ಆ್ಯಪ್ನಗರ

ಕೆರೆಯ ಸುತ್ತ ಸ್ವಚ್ಛತೆ ಕಾಪಾಡಲು ಸೂಚನೆ

ಲಕ್ಕುಂಡಿ: ಇಲ್ಲಿಯ ಹಾಲಗೊಂಡ ಬಸವೇಶ್ವರ ಕೆರೆ, ದಂಡಿನ ದುರ್ಗಾದೇವಿ ಕೆರೆಯ ಸುತ್ತ ಮುತ್ತ ಗ್ರಾಮಸ್ಥರು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಗ್ರಾಮ ಪಂಚಾಯತಿ ಪ್ರಕಟಣೆ ನೀಡಿದೆ

Vijaya Karnataka 25 Sep 2019, 5:00 am
ಲಕ್ಕುಂಡಿ: ಇಲ್ಲಿಯ ಹಾಲಗೊಂಡ ಬಸವೇಶ್ವರ ಕೆರೆ, ದಂಡಿನ ದುರ್ಗಾದೇವಿ ಕೆರೆಯ ಸುತ್ತ ಮುತ್ತ ಗ್ರಾಮಸ್ಥರು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಗ್ರಾಮ ಪಂಚಾಯತಿ ಪ್ರಕಟಣೆ ನೀಡಿದೆ
Vijaya Karnataka Web instructions to maintain cleanliness around the lake
ಕೆರೆಯ ಸುತ್ತ ಸ್ವಚ್ಛತೆ ಕಾಪಾಡಲು ಸೂಚನೆ


ಈಗಾಗಲೇ ಬಸವೇಶ್ವರ ಕೆರೆಯನ್ನು ತುಂಗಾಭದ್ರಾ ಜಲಾಶಯದಿಂದ ತುಂಬಿಸಲಾಗಿದೆ. ದುರ್ಗಾದೇವಿ ಕೆರೆ ಇನ್ನು ಕೆಲವೇ ದಿನಗಳಲ್ಲಿತುಂಬಲಿದೆ. ಆದ್ದರಿಂದ ಈ ಎರಡು ಕೆರೆಗಳ ನೀರು ಮಲೀನಗೊಳ್ಳದಂತೆ ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಕೆರೆಗಳ ಸುತ್ತಮುತ್ತ ಇರುವ ತಿಪ್ಪೆ ತೆಗೆಯಬೇಕು. ಕೆರೆಯ ಸುತ್ತ ಮಲಮೂತ್ರ ವಿಸರ್ಜನೆ ಮಾಡಬಾರದು. ಗ್ರಾಮದ ಗಟಾರುಗಳಲ್ಲಿಹೋಟೆಲ್‌ ಮಾಲಕರು ಪ್ಲಾಸ್ಟಿಕ್‌ ಕಪ್‌, ಕಸ , ಕಡ್ಡಿ ಹಾಕಬಾರದು ಮೂರು ದಿನಗಳ ಒಳಗಾಗಿ ತಿಪ್ಪೆಗಳನ್ನು ತೆಗೆಯಬೇಕು ಎಂದು ಗ್ರಾಪಂ ಅಧ್ಯಕ್ಷ ಎಸ್‌.ಎಂ. ಬೂದಿಹಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ