ಆ್ಯಪ್ನಗರ

ಹೋಳಿ : ಮದ್ಯ ಮಾರಾಟ ನಿಷೇಧ

ಗದಗ : ಹೋಳಿ ಹಬ್ಬದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೂಚನೆಯಂತೆ ಕೆಳಕಂಡ ಪೊಲೀಸ್‌ ಠಾಣೆ ವ್ಯಾಪ್ತಿಗಳಲ್ಲಿ ಸೂಚಿತ ಅವಧಿಯವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Vijaya Karnataka 20 Mar 2019, 5:00 am
ಗದಗ : ಹೋಳಿ ಹಬ್ಬದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೂಚನೆಯಂತೆ ಕೆಳಕಂಡ ಪೊಲೀಸ್‌ ಠಾಣೆ ವ್ಯಾಪ್ತಿಗಳಲ್ಲಿ ಸೂಚಿತ ಅವಧಿಯವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Vijaya Karnataka Web holi prohibition of liquor sales
ಹೋಳಿ : ಮದ್ಯ ಮಾರಾಟ ನಿಷೇಧ


ಮಾ. 24 ರ ಬೆಳಗ್ಗೆ 6 ರಿಂದ ಮಾ. 26ರ ಬೆಳಗ್ಗೆ 6 ರ ವರೆಗೆ ಗದಗ ಶಹರ, ಬೆಟಗೇರಿ ಹಾಗೂ ಬೆಟಗೇರಿ ಬಡಾವಣೆ, ಮಾ. 21 ರ ಮಧ್ಯರಾತ್ರಿಯಿಂದ ಮಾ. 22 ರ ಮಧ್ಯರಾತ್ರಿಯವರೆಗೆ ಗದಗ ಗ್ರಾಮೀಣ ಹಾಗೂ ಮಾ.24 ರ ಮಧ್ಯರಾತ್ರಿಯಿಂದ ಮಾ .25 ರ ಮಧ್ಯರಾತ್ರಿಯವರೆಗೆ ಗದಗ ಶಹರ ಎಸ್‌.ಎಂ. ಕೃಷ್ಣಾ ನಗರ. ಮಾ. 21ರ ಸಂಜೆ 6ರಿಂದ 22ರ ಮಧ್ಯರಾತ್ರಿ ವರೆಗೆ ಮುಳಗುಂದ, ಗಜೇಂದ್ರಗಡ, ಶಿರಹಟ್ಟಿ , ನರಗುಂದ , ಠಾಣೆ ವ್ಯಾಪ್ತಿ , ಲಕ್ಷ್ಮೇಶ್ವರ ಶಿಗ್ಲಿ ಹೊರತುಪಡಿಸಿದ ವ್ಯಾಪ್ತಿ. ಮಾ. 20 ರ ಮಧ್ಯರಾತ್ರಿಯಿಂದ 22 ರ ಮಧÜ್ಯರಾತ್ರಿ ರೋಣ, ಮುಂಡರಗಿ, ಮಾ.20 ರ ಸಂಜೆ 6 ರಿಂದ ಮಾ. 23 ರ ಬೆಳಗ್ಗೆ 6 ರ ವರೆಗೆ ನರೇಗಲ್‌ . ಮಾ. 24ರ ಸಂಜೆ 6 ರಿಂದ ಮಾ. 25 ರ ಮಧ್ಯರಾತ್ರಿಯವರೆಗೆ , ಲಕ್ಷ್ಮೇಶ್ವರ ಶಹರ ಹಾಗೂ ಶಿಗ್ಲಿ ಗ್ರಾಮ. ಸೂಚಿತ ಸ್ಥಳ ಹಾಗೂ ಅವಧಿಯಲ್ಲಿ ಆಯಾ ಠಾಣಾ ವ್ಯಾಪ್ತಿಯಲ್ಲಿ ಯಾವತ್ತೂ ಬಾರ್‌, ಕ್ಲಬ… , ಬಿಯರ್‌ , ಭಾರತೀಯ ತಯಾರಿಕೆ ಮಧÜ್ಯದಂಗಡಿಗಳನ್ನು ಮುಚ್ಚಲು ಅಲ್ಲದೇ ಪರಿಸ್ಥಿತಿ ಅನುಗುಣವಾಗಿ ಸಾರ್ವಜನಿಕ ಶಾಂತತೆ ಕಾಪಾಡಿಕೊಳ್ಳಲು ಪರಿಣಾಮಕಾರಿ ಜಾರಿಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಅಬಕಾರಿ ಉಪ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ