ಆ್ಯಪ್ನಗರ

ಹೆಚ್ಚುತ್ತಿರುವ ಕಳ್ಳತನ, ಜನರಲ್ಲಿ ಜಾಗೃತಿ

ಲಕ್ಕುಂಡಿ: ಗ್ರಾಮದಲ್ಲಿಕಳ್ಳತನ ಪ್ರಕರಣಗಳು ಹೆಚ್ಚಿಗೆ ನಡೆಯುತ್ತಿದ್ದು ಈ ಕುರಿತು ಗದಗ ಗ್ರಾಮೀಣ ಪೊಲೀಸ್‌ ಠಾಣೆಯು ಅಪರಾಧ ತಡೆಗಟ್ಟುವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಿತು.

Vijaya Karnataka 13 Jan 2020, 5:00 am
ಲಕ್ಕುಂಡಿ: ಗ್ರಾಮದಲ್ಲಿಕಳ್ಳತನ ಪ್ರಕರಣಗಳು ಹೆಚ್ಚಿಗೆ ನಡೆಯುತ್ತಿದ್ದು ಈ ಕುರಿತು ಗದಗ ಗ್ರಾಮೀಣ ಪೊಲೀಸ್‌ ಠಾಣೆಯು ಅಪರಾಧ ತಡೆಗಟ್ಟುವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಿತು.
Vijaya Karnataka Web increasing theft awareness among people
ಹೆಚ್ಚುತ್ತಿರುವ ಕಳ್ಳತನ, ಜನರಲ್ಲಿ ಜಾಗೃತಿ


ಗ್ರಾಮದ ಪ್ರಮುಖ ಬೀದಿಗಳಲ್ಲಿಸಂಚರಿಸುತ್ತ ಅಪರಾಧವನ್ನು ಹೇಗೆ ತಡೆಗಟ್ಟಬೇಕೆಂದು ಭಿತ್ತಿ ಪತ್ರವನ್ನು ಹಂಚಲಾಯಿತು. ಕುಟುಂಬ ಸಮೇತ ಹೊರಗೆ ಹೋಗುವಾಗ ಬೆಲೆ ಬಾಳುವ ವಸ್ತು, ಹಣವನ್ನು ಜತೆಯಲ್ಲಿತೆಗೆದುಕೊಂಡು ಹೋಗುವುದು ಅಥವಾ ಬ್ಯಾಂಕ್‌ ಲಾಕರ್‌ನಲ್ಲಿಇಡಬೇಕು. ಮನೆ ಬಾಗಿಲಿಗೆ ಡೋರ್‌ ಲಾಕ್‌ ಬೀಗ ಹಾಕುವುದು. ಸಂಶಯಾಸ್ಪದ ವ್ಯಕ್ತಿ ಅಥವಾ ವಸ್ತುಗಳು ಕಂಡಾಗ ಸಮೀಪದ ಠಾಣೆಗೆ ತಿಳಿಸುವುದು. ಬ್ಯಾಂಕುಗಳಲ್ಲಿಹಣ ಕಟ್ಟುವಾಗ, ತೆಗೆಯುವಾಗ ಕಳ್ಳರು ನಿಮ್ಮ ಗಮನ ಬೇರೆ ಕಡೆ ಸೆಳೆದು ಹಣ ಲಪಾಟಿಸುವುದು. ಬೆಳ್ಳಿ ಬಂಗಾರ ಒಡವೆಗಳನ್ನು ಪಾಲಿಸ್‌ ಮಾಡುವುದು ಅಥವಾ ಕಡಿಮೆ ಬೆಲೆಗೆ ತೆಗೆದುಕೊಳ್ಳುವುದಾಗಲಿ ಮಾಡಿ ವಂಚನೆಯಾಗುವುದು ಮುಂತಾದ ತಿಳಿವಳಿಕೆಗಳನ್ನು ಲಕ್ಕುಂಡಿ ಬಿಟ್‌ ಪೊಲೀಸ್‌ ಸಿಬ್ಬಂದಿ ಎಚ್‌.ಎಸ್‌.ಕುರಿ ಹಾಗೂ ಎಲ್‌. ಎಸ್‌ ಲಮಾಣೆ ಪಾಲ್ಗೊಂಡಿದ್ದರು.

ಗ್ರಾಪಂ ಸದಸ್ಯ ಎಂ. ಎಂ. ಹುಬ್ಬಳ್ಳಿ, ಗ್ರಾ.ಪಂ ಮಾಜಿ ಸದಸ್ಯ ಐ. ಎನ್‌.ಕುಂಬಾರ, ಮಾಜಿ ಗ್ರಾ.ಪಂ ಅಧ್ಯಕ್ಷ ಕೆ.ಎಸ್‌. ಪೂಜಾರ , ದಲಿತ ವಿದ್ಯಾರ್ಥಿ ಪರಿಷತ್‌ ಸಂಚಾಲಕ ಬಸವರಾಜ ಮುಳ್ಳಾಳ ಮಾತನಾಡಿ, ಗ್ರಾಮದಲ್ಲಿಕಳ್ಳತನ ಪ್ರಕರಣಗಳು ನಡೆಯುತ್ತಿದ್ದು ಸಾರ್ವಜನಿಕರು ಪೊಲೀಸ್‌ ಇಲಾಖೆ ತಿಳಿವಳಿಕೆಯಂತೆ ನಡೆದುಕೊಳ್ಳಬೇಕು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ