ಆ್ಯಪ್ನಗರ

ಹಚ್ಚಿದ ಸಸಿಗಳನ್ನು ಪೋಷಿಸುವುದು ಅಗತ್ಯ

ಗದಗ : ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರೂ ಸಸಿಗಳನ್ನು ನೆಡುವುದರಿಂದ ಪರಿಸರ ಸುಂದರವಾಗಿರಲು ಸಾಧ್ಯ. ಗಿಡ ನೆಡುವುದು ಮಾತ್ರ ಪರಿಸರ ಜಾಗೃತಿಯಲ್ಲ, ಹಚ್ಚಿದ ಗಿಡಕ್ಕೆ ಪ್ರತಿದಿನ ನೀರು ಹಾಕಿ ಕಾಪಾಡುವುದೇ ನಿಜವಾದ ಪರಿಸರ ಕಾಳಜಿ ಎಂದು ಜೇಸಿ ಪ್ರೌಢಶಾಲೆ ಕಾರ್ಯದರ್ಶಿ ಎಸ್‌.ಐ.ಬಂಗಾರಶೆಟ್ಟರ ಹೇಳಿದರು.

Vijaya Karnataka 10 Jun 2019, 5:00 am
ಗದಗ : ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರೂ ಸಸಿಗಳನ್ನು ನೆಡುವುದರಿಂದ ಪರಿಸರ ಸುಂದರವಾಗಿರಲು ಸಾಧ್ಯ. ಗಿಡ ನೆಡುವುದು ಮಾತ್ರ ಪರಿಸರ ಜಾಗೃತಿಯಲ್ಲ, ಹಚ್ಚಿದ ಗಿಡಕ್ಕೆ ಪ್ರತಿದಿನ ನೀರು ಹಾಕಿ ಕಾಪಾಡುವುದೇ ನಿಜವಾದ ಪರಿಸರ ಕಾಳಜಿ ಎಂದು ಜೇಸಿ ಪ್ರೌಢಶಾಲೆ ಕಾರ್ಯದರ್ಶಿ ಎಸ್‌.ಐ.ಬಂಗಾರಶೆಟ್ಟರ ಹೇಳಿದರು.
Vijaya Karnataka Web it is necessary to feed the planted seedlings
ಹಚ್ಚಿದ ಸಸಿಗಳನ್ನು ಪೋಷಿಸುವುದು ಅಗತ್ಯ

ಅವರು ನಗರದ ಜೇಸಿ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಸರ ಸಂರಕ್ಷ ಣೆ ಎಲ್ಲರ ಮುಖ್ಯ ಧ್ಯೇಯವಾಗಬೇಕು ಸಾಮಾಜಿಕ ಜವಾಬ್ದಾರಿ ಅರಿತು ಕೆಲಸ ಮಾಡುವುದರೊಂದಿಗೆ ಜನರಲ್ಲಿ ಜಾಗೃತಿ ಮಾಡಿಸಬೇಕು ಎಂದರು.

ಹಸಿರಿನಲ್ಲಿ ಮಾನವನ ಮತ್ತು ಪರಿಸರದ ಉಸಿರು ಅಡಗಿದೆ ಗಿಡ ಮರಗಳಿದ್ದರೆ ಸಕಾಲಕ್ಕೆ ಮಳೆಯಾಗುತ್ತದೆ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ ಅಲ್ಲದೇ ಹಸಿರಿನಿಂದಲೇ ರೈತರ ಬದುಕು ಮನೆಗೊಂದು ಮರ ಊರಿಗೊಂದು ವನ ಎಂಬ ಮಾತಿನಂತೆ ಮನೆಗೊಂದು ಸಸಿ ನೆಟ್ಟು ಪೋಷಿಸಬೇಕು ಎಂದು ಶಾಲೆ ಆಡಳಿತಮಂಡಳಿ ಸದಸ್ಯ ಟಿ.ಬಿ.ಸೋಮರೆಡ್ಡಿಯವರು ಮಾತನಾಡಿದರು.

8 ನೇ ತರಗತಿ ಮಕ್ಕಳು ವಿವಿಧ ರೀತಿಯ ಸಸಿಗಳನ್ನು ಹಚ್ಚಿದರು.ಆಡಳಿತ ಮಂಡಳಿ ಸದಸ್ಯ ಪಿ.ಸಿ.ಹಕ್ಕಾಪಕ್ಕಿ, ಮುಖ್ಯೋಪಾಧ್ಯಾಯಿನಿ ಜಯಶ್ರೀ ಮಡಿವಾಳರ ಉಪಸ್ಥಿತರಿದ್ದರು .

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ