ಆ್ಯಪ್ನಗರ

ಮಾಹಿತಿ, ತಂತ್ರಜ್ಞಾನಕ್ಕೆ ಹೆಚ್ಚಿನ ಬೇಡಿಕೆ

ಲಕ್ಷ್ಮೇಶ್ವರ : ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನಕ್ಕೆ ಎಲ್ಲಿಲ್ಲದ ಬೇಡಿಕೆ ಇದ್ದು, ಗ್ರಾಮೀಣ ಪ್ರದೇಶಗಳ ಬಡ ವಿದ್ಯಾರ್ಥಿಗಳಿಗೂ ತಂತ್ರಜ್ಞಾನದ ಶಿಕ್ಷ ಣ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಪಟ್ಟಣದಲ್ಲಿ ಎಂಜನಿಯರಿಂಗ್‌ ಕಾಲೇಜು ಆರಂಭಿಸಿದ್ದು ಶ್ಲಾಘನೀಯ ಎಂದು ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯೆ ಎಸ್‌.ಪಿ. ಯಲವಗಿ ಹೇಳಿದರು.

Vijaya Karnataka 25 Mar 2019, 5:00 am
ಲಕ್ಷ್ಮೇಶ್ವರ : ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನಕ್ಕೆ ಎಲ್ಲಿಲ್ಲದ ಬೇಡಿಕೆ ಇದ್ದು, ಗ್ರಾಮೀಣ ಪ್ರದೇಶಗಳ ಬಡ ವಿದ್ಯಾರ್ಥಿಗಳಿಗೂ ತಂತ್ರಜ್ಞಾನದ ಶಿಕ್ಷ ಣ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಪಟ್ಟಣದಲ್ಲಿ ಎಂಜನಿಯರಿಂಗ್‌ ಕಾಲೇಜು ಆರಂಭಿಸಿದ್ದು ಶ್ಲಾಘನೀಯ ಎಂದು ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯೆ ಎಸ್‌.ಪಿ. ಯಲವಗಿ ಹೇಳಿದರು.
Vijaya Karnataka Web GDG-22LXR03
ಲಕ್ಷ್ಮೇಶ್ವರದ ಶ್ರೀಮತಿ ಕಮಲಾ ಶ್ರೀ ವೆಂಕಪ್ಪ ಅಗಡಿ ಎಂಜನಿಯರಿಂಗ್‌ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ವಿತರಿಸಲಾಯಿತು.


ಅವರು ಪಟ್ಟಣದ ಶ್ರೀಮತಿ ಕಮಲಾ ಶ್ರೀ ವೆಂಕಪ್ಪ ಅಗಡಿ ಎಂಜನಿಯರಿಂಗ್‌ ಕಾಲೇಜಿನಲ್ಲಿ ಸ್ಕಾಲರ್‌ ಶಿಪ್‌ ವಿತರಣೆ ಮತ್ತು ಪಾಲಕರ ಸಭೆಯಲ್ಲಿ ಭಾಗವಹಿಸಿದ ಮಾತನಾಡಿದ ಅವರು ಅಗಡಿ ಎಂಜನಿಯರಿಂಗ್‌ ಕಾಲೇಜು ಆಡಳಿತ ಮಂಡಳಿಯವರು ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷ ಣ ಜತೆಗೆ ಸ್ಕಾಲರ್‌ ಶಿಪ್‌ ನೀಡುವ ಕಾರ್ಯ ಶ್ಲಾಘನೀಯ. ತಂತ್ರಜ್ಞಾನದ ಶಿಕ್ಷ ಣ ಬಡ ವಿದ್ಯಾರ್ಥಿಗಳಿಗೆ ಎಂಜನಿಯರಿಂಗ್‌, ವೈದ್ಯಕೀಯ ಶಿಕ್ಷ ಣ ಗಗನ ಕುಸುಮವಾಗಿದೆ. ವಿದ್ಯಾರ್ಥಿಗಳು ಕಾಲೇಜಿನ ಸೌಲಭ್ಯಗಳ ಸದುಪಯೋಗ ಪಡಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಪ್ರಾಚಾರ್ಯ ಡಾ. ಉದಯಕುಮಾರ ಹಂಪಣ್ಣವರ ಮಾತನಾಡಿ, ಕಾಲೇಜಿನ ಆಡಳಿತ ಮಂಡಳಿ ವತಿಯಿಂದ 40 ಲಕ್ಷ ರೂ. ಗಳಲ್ಲಿ 135 ವಿದ್ಯಾರ್ಥಿಗಳಿಗೆ ಸ್ಕಾಲರ್‌ ಶಿಪ್‌ ವಿತರಿಸಲಾಗುತ್ತದೆ. ಪ್ರತಿವರ್ಷ ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಂಪನಿಗಳು ಸ್ಕಾಲರ್‌ ಶಿಪ್‌ ನೀಡುತ್ತಿವೆ. ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿ ಚೈತ್ರಾ ಖಾನಾಮಠ ಅವಳಿಗೆ ಆಡಳಿತ ಮಂಡಳಿ ಉಚಿತ ಶಿಕ್ಷ ಣ ನೀಡುತ್ತಿದೆ. ಈ ನಿಟ್ಟಿನಲ್ಲಿ 5 ಸಾವಿರ ರಾರ‍ಯಂಕಿಂಗ್‌ನೊಳಗಡೆ ಇರುವ ವಿದ್ಯಾರ್ಥಿಗಳಿಗೆ ಸಂಸ್ಥೆ ಶಿಕ್ಷ ಣಕ್ಕೆ ಬೆಂಬಲ ನೀಡುತ್ತಿದೆ ಆದ್ದರಿಂದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಆಡಳಿತಾಧಿಕಾರಿ ಡಾ. ಪ್ರೇಮಾನಂದ ಶೆಟ್ಟಿ, ಡಾ. ಎನ್‌. ಹಯವದನ, ಡಾ. ದೇವೇಂದ್ರಪ್ಪ ಕೆ,ಶ್ರೀನಿವಾಸ್‌ ರಜಪೂತ, ಗಿರೀಶ ಯತ್ನಳ್ಳಿ, ಸೋಮಶೇಖರ ಕೆರಿಮನಿ, ಸಿ.ಎಂ. ಕಗ್ಗಲಗೌಡರ, ಎಸ್‌.ಎಫ್‌. ಕೊಡ್ಲಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ