ಆ್ಯಪ್ನಗರ

ದಾಖಲೆ ಸಲ್ಲಿಸಲು ಹೆಸ್ಕಾ ಸೂಚನೆ

ಹೊಳೆಆಲೂರು :ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ನೀರಾವರಿ ಪಂಪ್‌ಸೆಟ್‌ ಹೊಂದಿರುವ ಗ್ರಾಹಕರು ಹೆಸ್ಕಾಂ ಕಚೇರಿಗೆ ಕೆಲವು ಅವಶ್ಯಕ ದಾಖಲೆಗಳನ್ನು ನೀಡಬೇಕೆಂದು ಹೆಸ್ಕಾಂ ಸೂಚಿಸಿದೆ.

Vijaya Karnataka 24 Nov 2019, 5:19 pm
ಹೊಳೆಆಲೂರು :ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ನೀರಾವರಿ ಪಂಪ್‌ಸೆಟ್‌ ಹೊಂದಿರುವ ಗ್ರಾಹಕರು ಹೆಸ್ಕಾಂ ಕಚೇರಿಗೆ ಕೆಲವು ಅವಶ್ಯಕ ದಾಖಲೆಗಳನ್ನು ನೀಡಬೇಕೆಂದು ಹೆಸ್ಕಾಂ ಸೂಚಿಸಿದೆ.
Vijaya Karnataka Web heskas notice to file a document
ದಾಖಲೆ ಸಲ್ಲಿಸಲು ಹೆಸ್ಕಾ ಸೂಚನೆ


ರಾಜ್ಯ ಹಾಗೂ ಕೇಂದ್ರ ಸರಕಾರದ ಆದೇಶದಂತೆ ಈಗಾಗಲೇ ವಿದ್ಯುತ್‌ ಗ್ರಾಹಕರ ಗಣತಿ ಪ್ರಾರಂಭಿಸಲಾಗಿದೆ. ಆದ್ದರಿಂದ ಗ್ರಾಹಕರು ತಮ್ಮ ಆರ್‌ ಆರ್‌ ನಂಬರಿಗೆ ಲಿಂಕ್‌ ಮಾಡಿಸಲು ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌, ಜಾತಿ, ಆದಾಯ ಪ್ರಮಾಣ ಪತ್ರದ ಝೆರಾಕ್ಸ್‌ ಪ್ರತಿ ಹಾಗೂ ಮೊಬೈಲ್‌ ಸಂಖ್ಯೆಯನ್ನು ಹೊಳೆಆಲೂರು ವಿಭಾಗಕ್ಕೆ ಬರುವ ಗ್ರಾಮಗಳ ಗ್ರಾಹಕರು ಹೊಳೆಆಲೂರಿನ ಹೆಸ್ಕಾಂ ಕಚೇರಿಗೆ ನ.28 ರೊಳಗೆ ತಲುಪಿಸಬೇಕು. ತಪ್ಪಿದಲ್ಲಿಯಾವುದೇ ಮಾಹಿತಿ ನೀಡದೇ ವಿದ್ಯುತ್‌ ಸಂಪರ್ಕ ಕಡಿತಗೊಳಸಲಾಗುವುದು. ಎಲ್ಲವಿದ್ಯುತ್‌ ಬಳಕೆದಾರರು ನಿಗದಿತ ಸಮಯದಲ್ಲಿವಿದ್ಯುತ್‌ ಬಿಲ್‌ ಪಾವತಿಸಿ ಸಹಕರಿಸಬೇಕು ಎಂದು ಶಾಖಾಧಿಕಾರಿ ಎಚ್‌.ಎ. ಗಡಾದ ಪತ್ರಿಕಾ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ