ಆ್ಯಪ್ನಗರ

ಆಶ್ರಯ ಹಕ್ಕು ಪತ್ರ ನೀಡಿ

ಲಕ್ಷ್ಮೇಶ್ವರ: ತಾಲೂಕಿನ ಗೊಜನೂರು ಗ್ರಾಮದಲ್ಲಿಗುಡ್ಡದಲ್ಲಿರುವ ಆಶ್ರಯ ಮನೆಗಳಿಗೆ ಸ್ಥಳೀಯ ಗ್ರಾಪಂನಿಂದ ಹಕ್ಕು ಪತ್ರ ವಿತರಿಸಬೇಕು ಎಂದು ಕರವೇ ತಾಲೂಕು ಘಟಕ ಹಾಗೂ ಗೊಜನೂರು ಗ್ರಾಮ ಘಟಕದ ವತಿಯಿಂದ ಹಾಗೂ ಫಲಾನುಭವಿಗಳು ಸೇರಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

Vijaya Karnataka 5 Nov 2019, 5:26 pm
ಲಕ್ಷ್ಮೇಶ್ವರ: ತಾಲೂಕಿನ ಗೊಜನೂರು ಗ್ರಾಮದಲ್ಲಿಗುಡ್ಡದಲ್ಲಿರುವ ಆಶ್ರಯ ಮನೆಗಳಿಗೆ ಸ್ಥಳೀಯ ಗ್ರಾಪಂನಿಂದ ಹಕ್ಕು ಪತ್ರ ವಿತರಿಸಬೇಕು ಎಂದು ಕರವೇ ತಾಲೂಕು ಘಟಕ ಹಾಗೂ ಗೊಜನೂರು ಗ್ರಾಮ ಘಟಕದ ವತಿಯಿಂದ ಹಾಗೂ ಫಲಾನುಭವಿಗಳು ಸೇರಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
Vijaya Karnataka Web issue the asylum claim letter
ಆಶ್ರಯ ಹಕ್ಕು ಪತ್ರ ನೀಡಿ


ತಾಲೂಕಿನ ಗೊಜನೂರದಲ್ಲಿಯ ಗುಡ್ಡದ ಭಾಗದಲ್ಲಿಸುಮಾರು 30 ವರ್ಷಗಳಿಂದ ಬಡಜನರು ವಾಸಿಸುತ್ತಿದ್ದು, ಇವರಿಗೆ ಯಾವುದೇ ಮೂಲ ಸೌಕರ್ಯ ಇರುವುದಿಲ್ಲ.ಸರಕಾರದ ಆಶ್ರಯ ಯೋಜನೆಯಡಿ ಸ್ಥಳೀಯ ಗ್ರಾಪಂನಿಂದ ಮನೆಯ ಉತಾರ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸದರಿ ಮನೆಗಳ ನೀರಿನ ಬಿಲ್ಲುಹಾಗೂ ಭೂಬಾಡಿಗೆ(ಕರ)ಯನ್ನು ನಿಯಮಿತವಾಗಿ ವಾಸಿಸುವ ಜನರು ತುಂಬುತ್ತಿದ್ದು ಇದುವರೆಗೂ ಇವರಿಗೆ ಅವರ ಮನೆಗಳ ಹಕ್ಕು ಪತ್ರವನ್ನು ಗ್ರಾಪಂನವರು ನೀಡುತ್ತಿಲ್ಲಎಂದು ಮನವಿಯಲ್ಲಿಹೇಳಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಸ್ಥಳೀಯ ಪಂಚಾಯಿತಿಗೆ ದೂರು ನೀಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಭಾರಿ ಮನವಿ ಸಲ್ಲಿಸಿದರು. ಇದುವರೆಗೂ ಯಾವುದೇ ಪ್ರಯೋಜವಾಗಿಲ್ಲಮನವಿ ಸಲ್ಲಿಸಿ 15 ದಿನದಲ್ಲಿಸದರಿ ಗುಡ್ಡದ ಭಾಗದಲ್ಲಿಆಶ್ರಯ ಮನೆಯಲ್ಲಿವಾಸಿಸುತ್ತಿರುವ ಜನರಿಗೆ ಅವರ ಮನೆಗಳ ಪಟ್ಟಾ ಬುಕ್‌ ನೀಡಬೇಕು ಇಲ್ಲದ್ದಿದ್ದ ಕರವೇ ತಾಲೂಕು ಘಟಕ ಹಾಗೂ ಗೊಜನೂರ ಗ್ರಾಮ ಘಟಕದ ವತಿಯಿಂದ ಮತ್ತು ಫಲಾನುಭವಿಗಳಿಂದ ಸೇರಿಕೊಂಡು ತಹಶೀಲ್ದಾರರ ಕಾರ್ಯಾಲಯದ ಆವರಣದಲ್ಲಿಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಗದಗ ಜಿಲ್ಲಾಪ್ರಧಾನ ಕಾರ್ಯದರ್ಶಿ ಶರಣು ಗೋಡಿ, ತಾಲೂಕು ಅಧ್ಯಕ್ಷ ನಾಗೇಶ ಅಮರಾಪೂರ, ಗೊಜನೂರ ಗ್ರಾಮ ಘಟಕ ಅಧ್ಯಕ್ಷ ಚೇತನ್‌ ಎಸ್‌.ಕಣವಿ, ಶಂಕರಗೌಡ ಪಾಟೀಲ್‌, ಶಂಕ್ರಪ್ಪ ಸವಣೂರ, ದಾವಲಸಾಬ್‌ ಆನಿ, ಮಾಬುಸಾಬ್‌ ಮುಲ್ಲಾನವರ, ಪ್ರಭು ಕೊಂಡಿಕೋಪ್ಪ, ಲಲತವ್ವ ಚಿಂತಿ, ಹುಸೇನಬಿ ಆನಿ, ಲಕ್ಷತ್ರ್ಮಪ್ಪ ಸಂಶಿ, ಮಂಜುಳಾ ಕೊರದಾಳ, ರೇಣವ್ವ ಗೌಡಣ್ಣವರ, ಚನ್ನವ್ವ ಯಳವತ್ತಿ, ಲಕ್ಷತ್ರ್ಮವ್ವ ಯಳವತ್ತಿ, ಬಿಬಿಜಾನ್‌ ನದಾಫ್‌, ದ್ರಾಕ್ಷಾಯಿಣಿ ದೊಡ್ಡಗೌಡ್ರ, ಕರಿಯಪ್ಪ ಯಳವತ್ತಿ ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ