ಆ್ಯಪ್ನಗರ

ಚಿತ್ರಕಲೆಗೆ ಹೆಚ್ಚು ಬೇಡಿಕೆ

ಗದಗ: ಪ್ರಸ್ತುತ ದಿನಗಳಲ್ಲಿಕಲೆಗೆ ಅಪಾರ ಬೇಡಿಕೆ ಇದೆ. ಅಂತಹ ಕಲೆಗಳನ್ನು ಅರಾಧನೆ ಮಾಡುವ ಮತ್ತು ನೋಡುವ ದೃಷ್ಟಿಕೋನವಿರಬೇಕು ಎಂದು ಹಿರಿಯ ಕಲಾವಿದರಾದ ಪ್ರೊ.ಅಶೋಕ ಅಕ್ಕಿ ಹೇಳಿದರು.

Vijaya Karnataka 3 Nov 2019, 5:00 am
ಗದಗ: ಪ್ರಸ್ತುತ ದಿನಗಳಲ್ಲಿಕಲೆಗೆ ಅಪಾರ ಬೇಡಿಕೆ ಇದೆ. ಅಂತಹ ಕಲೆಗಳನ್ನು ಅರಾಧನೆ ಮಾಡುವ ಮತ್ತು ನೋಡುವ ದೃಷ್ಟಿಕೋನವಿರಬೇಕು ಎಂದು ಹಿರಿಯ ಕಲಾವಿದರಾದ ಪ್ರೊ.ಅಶೋಕ ಅಕ್ಕಿ ಹೇಳಿದರು.
Vijaya Karnataka Web high demand for painting
ಚಿತ್ರಕಲೆಗೆ ಹೆಚ್ಚು ಬೇಡಿಕೆ


ನಗರದ ಎಂ.ಎ.ಚೆಟ್ಟಿ ಆರ್ಟ್‌ ಗ್ಯಾಲರಿಯಲ್ಲಿಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರೇಖಾ ಚಂಚಲಕರ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಅದರಂತೆ ಕಲಾವಿದೆ ರೇಖಾ ಚಂಚಲಕರ ತಮ್ಮ ಅಭಿವ್ಯಕ್ತಿಯಲ್ಲಿನವ್ಯ ಕಲೆಯ ಸೊಬಗನ್ನು ಉತ್ತಮವಾಗಿ ರಚಿಸಿದ್ದಾರೆ ಎಂದು

ಕಲಾಕ್ಷೇತ್ರದ ಬೆಳವಣಿಗೆಯಲ್ಲಿಸಹ ಹೃದಯ ಮನೋಭಾವದ ಕೊರತೆ ಇರುವುದರಿಂದ ಅಭಿವೃದ್ಧಿ ಹಿನ್ನಡೆಯಾಗುತ್ತಿದೆ. ಆದ್ದರಿಂದ ಕಲಾ ಮುಖ್ಯಸ್ಥರು ಮತ್ತು ಪೋಷಕರು ಈ ಸಮಸ್ಯೆ ಸರಿಪಡಿಸಲು ಹಾಗೂ ಕಲೆ ಮತ್ತು ಕಲಾವಿದರ ಭವಿಷ್ಯ ಉಜ್ವಲ್‌ ಮಾಡಲು ಶ್ರಮಿಸಬೇಕು. ಇಂದಿನ ತಂತ್ರಜ್ಞಾನದ ದಿನಮಾನಗಳಲ್ಲಿಕಲೆಗೆ ಪ್ರಾಮುಖ್ಯತೆ ಇರುವುದರಿಂದ ಅದರ ಕುರಿತು ಜಾಗೃತಿ ನೀಡಿ ಎಂದು ಕಲಾವಿದರಿಗೆ ಸಲಹೆ ನೀಡಿದರು.

ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯ ಕಿರೇಸೂರ ಮಾತನಾಡಿ, ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಪೂರಕವಾಗಿವೆ. ಅವುಗಳನ್ನು ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ಮನುಷ್ಯ ಮಾನಸಿಕ ಖಿನ್ನತೆಯಿಂದ ಹೊರಬರಲು ಕಲೆಗಳು ಸಹಕಾರಿಯಾಗುತ್ತವೆ. ಆದ್ದರಿಂದ ಕಲೆ ರಚನೆ ಜತೆಗೆ ಕಲೆ ನೋಡುವ ದೃಷ್ಟಿಕೋನವಿದ್ದರೆ ನಿಮ್ಮ ವ್ಯಕ್ತಿತ್ವ ಶೈಲಿ ಬದಲಾಗುತ್ತದೆ ಎಂದರು.

ಯಲಿಶಿರುಂದ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಬಿ.ಕೆ.ಬೆಳಗೇರಿ, ರೇಖಾ ಚಂಚಲಕರ, ಶರಣಪ್ಪ ಬಿ.ಎಚ್‌., ಬಸವರಾಜ ನೇಲಜೇರಿ, ಕೆ.ಎಂ. ಕೃಷ್ಣಾ, ಡಾ.ಬಿ.ಎಲ್‌.ಚವ್ಹಾಣ, ವಿ.ಬಿ.ಪರ್ವತಗೌಡ, ಸಲೀಂ ತೆಗ್ಗಿನಮನಿ, ಸರೋಜ ಮುಂಡೇವಾಡಿ, ಎಸ್‌. ಎಸ್‌. ಕಮ್ಮಾರ, ರಾಮಚಂದ್ರ ಹೆಗಡೆ, ಡಾ.ಚಂದ್ರಶೇಖರ ಹಿರೇಮಠ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ