ಆ್ಯಪ್ನಗರ

ರೈತರ ಸಾಲ ಮನ್ನಾ ಮಾಡಲು ಒತ್ತಾಯ

ರೋಣ: ಸರಕಾರದ ಆದೇಶದಂತೆ 2 ಲಕ್ಷ ರೂ.ಸಾಲ ಮನ್ನಾ ಯೋಜನೆಯಡಿ ಈಗ ಕೇವಲ ಶೇ.30 ರಷ್ಟು ರೈತರ ಸಾಲ ಮನ್ನಾ ಮಾಡಲಾಗಿದ್ದು,ಇನ್ನುಳಿದ ಶೇ.70 ರೈತರ ಸಾಲ ಮನ್ನಾ ಆಗಿಲ್ಲ.ಎಲ್ಲರೈತರಿಗೂ ತಕ್ಷಣದಿಂದ ಅನ್ವಯ ಮಾಡಬೇಕು ಎಂದು ಕರ್ನಾಟಕ ರೈತ ಸೇನೆಯಿಂದ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು.

Vijaya Karnataka 23 Jan 2020, 5:00 am
ರೋಣ: ಸರಕಾರದ ಆದೇಶದಂತೆ 2 ಲಕ್ಷ ರೂ.ಸಾಲ ಮನ್ನಾ ಯೋಜನೆಯಡಿ ಈಗ ಕೇವಲ ಶೇ.30 ರಷ್ಟು ರೈತರ ಸಾಲ ಮನ್ನಾ ಮಾಡಲಾಗಿದ್ದು,ಇನ್ನುಳಿದ ಶೇ.70 ರೈತರ ಸಾಲ ಮನ್ನಾ ಆಗಿಲ್ಲ.ಎಲ್ಲರೈತರಿಗೂ ತಕ್ಷಣದಿಂದ ಅನ್ವಯ ಮಾಡಬೇಕು ಎಂದು ಕರ್ನಾಟಕ ರೈತ ಸೇನೆಯಿಂದ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು.
Vijaya Karnataka Web insist on farmers loan waiver
ರೈತರ ಸಾಲ ಮನ್ನಾ ಮಾಡಲು ಒತ್ತಾಯ


ಉಪಾಧ್ಯಕ್ಷ ಎಸ್‌.ಜಿ.ಭೋಪಳಾಪೂರ ಮಾತನಾಡಿ, ಸಾಲ ಮನ್ನಾ ಯೋಜನೆಯಿಂದ ತಾಲೂಕಿನ ಬಹುತೇಕ ರೈತರು ವಂಚಿತರಾಗುತ್ತಿದ್ದು, ನಾಮಕಾವಸ್ತೆ ಶೇ.30 ರಷ್ಟು ರೈತರ ಸಾಲ ಮನ್ನಾ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಇನ್ನುಳಿದ ರೈತರು ಬ್ಯಾಂಕ್‌, ತಹಸೀಲ್ದಾರ ಕಚೇರಿಗೆ ನಿತ್ಯ ಅಲೆದು ಸುಸ್ತಾಗಿದ್ದರೂ ಯಾವುದೇ ಪ್ರಯೋಜನ ದೊರೆಯುತ್ತಿಲ್ಲ. ಸಂಬಂದಿಸಿದ ಅಧಿಕಾರಿಗಳನ್ನು ನಮ್ಮ ಸಾಲ ಏಕೆ ಮನ್ನಾ ವ್ಯಾಪ್ತಿಯಲ್ಲಿಬಂದಿಲ್ಲವೆಂದು ಪ್ರಶ್ನಿಸಿದರೆ, ಅಧಿಕಾರಿಗಳಿಂದ ಸಿದ್ದ ಉತ್ತರವಾದ ರೇಷನ್‌ ಕಾರ್ಡ್‌ ಲಗತ್ತಿಸಿಲ್ಲ, ಆಧಾರ್‌ ಕಾರ್ಡ್‌ ಲಿಂಕ್‌ ಆಗಿಲ್ಲಎಂದು ಬ್ಯಾಂಕಿನವರು ಕಾರಣ ಕೊಟ್ಟಿದ್ದಾರೆ.ಇದು ರೈತರಿಂದ ತಪ್ಪಿಸಿಕೊಳ್ಳುವ ಹಾಗೂ ಅರ್ಹ ರೈತರನ್ನು ವಂಚಿಸುವ ಕ್ರಮವಾಗಿದ್ದು, ಇರುವ ದಾಖಲೆಗಳ ಮುಖಾಂತರ ಅರ್ಹತೆ ಹೊಂದಿರುವ ಎಲ್ಲರೈತರ ಸಾಲ ಮನ್ನಾ ಮಾಡಬೇಕು ಎಂದರು.

ತಾಲೂಕಿನಲ್ಲಿಮಲಪ್ರಭೆ ಹಾಗೂ ಬೆಣ್ಣೆಹಳ್ಳಗಳ ಪ್ರವಾಹದಿಂದ ರೈತರು ಸಂಕಷ್ಟದಲ್ಲಿರುವುದು ಜಗಜ್ಜಾಹಿರವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿಸಾಲ ತುಂಬುವ ಶಕ್ತಿ ರೈತರಲ್ಲಿಇಲ್ಲ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಘೊಷಣೆ ಅನುಷ್ಠಾನ ಮಾಡಬೇಕು. ಈ ಸರಕಾರವೂ ರೈತರ ಬಗ್ಗೆ ಕಾಳಜಿ ತೋರುವ ಮೂಲಕ ಸಾಲ ಮನ್ನಾ ಮಾಡಬೇಕು. ಸಾಲ ವಸೂಲಾತಿಯನ್ನು ತಕ್ಷಣದಿಂದಲೇ ನಿಲ್ಲಿಸಬೇಕು. ಈ ಕುರಿತು ಸರಕಾರ ಸಂಬಂದಿಸಿದ ಇಲಾಖೆಗಳಿಗೆ ಹಾಗೂ ಬ್ಯಾಂಕುಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ