ಆ್ಯಪ್ನಗರ

‘ಗೃಹಭಾಗ್ಯ’ಅನುದಾನ ಬಿಡುಗಡೆಗೆ ಒತ್ತಾಯ

ಗದಗ: ಪೌರಾಯುಕ್ತರು ಬಡ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆ ಕೇಂದ್ರ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಿ ಜೈ ಭೀಮ ಸಂಘರ್ಷ ಸಮಿತಿಯಿಂದ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.

Vijaya Karnataka 25 Nov 2020, 5:00 am
ಗದಗ: ಪೌರಾಯುಕ್ತರು ಬಡ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆ ಕೇಂದ್ರ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಿ ಜೈ ಭೀಮ ಸಂಘರ್ಷ ಸಮಿತಿಯಿಂದ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web 24RUDRAGOUD5_25
ಗೃಹ ಭಾಗ್ಯ ಯೋಜನೆಯ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಿ ಗದಗನಲ್ಲಿ ಪೌರಾಯುಕ್ತರಿಗೆ ಪೌರಕಾರ್ಮಿಕರು
ಮನವಿ ಸಲ್ಲಿಸಿದರು.


ನಗರಸಭೆ ಪೌರಕಾರ್ಮಿಕರು ಗೃಹ ಭಾಗ್ಯ ಯೋಜನೆಯಲ್ಲಿಮನೆ ಕಟ್ಟಿಸಿದ್ದಾರೆ. ಕೇಂದ್ರ ಸರಕಾರದ ಯೋಜನೆಯಾಗಿದ್ದು ಬೇರೆ ಕಡೆಗೆ ಸಾಲ ಮಾಡಿ ಪೌರಕಾರ್ಮಿಕರು ಮನೆ ಕಟ್ಟಿಸಿದ್ದಾರೆ. ಆದರೆ 2 ವರ್ಷಗಳಿಂದ ಕೇಂದ್ರದ ಅನುದಾನ 90 ಸಾವಿರ ರೂ. ಬಿಡುಗಡೆಯಾಗಿದೆ. ಪೌರಕಾರ್ಮಿಕರು ಹೊರಗಡೆ ಸಾಲ ಮಾಡಿದ್ದರಿಂದ ಅದಕ್ಕೆ ಬಡ್ಡಿ ಕಟ್ಟುತ್ತಿದ್ದಾರೆ. ಇದರಿಂದ ತಮ್ಮ ಸಂಬಳದಲ್ಲಿಬಡ್ಡಿ ಕಟ್ಟಿ ಜೀವನ ಸಾಗಿಸುವುದು ತೊಂದರೆಯಾಗಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಪೌರಾಯುಕ್ತರು ಬಡ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ ಕೇಂದ್ರ ಅನುದಾನ ಬಿಡುಗಡೆ ಕ್ರಮ ಕೈಗೊಂಡು ಪೌರಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.

ಜೈ ಭೀಮ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಗಣೇಶ ಹುಬ್ಬಳ್ಳಿ, ಜಿಲ್ಲಾಪೌರಕಾರ್ಮಿಕರ ಸಂಘದ ಅಧ್ಯಕ್ಷ ವಿರುಪಾಕ್ಷ ರಾಮಗಿರಿ, ಉಪಾಧ್ಯಕ್ಷ ಮಂಜುನಾಥ ತೌಜಲ್‌, ವಿನಾಯಕ ಬಳ್ಳಾರಿ, ರಾಷ್ಟ್ರೀನ್‌ ಜೋಸೆಫ್‌, ಹೇಮಂತ ಹುಬ್ಬಳ್ಳಿ, ರಾಜೇಶ ವಿ. ಶೆಟ್ಟರ್‌, ವಿಜಯ ಪೂಜಾರ, ಬಸವರಾಜ ಬದಾಮಿ, ದಲಿತ ಮುಖಂಡರಾದ ಬಾಬು ಬಳ್ಳಾರಿ, ಪ್ರೇಮ ಹುಬ್ಬಳ್ಳಿ, ಶ್ರೀಕಾಂತ, ವಿಶ್ವನಾಥ ಹುಬ್ಬಳ್ಳಿ, ವಿಶ್ವ ಹೊಸಮನಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ