ಆ್ಯಪ್ನಗರ

ರಫ್ತಿನಿಂದ ಉದ್ಯೋಗ ಹೆಚ್ಚಳ

ಗದಗ: ಪ್ರತಿಯೊಂದು ಜಿಲ್ಲೆಯಲ್ಲಿಒಂದೊಂದು ರೀತಿಯಲ್ಲಿವೈವಿದ್ಯಮಯವಾಗಿ ಕೂಡಿರುತ್ತದೆ. ಪ್ರತಿ ಜಿಲ್ಲೆಯಲ್ಲಿರಫ್ತು ಉತ್ತೇಜನ ಕೇಂದ್ರ ಸ್ಥಾಪನೆಯಾಗಬೇಕು ರಫ್ತುದಾರರಿಗೆ ಉತ್ತೇಜನ ನೀಡಬೇಕು ಅವರಿಗೆ ಹೆಚ್ಚಿನ ಮಾಹಿತಿ ನೀಡುವುದು ಅತೀ ಅವಶ್ಯವಾಗಿದೆ. ರಫ್ತು ಮಾಡುವುದರ ಮೂಲಕ ಉದ್ಯೋಗ ಸೃಷ್ಠಿಯಾಗುತ್ತದೆ ಎಂದು ಜಿಲ್ಲಾಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ದಿನೇಶ ಹೇಳಿದರು.

Vijaya Karnataka 19 Jan 2020, 5:00 am
ಗದಗ: ಪ್ರತಿಯೊಂದು ಜಿಲ್ಲೆಯಲ್ಲಿಒಂದೊಂದು ರೀತಿಯಲ್ಲಿವೈವಿದ್ಯಮಯವಾಗಿ ಕೂಡಿರುತ್ತದೆ. ಪ್ರತಿ ಜಿಲ್ಲೆಯಲ್ಲಿರಫ್ತು ಉತ್ತೇಜನ ಕೇಂದ್ರ ಸ್ಥಾಪನೆಯಾಗಬೇಕು ರಫ್ತುದಾರರಿಗೆ ಉತ್ತೇಜನ ನೀಡಬೇಕು ಅವರಿಗೆ ಹೆಚ್ಚಿನ ಮಾಹಿತಿ ನೀಡುವುದು ಅತೀ ಅವಶ್ಯವಾಗಿದೆ. ರಫ್ತು ಮಾಡುವುದರ ಮೂಲಕ ಉದ್ಯೋಗ ಸೃಷ್ಠಿಯಾಗುತ್ತದೆ ಎಂದು ಜಿಲ್ಲಾಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ದಿನೇಶ ಹೇಳಿದರು.
Vijaya Karnataka Web increase employment from exports
ರಫ್ತಿನಿಂದ ಉದ್ಯೋಗ ಹೆಚ್ಚಳ


ನಗರದ ಜಿಲ್ಲಾಚೇಂಬರ್‌ ಆಫ್‌ ಕಾಮರ್ಸ್‌ ಸಭಾಭವನದಲ್ಲಿನಡೆದ ರಫ್ತು ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನಮ್ಮಲ್ಲಿದೊರೆಯುವಂತಹ ಕಚ್ಚಾವಸ್ತುಗಳನ್ನು ಬಳಕೆ ಮಾಡಿಕೊಳ್ಳಬೇಕು ಮತ್ತು ಉದ್ಯೋಗಾವಕಾಶ ಹೆಚ್ಚಿಸುವುದು ಅತೀ ಅವಶ್ಯವಾಗಿದೆ. ರಫ್ತು ಮಾಡುವುದರಿಂದ ಆರ್ಥಿಕ ಪ್ರಗತಿಯಾಗುತ್ತದೆ. ರಫ್ತು ಕಡ್ಡಾಯವಾಗಿ ಮಾಡಬೇಕು. ಮತ್ತು ರಫ್ತುದಾರರನ್ನು ಬಲಪಡಿಸಬೇಕಾಗಿದೆ. ಒಟ್ಟಾರೆಯಾಗಿ ಕರ್ನಾಟಕದಲ್ಲಿಪ್ರತಿ ಜಿಲ್ಲೆಯಲ್ಲಿರಫ್ತು ಹಬ್‌ ಮಾಡಬೇಕು. ಇದರಿಂದ ಜಿಲ್ಲೆ, ರಾಜ್ಯ ಹಾಗೂ ದೇಶ ಅಭಿವೃದ್ಧಿಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೇಪೇಕ ಬೆಂಗಳೂರ ಉಪನಿರ್ದೇಶಕ ವೆಂಕಟೇಶ ಮಾತನಾಡಿ, ಕರ್ನಾಟಕದಿಂದ ಶೇ. 2 ರಷ್ಟು ಮಾತ್ರ ರಫ್ತು ಮಾಡುತ್ತೇವೆ. ನಮ್ಮ ಭಾಗದಲ್ಲಿಕೃಷಿ ಹಾಗೂ ತೋಟಗಾರಿಕೆಯಿಂದ ಬೆಳೆದ ಉತ್ಪನ್ನಗಳನ್ನು ರಫ್ತು ಮಾಡುತ್ತೇವೆ. ಅದರಲ್ಲಿಪ್ರಮುಖವಾದವುಗಳೆಂದರೆ, ಕಾಫಿ, ಗೋವಿನಜೋಳ,ಗುಲಾಬಿಹೂ, ದಾಳಿಂಬೆ, ಅರಿಷಿಣ, ಕಾಳುಮೆಣಸು ಇನ್ನು ಅನೇಕ ವಸ್ತುಗಳನ್ನು ರಫ್ತು ಮಾಡುತ್ತೇವೆ. ಸರಕಾರ ಕೂಡಾ ಸಾಕಷ್ಟು ಯೋಜನೆ ಜಾರಿಗೆ ತಂದಿರುತ್ತದೆ. ಜತೆಗೆ ಪ್ರೋತ್ಸಾಹ ನೀಡುತ್ತಿದೆ. ರಫ್ತು ಮಾಡುವಂತಹ ವಸ್ತುಗಳ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ರಫ್ತು ಮಾಡಲು ಆಸಕ್ತಿ ಹಾಗೂ ಕಾಳಜಿ ಅವಶ್ಯವಾಗಿದೆ ಎಂದರು.

ಫಾರಿನ ಟ್ರೇಡ್‌ ಡೆವಲಪಮೆಂಟ್‌ ಆಫೀಸರ ಡೈರೆಕ್ಟರ್‌ ಜನರಲ್‌ ಆಫ್‌ ಪಾರಿನ್‌ ಟ್ರೇಡ್‌ ಬೆಂಗಳೂರ ಪಿ.ಎಸ್‌.ಬಿ.ಶಾಸ್ತ್ರೀ ಮಾತನಾಡಿ, ನಾವು ರಫ್ತು ಮಾಡಲು ಮೊದಲು ರಫ್ತು ಮತ್ತು ಆಮದು ಪ್ರಮಾಣ ಪತ್ರ ಹೊಂದಿರಬೇಕಾಗುತ್ತದೆ. ಅದನ್ನು ಪಡೆಯಲು ಜಿಎಸ್‌ಟಿ ಸರ್ಟಿಪೀಕೆಟ್‌, ಆದಾರ್‌ ಕಾರ್ಡ್‌ ಮತ್ತು ಸ್ವಂತ ವಿಳಾಸ ಹಾಗು ಬ್ಯಾಂಕ್‌ ಚಕ್‌ ಅತೀ ಅವಶ್ಯವಾಗಿದೆ. ಆ ಮೂಲಕ ಅನ್‌ಲೈನ್‌ ಮೂಲಕ ನೋಂದಾಯಿಸಿ ನಾವು ಪ್ರಮಾಣ ಪತ್ರ ಪಡೆಯಬೇಕು ನಂತರ ಆ ಮೂಲಕ ವ್ಹಿ.ಟಿ.ಪಿ.ಸಿ. ಡಿ.ಜಿ.ಎಫ್‌.ಟಿಯ ಸದಸ್ಯತ್ವ ಪಡೆದು ಆಮೂಲಕ ರಫ್ತು ಮಾಡಬೇಕಾಗುತ್ತದೆ. ಸರಕಾರ ಪಾಲಸಿಗಳನ್ನು ನಾವು ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ವಸ್ತುಗಳನ್ನು ರಫ್ತು ಮಾಡಿ ನಮ್ಮ ಆರ್ಥಿಕತೆ ಭದ್ರಪಡಿಸಿಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರವೀಣ ರಾಮದುರ್ಗ ಮಾತನಾಡಿ, ಜಿಲ್ಲೆಯಲ್ಲಿಕೃಷಿ ಉತ್ಪನ್ನಗಳು ದೊಡ್ಡ ಪ್ರಮಾಣದಲ್ಲಿಬೆಳೆಯುವುದರಿಂದ ಹೆಚ್ಚಿನ ಪ್ರಮಾಣದಲ್ಲಿರಫ್ತು ಮಾಡಲು ಸಾಧ್ಯವಾಗುತ್ತದೆ. ಅದರ ಸದುಪಯೋಗವನ್ನು ತಾವು ಪಡೆದುಕೊಳ್ಳಬೇಕು. ರಫ್ತು ಮಾಡುವ ಬಗ್ಗೆ ಹುಬ್ಬಳ್ಳಿ, ಧಾರವಾಡ ಹಾಗೂ ಬೆಂಗಳೂರದಲ್ಲಿತರಬೇತಿಗಳನ್ನು ಕೂಡಾ ನೀಡುತ್ತೇವೆ. ಜತೆಗೆ ಅವುಗಳನ್ನು ಹೇಗೆ ರಫ್ತು ಮಾಡಲು ಮತ್ತು ಅವುಗಳ ಸಂರಕ್ಷಣೆಗಳು ಮಾಡುವುದ ಮತ್ತು ವಿಮಾನ ಮತ್ತು ಹಡಗು ಮುಖಾಂತರ ಯಾವ ರೀತಿ ಸಾಗಾಣಿಕೆ ಮಾಡಬೇಕು ಎಂಬುದರ ಬಗ್ಗೆ ಪ್ರಾತ್ಯಕ್ಷಿಯನ್ನು ಕೂಡಾ ತರಬೇತಿಯಲ್ಲಿಮಾಹಿತಿ ನೀಡಲಾಗುತ್ತದೆ ಎಂದರು.

ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಕುರಡಗಿ ವಹಿಸಿದ್ದರು.ತಾತನಗೌಡ ಪಾಟೀಲ, ಜಿ. ಪದ್ಮಕಾಂತ, ಎಸ್‌.ಪಿ. ಸಂಶಿಮಠ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ