ಆ್ಯಪ್ನಗರ

'ಮಾನವತಾವಾದಿ ಬಸವೇಶ್ವರ' ಪ್ರಶಸ್ತಿ ಪ್ರದಾನ

ಗದಗ : ಸೊಬರದಮಠ ಅವರು ಜನರ ಮಧ್ಯೆ ನಿಂತು ಹೋರಾಟ ನಡೆಸಿದರೆ, ನಾವು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಹೋರಾಟಗಾರರು ಹಾಗೂ ಆಡಳಿತಕ್ಕೂ ಜನ ಹಿತವೇ ಮುಖ್ಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.

Vijaya Karnataka 9 May 2019, 5:00 am
ಗದಗ : ಸೊಬರದಮಠ ಅವರು ಜನರ ಮಧ್ಯೆ ನಿಂತು ಹೋರಾಟ ನಡೆಸಿದರೆ, ನಾವು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಹೋರಾಟಗಾರರು ಹಾಗೂ ಆಡಳಿತಕ್ಕೂ ಜನ ಹಿತವೇ ಮುಖ್ಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
Vijaya Karnataka Web GDG-8RUDRAGOUD15
ಗದಗನ ತೋಂಟದಾರ್ಯ ಮಠದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ 'ಮಾನವತಾ ವಾದಿ ಬಸವೇಶ್ವರ' ಪ್ರಶಸ್ತಿಯನ್ನು ಕಳಸಾ- ಬಂಡೂರಿ ಹೋರಾಟಗಾರ ವೀರೇಶ ಸೊಬರದಮಠ ಅವರಿಗೆ ಪ್ರದಾನ ಮಾಡಲಾಯಿತು.


ಇಲ್ಲಿನ ಜ.ತೋಂಟದಾರ್ಯ ಮಠದಲ್ಲಿ ಮಂಗಳವಾರ ಸಂಜೆ ನಡೆದ ಬಸವ ಜಯಂತಿಯಲ್ಲಿ ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದಿಂದ ಮಹದಾಯಿ ಹೋರಾಟಗಾರ ವೀರೇಶ ಸೊಬರದಮಠರಿಗೆ 'ಮಾನವತಾವಾದಿ ಬಸವೇಶ್ವರ' ಪ್ರಶಸ್ತಿ' ಪ್ರಶಸ್ತಿ ನೀಡಿ ಅವರು ಮಾತನಾಡಿದರು.

ತೋಂಟದ ಸಿದ್ಧರಾಮ ಶ್ರೀಗಳ ಪ್ರಯತ್ನ ಫಲವಾಗಿ ನಾಗನೂರಿನ ರುದ್ರಾಕ್ಷಿ ಮಠ ಹೆಮ್ಮರವಾಗಿ ಬೆಳೆದಿದೆ. ಅವರ ನೇತೃತ್ವದಲ್ಲಿ ತೋಂಟದಾರ್ಯ ಮಠವೂ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದರು.

ಪ್ರೊ.ಸುಮತಿ ಜಯಪ್ಪ ಉಪನ್ಯಾಸ ನೀಡಿ, ತನಗಾಗಿ ಬದುಕುವುದಕ್ಕಿಂತ ಪರರ ಹಿತಕ್ಕಾಗಿ ಬದುಕುವುದರಿಂದ ಜೀವನ ಸಾರ್ಥಕವಾಗುತ್ತದೆ. ಅದಕ್ಕೆ ಲಿಂ.ತೋಂಟದ ಸಿದ್ಧಲಿಂಗ ಸ್ವಾಮಿಗಳು ಉತ್ತಮ ನಿದರ್ಶನ ಎಂದರು. ಸಮಾಜದಲ್ಲಿನ ಕಂದಾಚಾರ, ಮೂಢನಂಬಿಕೆಗಳ ವಿರುದ್ಧ ಜನಜಾಗೃತಿ ಮೂಡಿಸಿದರು. ಮಠವನ್ನು ಎಲ್ಲ ಜಾತಿ, ಸಮುದಾಯಗಳಿಗೆ ಮುಕ್ತಗೊಳಿಸಿದರು. ಸಮ ಸಮಾಜ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದರು. ಅವರ ಅಗಲಿಕೆಯಿಂದ ಅರ್ಧಕ್ಕೆ ನಿಂತ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮುಂದುವರಿಸಬೇಕಿದೆ ಎಂದರು.

ವೀರೇಶ ಸೊಬರದಮಠ ಅವರಿಗೆ ಒಂದು ಲಕ್ಷ ರೂ. ನಗದು ಸಹಿತ 'ಮಾನವತಾವಾದಿ ಬಸವೇಶ್ವರ' ಪ್ರಶಸ್ತಿ' ನೀಡಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಗೌರವಿಸಿದರು.ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಕೂಡ್ಲಿಗಿ ರೇವಣಸಿದ್ದಯ್ಯ ಮರಿದೇವರಮಠ ಅವರಿಂದ ವಚನ ಸಂಗೀತ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ