ಆ್ಯಪ್ನಗರ

ರಸ್ತೆ ಸರಿಪಡಿಸದಿದ್ದರೆ ಬಂದ್‌

ಗದಗ: ಅವಳಿ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿವೆ. 15 ದಿನದಲ್ಲಿಸರಿಪಡಿಸದಿದ್ದರೆ ಹಲವು ಸ್ವಾಮಿಗಳು, ಸಂಘಟನೆಗಳೊಂದಿಗೆ ಗದಗ ಬಂದ್‌ಗೆ ಕರೆ ನೀಡಲಾಗುತ್ತಿದೆ ಎಂದು ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ರಾಜ್ಯಾಧ್ಯಕ್ಷ ಪಿ.ಸುಬ್ರಮಣ್ಯಂ ರೆಡ್ಡಿ ಹೇಳಿದರು.

Vijaya Karnataka 24 Nov 2019, 5:00 am
ಗದಗ: ಅವಳಿ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿವೆ. 15 ದಿನದಲ್ಲಿಸರಿಪಡಿಸದಿದ್ದರೆ ಹಲವು ಸ್ವಾಮಿಗಳು, ಸಂಘಟನೆಗಳೊಂದಿಗೆ ಗದಗ ಬಂದ್‌ಗೆ ಕರೆ ನೀಡಲಾಗುತ್ತಿದೆ ಎಂದು ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ರಾಜ್ಯಾಧ್ಯಕ್ಷ ಪಿ.ಸುಬ್ರಮಣ್ಯಂ ರೆಡ್ಡಿ ಹೇಳಿದರು.
Vijaya Karnataka Web if the road is not repaired
ರಸ್ತೆ ಸರಿಪಡಿಸದಿದ್ದರೆ ಬಂದ್‌


ಶನಿವಾರ ನಗರದ ಪತ್ರಿಕಾ ಭವನದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಕಾಮಗಾರಿ ನೆಪದಲ್ಲಿಅವಳಿ ನಗರದಲ್ಲಿಗುಂಡಿ ಬಿದ್ದಿರುವ ರಸ್ತೆಯಲ್ಲೇ ಜನಪ್ರತಿನಿಧಿಗಳು ಅದನ್ನು ಸರಿಪಡಿಸುವ ಕೆಲಸಕ್ಕೆ ಮಾತ್ರ ಮುಂದಾಗುತ್ತಿಲ್ಲಎಂದು ದೂರಿದರು.

ಈವರೆಗೆ ಮಳೆಯಿಂದ ತತ್ತರಿಸಿದ್ದ ಜನತೆ, ಇದೀಗ ಧೂಳಿನಿಂದ ಕಂಗಾಲಾಗಿದ್ದಾರೆ. ತಗ್ಗುಗಳಿಂದ ಕೂಡಿದ ರಸ್ತೆಯಲ್ಲಿಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳು, ಇತರ ವಾಹನಗಳು ಅವಘಡಕ್ಕೀಡಾಗಿದ್ದರ ಬಗ್ಗೆ ಅನೇಕ ಉದಾಹರಣೆಗಳಿವೆ ಎಂದರು.

ನಗರದ ಹಳೆ ಡಿಸಿ ಆಫೀಸ್‌ನಿಂದ ಬೆಟಗೇರಿ ಕಡೆ ಹೋಗುವ ಪಾಲಾ ಬಾದಾಮಿ ರಸ್ತೆ, ಹೊಸ ಬಸ್‌ ನಿಲ್ದಾಣ ಮಾರ್ಗವಾಗಿ ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜು ಕಡೆ ತೆರಳುವ ರಸ್ತೆಗಳಲ್ಲಿಸಂಚರಿಸುವುದೇ ಕಷ್ಟಸಾಧ್ಯವಾಗಿದೆ. ಅತ್ತ ಕಳಸಾಪುರ ಮೂಲಕ ಮಹಾಲಿಂಗಪುರ ತಲುಪುವ ರಸ್ತೆ, ಗದಗ-ರೋಣ, ರೋಣ-ಗಜೇಂದ್ರಗಡ, ಗಜೇಂದ್ರಗಡ-ಕೋಟುಮಚಗಿ ರಸ್ತೆಗಳಲ್ಲಿಓಡಾಡುವವರು ಪ್ರಾಣದ ಭೀತಿಯಲ್ಲೇ ಓಡಾಡುವಂತಾಗಿದೆ ಎಂದರು.

ಸರಕಾರ ಹಾಗೂ ಜಿಲ್ಲೆಯ ಶಾಸಕ-ಸಚಿವರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ, ಕೂಡಲೇ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಶಿವಕುಮಾರ ರಾಮನಕೊಪ್ಪ ಮಾತನಾಡಿ, ಅವಳಿ ನಗರದಿಂದ ರೋಣ, ಗಜೇಂದ್ರಗಡಕ್ಕೆ ಸಂಪರ್ಕಿಸುವ ರಸ್ತೆಗಳು ರಾಜ್ಯ ಹೆದ್ದಾರಿಯಾಗಿದ್ದರೂ ಅವು ಗ್ರಾಮೀಣ ರಸ್ತೆಗಳಿಗಿಂತ ಕನಿಷ್ಟ ಹಂತಕ್ಕೆ ಬಂದಿವೆ. ಕೂಡಲೇ ಇವುಗಳನ್ನು ಸರಿಪಡಿಸುವಂತೆ ಒತ್ತಾಯಿಸಿದರು.

ರೈತ ಘಟಕದ ರಾಜ್ಯಾಧ್ಯಕ್ಷ ಶಿವಾನಂದ ಪಲ್ಲೇದ ಮಾತನಾಡಿ, ಜಿಲ್ಲಾಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವಳಿ ನಗರದ ಜನತೆಯ ಸಮಸ್ಯೆ ಆಲಿಸಲು ಮುಂದಾಗಿಲ್ಲಎಂದು ಆರೋಪಿಸಿದರು.

ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ರೈತ ಘಟಕದ ರಾಜ್ಯಾಧ್ಯಕ್ಷ ಶಿವಾನಂದ ಪಲ್ಲೇದ, ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಶಿವಾನಂದಯ್ಯ ಹಿರೇಮಠ, ರಾಜ್ಯ ಉಪಾಧ್ಯಕ್ಷ ಶರಣು ಚವಡಿ, ಪ್ರಧಾನ ಕಾರ್ಯದರ್ಶಿ ಯು.ಆರ್‌. ಭೂಸನೂರಮಠ, ಸಂಘಟನಾ ಕಾರ್ಯದರ್ಶಿ ಮಹಾಂತೇಶ ಸಜ್ಜನರ, ರಾಜ್ಯ ಸಂಚಾಲಕ ಪ್ರಭಾಕರ ಹೆಬಸೂರ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ