ಆ್ಯಪ್ನಗರ

ಕನ್ನಡ ಸಾಹಿತ್ಯ ಭವನಕ್ಕೆ ಶಿಲಾನ್ಯಾಸ

ಲಕ್ಷ್ಮೇಶ್ವರ : ಕನ್ನಡ ಭಾಷೆ ತನ್ನದೇ ಆದ ಇತಿಹಾಸ, ಪರಂಪರೆಯನ್ನು ಹೊಂದಿದ್ದು, ಕನ್ನಡ ನಾಡು, ನುಡಿ ಬೆಳವಣಿಗಾಗಿ ಎಲ್ಲರೂ ಶ್ರಮೀಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮನು ಬಳಿಗಾರ ಹೇಳಿದರು. ಅವರು ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಭವನದ ಶಿಲಾನ್ಯಾಸ ಹಾಗೂ ಭೂಮಿಪೂಜೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

Vijaya Karnataka 18 Jun 2019, 5:00 am
ಲಕ್ಷ್ಮೇಶ್ವರ : ಕನ್ನಡ ಭಾಷೆ ತನ್ನದೇ ಆದ ಇತಿಹಾಸ, ಪರಂಪರೆಯನ್ನು ಹೊಂದಿದ್ದು, ಕನ್ನಡ ನಾಡು, ನುಡಿ ಬೆಳವಣಿಗಾಗಿ ಎಲ್ಲರೂ ಶ್ರಮೀಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮನು ಬಳಿಗಾರ ಹೇಳಿದರು. ಅವರು ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಭವನದ ಶಿಲಾನ್ಯಾಸ ಹಾಗೂ ಭೂಮಿಪೂಜೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
Vijaya Karnataka Web GDG-17LXR03
ಲಕ್ಷ್ಮೇಶ್ವರದಲ್ಲಿ ಕನ್ನಡ ಸಾಹಿತ್ಯ ಭವನದ ಶಿಲಾನ್ಯಾಸ ಹಾಗೂ ಭೂಮಿಪೂಜೆ ಕಾರ್ಯಕ್ರಮವನ್ನು ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ನೆರವೇರಿಸಿದರು.


6 ರಿಂದ 8 ತಿಂಗಳ ಅವಧಿಯಲ್ಲಿ ಪಟ್ಟಣದಲ್ಲಿ ಗುಣಮಟ್ಟದ, ಮಾದರಿ ಕನ್ನಡ ಸಾಹಿತ್ಯ ಭವನ ನಿರ್ಮಾಣ ಮಾಡಬೇಕು ಎಂದು 50 ಲಕ್ಷ ರೂ. ಆಡಳಿತಾತ್ಮಕ ಯೋಜನೆ ರೂಪಿಸಲಾಗಿದೆ ಎಂದರು.

ನಾಡಗೀತೆಯನ್ನು 2 ನಿಮಿಷ 20 ಸೆಕೆಂಡ್‌ಗಳಲ್ಲಿ ಮುಗಿಸಬೇಕು. ಆಲಾಪ ನುಡಿಯನ್ನು ತಿರುಗಿಸಿ ಹೇಳುವುದು ಮಾಡಬಾರದು. ನಾಡಗೀತೆ ಕಡ್ಡಾಯವಾಗಬೇಕು 2 ನಿಮಿಷ 20 ಸೆಕೆಂಡ್‌ಗಳಲ್ಲಿ ಮುಗಿಸಬೇಕು ಆದೇಶ ನೀಡಬೇಕು ಎಂದು ಸರಕಾರಕ್ಕೆ ಪ್ರಸ್ತಾವಣೆ ಕಳುಹಿಸಲಾಗಿದೆ ಎಂದರು.

ಶಾಸಕ ರಾಮಣ್ಣ ಲಮಾಣಿ ಅಧ್ಯಕ್ಷ ತೆ ವಹಿಸಿಕೊಂಡಿದ್ದರು. ಜಿಪಂ ಅಧ್ಯಕ್ಷ ಎಸ್‌.ಪಿ.ಬಳಿಗಾರ, ಜಿಲ್ಲಾ ಕಸಾಪ ಅಧ್ಯಕ್ಷ ಶರಣು ಗೊಗೇರಿ, ಜಿಪಂ ಉಪಾಧ್ಯಕ್ಷೆ ಪವಿತ್ರಾ ಸಂಕನದಾಸರ, ಮಾಜಿ ಶಾಸಕ ಜಿ.ಎಸ್‌.ಗಡ್ಡದೇವರಮಠ, ಕೆ.ಬಿ.ತಳಗೇರಿ, ಸಿ.ವಿ.ಕೆರಮನಿ, ಮುಕ್ತಾ ಕಾಗಲಿ, ಪ್ರೇಮಕ್ಕ ಬಿಂಕದಕಟ್ಟಿ, ಅಶ್ವಿನಿ ಅಂಕಲಕೋಟಿ, ಪ್ರವೀಣ ಬಾಳಿಕಾಯಿ, ಎಂ.ಕೆ.ಲಮಾಣಿ, ಅರ್ಜುನ ಗೋಳಸಂಗಿ ಇತರರು ಇದ್ದರು.

ತಾಲೂಕು ಅಧ್ಯಕ್ಷೆ ಜಯಶ್ರಿ ಹೊಸಮನಿ ಸ್ವಾಗತಿಸಿದರು. ಈಶ್ವರ ಮೆಡ್ಲೇರಿ ನಿರ್ವಹಿಸಿದರು.

ಹಿರಿಯರ ನಿರ್ಲಕ್ಷ್ಯ:ಆರೋಪ:
ಲಕ್ಷ್ಮೇಶ್ವರದ ಕನ್ನಡ ಸಾಹಿತ್ಯ ಭವನದ ಶಿಲಾನ್ಯಾಸ ಹಾಗೂ ಭೂಮಿಪೂಜೆ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಅವರು ಹೆಸರನ್ನು ಬಿಡಲಾಗಿದೆ. ಪಟ್ಟಣದ ಹಿರಿಯರನ್ನು ಕಡೆಗಣಿಸಲಾಗಿದೆ ಎಂದು ಅವರ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಕಾರ್ಯಕ್ರಮದಲ್ಲಿ ಸ್ವಲ್ಪ ಗೊಂದಲ ಉಂಟಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ