಷೇತ್ರದಲ್ಲಿಯೂ ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲಳು ಎಂಬುದು ಈಗಾಗಲೇ ಸಾಬೀತಾಗಿದೆ. ಮದರ್‌ ತೆರೆಸಾ, ಮೇಡಮ್‌ ಕ್ಯೂರಿ, ಕಲ್ಪನಾ ಚಾವ್ಲಾ, ಇಂದಿರಾಗಾಂಧಿ, ಕಿರಣ್‌ ಬೇಡಿ ಮುಂತಾದ ಸಾಧಕ ಮಹಿಳೆಯರು ತಮ್ಮ ಕಾರ್ಯ ಕ್ಷೇತ್ರದಲ್ಲಿವಿಶ್ವ ಪ್ರಸಿದ್ದಿ ಪಡೆದಿದ್ದಾರೆ. ಮಹಿಳೆ ಎಂಬ ಕೀಳರಿಮೆ ಬೆಳೆಸಿಕೊಳ್ಳದೆ ತನ್ನಲ್ಲಿರುವ ವಿಶೇಷತೆ ಬಗ್ಗೆ ಹೆಮ್ಮೆ ಪಡಬೇಕು ಎಂದರು.

ಮಹೇಶ ನೀಲಗುಂದ ಮಾತನಾಡಿ, ಹೆಣ್ಣನ್ನು ಪೂಜಿಸಿ ಗೌರವಿಸುವುದು ಭಾರತೀಯ ಸಂಸ್ಕೃತಿ.ಹೆಣ್ಣು ಕುಟುಂಬಕ್ಕೆ ಮಾತ್ರವಲ್ಲದೇ ಇಡೀ ಸಮಾಜಕ್ಕೆ ಅನಿವಾರ್ಯ. ಎಲ್ಲಕ್ಷೇತ್ರವನ್ನೂ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿರುವುದು ತಿಳಿಯುತ್ತದೆ ಎಂದರು.

ಜೀಜಾಬಾಯಿ ಸಂಘದ ಅಧ್ಯಕ್ಷೆ ಗೀತಾ ಜಾಧಾವ ಅಧ್ಯಕ್ಷತೆವಹಿಸಿದ್ದರು.ಮುಖ್ಯ ಅತಿಥಿಯಾಗಿ ಮಂಗಳಾ ನೀಲಗುಂದ, ಚಂದ್ರಶೇಖರ ಭಜಂತ್ರಿ,ಮಹೇಶ ಛಬ್ಬಿ, ವೀರಪ್ಪ ಸಿದ್ದನಗೌಡರ,ಬಿ.ಎಲ್‌.ಜಾಧಾವ,ರೇಣುಕಾ ಜಾಧಾವ ಹಾಗೂ ವಿವಿಧ ಸಂಘಟನೆಯ ಮಹಿಳೆಯರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ