ಆ್ಯಪ್ನಗರ

ಮುಖ್ಯಾಧಿಕಾರಿ ಅಮಾನತ್ತಿಗೆ ಆಗ್ರಹ

ಶಿರಹಟ್ಟಿ : ಪಪಂ ಮುಖ್ಯಾಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡುವಂತೆ ಆಗ್ರಹಿಸಿ ಶುಕ್ರವಾರ ತಾಲೂಕು ಕರವೇಯಿಂದ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Vijaya Karnataka 12 Oct 2019, 5:00 am
ಶಿರಹಟ್ಟಿ : ಪಪಂ ಮುಖ್ಯಾಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡುವಂತೆ ಆಗ್ರಹಿಸಿ ಶುಕ್ರವಾರ ತಾಲೂಕು ಕರವೇಯಿಂದ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web inspector general of police
ಮುಖ್ಯಾಧಿಕಾರಿ ಅಮಾನತ್ತಿಗೆ ಆಗ್ರಹ


ತಾಲೂಕು ಕರವೇ ಅಧ್ಯಕ್ಷ ರಫಿಕ ಕೆರಿಮನಿ ಮಾತನಾಡಿ, ಪಪಂನಲ್ಲಿಪಂಪ್‌ ಆಪರೇಟರ್‌ ಆಗಿ ಕಾರ‍್ಯನಿರ್ವಹಿಸುತ್ತಿದ್ದ ಬಸವರಾಜ ಹೊಸೂರ ಅವರು ಮುಖ್ಯಾಧಿಕಾರಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಡಿದ್ದಾರೆ. ಈ ಕುರಿತು ಆರೋಪಿಯನ್ನು ಕೂಡಲೇ ಸರಕಾರಿ ಸೇವೆಯಿಂದ ಅಮಾನತುಗೊಳಿಸಬೇಕು ಮತ್ತು ಆರೋಪಿಯನ್ನು ಕೂಡಲೇ ಬಂಧಿಸಬೇಕು. 7ದಿನದಲ್ಲಿಬಂದಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಕಲಾವತಿ ನಾವಿ, ಸಾಯಿರಾಬಾನು ಒಂಟಿ, ಶೋಭಾ ಬಳಿಗೇರ, ರೇಖಾ ಮುಧೋಳಕರ, ವಿಜಯವ್ವ ತಳವಾರ, ಶೋಭಾ ಮೂರಶಿಳ್ಳಿ, ಯೋಗಿತಾ ದೇಸಾಯಿಪಟ್ಟಿ, ವೀಣಾ ಮುಧೋಳಕರ, ಗೌಸ ಕಲಾವಂತ, ಮನಸೂರ ಮಕಾನದಾರ, ಖಾದರ ಟಪಾಲ, ದೇವಪ್ಪ ಬಟ್ಟೂರ, ದಾದಾಪೀರ ಮುಳಗುಂದ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ