ಆ್ಯಪ್ನಗರ

ರಾಷ್ಟ್ರೀಯ ವಿಪತ್ತು ಘೋಷಣೆಗೆ ಒತ್ತಾಯ

ನರಗುಂದ : ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಜನರ ಬದುಕು ಬೀದಿಗೆ ಬಂದಿದ್ದು ಕೇಂದ್ರ ಗೃಹ ಸಚಿವರು,ಹಣಕಾಸು ಸಚಿವರು ಪ್ರಹಾವ ಪೀಡಿತ ಪ್ರದೇಶಗಳ ವೀಕ್ಷ ಣೆ ಮಾಡಿದರೂ ಈವರೆಗೆ ನೆರವು ಘೋಷಣೆ ಮಾಡದೆ ಇರುವುದು ದುರಂತ. ಕೂಡಲೆ ಸಂಸದರ ನಿಯೋಗ ಪ್ರಧಾನಿ ಭೇಟಿಯಾಗಿ ರಾಷ್ಟ್ರೀಯ ವಿಪತ್ತು ಎಂದು

Vijaya Karnataka 20 Aug 2019, 5:00 am
ನರಗುಂದ : ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಜನರ ಬದುಕು ಬೀದಿಗೆ ಬಂದಿದ್ದು ಕೇಂದ್ರ ಗೃಹ ಸಚಿವರು,ಹಣಕಾಸು ಸಚಿವರು ಪ್ರಹಾವ ಪೀಡಿತ ಪ್ರದೇಶಗಳ ವೀಕ್ಷ ಣೆ ಮಾಡಿದರೂ ಈವರೆಗೆ ನೆರವು ಘೋಷಣೆ ಮಾಡದೆ ಇರುವುದು ದುರಂತ. ಕೂಡಲೆ ಸಂಸದರ ನಿಯೋಗ ಪ್ರಧಾನಿ ಭೇಟಿಯಾಗಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ 20ಸಾವಿರ ಕೊಟಿ ನೆರವು ಬಿಡುಗಡೆಗೆ ಒತ್ತಾಯಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕರುಬುರ ಶಾಂತಕುಮಾರ ಒತ್ತಾಯಿಸಿದರು.
Vijaya Karnataka Web insist on a national disaster declaration
ರಾಷ್ಟ್ರೀಯ ವಿಪತ್ತು ಘೋಷಣೆಗೆ ಒತ್ತಾಯ


ನೆರೆ ಪ್ರದೇಶಕ್ಕೆ ಭೇಟಿ ನೀಡಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮನೆ,ಆಸ್ತಿ, ಬೆಳೆ ನಷ್ಟವಾಗಿದ್ದು ಕುಡಲೆ ಕೃಷಿ ಸಾಲ ಮನ್ನಾ ಮಾಡಬೇಕು. ಹೊಸ ಸಾಲ ನೀಡಲು ಬ್ಯಾಂಕುಗಳಿಗೆ ಸೂಚಿಸಬೇಕು ಎಂದರು.

ರಾಜ್ಯದಲ್ಲಿ 2ಲಕ್ಷ ಹೆಕ್ಟೇರ್‌ ಕಬ್ಬು ಬೆಳೆ ಪ್ರವಾಹಕ್ಕೆ ಕೊಚ್ಚಿ ಹೋಗಿ ಹಾನಿಯಾಗಿದೆ. ಬಾಳೆ, ಹತ್ತಿ,ಬತ್ತ, ಗೋವಿನಜೋಳದ ಬೆಳೆ ಹಾನಿಯಾಗಿವೆ. ಬೆಳೆ ಹಾನಿ ಸಮೀಕ್ಷೆ ಕೈಗೊಂಡು ನಿರಾಶ್ರೀತರ ಆತಂಕ ದೂರಮಾಡಬೇಕು. ಪ್ರವಾಹ ಪ್ರದೇಶಗಳಿಗೆ ಕೊಚ್ಚಿ ಹೋದ ಟಿಸಿಗಳನ್ನು ಅಳವಡಿಸಿ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಬೆಳಗಾವಿಯ ಸುರೇಶ ಪಾಟೀಲ, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ, ಗದುಗಿನ ಸುರೇಶ ಹಲವಾಡಲಿ ಮುಂತಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ