ಆ್ಯಪ್ನಗರ

ನಾಟಕಗಳಿಂದ ಜಾಗೃತಿ ಮೂಡಿಸಲು ಸಾಧ್ಯ

ಮುಂಡರಗಿ : ದೇಶೀಯ ಕಲೆ ಬಿಂಬಿಸುವಂತಹ ನಾಟಕಗಳು ಜನರಲ್ಲಿ ಕಲೆ,ಸಾಹಿತ್ಯ, ಸಂಸ್ಕೃತಿಯ ಜಾಗೃತಿ ಮೂಡಿಸುತ್ತವೆ ಎಂದು ತಹಸೀಲ್ದಾರ ಡಾ.ವೆಂಕಟೇಶ ನಾಯ್ಕ ಹೇಳಿದರು.

Vijaya Karnataka 27 Oct 2019, 5:00 am
ಮುಂಡರಗಿ : ದೇಶೀಯ ಕಲೆ ಬಿಂಬಿಸುವಂತಹ ನಾಟಕಗಳು ಜನರಲ್ಲಿ ಕಲೆ,ಸಾಹಿತ್ಯ, ಸಂಸ್ಕೃತಿಯ ಜಾಗೃತಿ ಮೂಡಿಸುತ್ತವೆ ಎಂದು ತಹಸೀಲ್ದಾರ ಡಾ.ವೆಂಕಟೇಶ ನಾಯ್ಕ ಹೇಳಿದರು.
Vijaya Karnataka Web it is possible to create awareness through dramas
ನಾಟಕಗಳಿಂದ ಜಾಗೃತಿ ಮೂಡಿಸಲು ಸಾಧ್ಯ


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಾಣೆಬೆನ್ನೂರಿನ ಮಂಜುನಾಥ ನಾಟ್ಯ ಸಂಘವು ಹಮ್ಮಿಕೊಂಡ 'ಹಳ್ಳಿಹುಂಬ' ಹಾಗೂ 'ಗೆದ್ದ ಸೊಸೆ ಬಿದ್ದ ಮಾವ ' ನಾಟಕ ಪ್ರದರ್ಶನದಲ್ಲಿಭಾಗವಹಿಸಿ ಮಾತನಾಡಿದರು.

ಇತ್ತೀಚಿನ ದಿನಮಾನಗಳಲ್ಲಿರಂಗ ಕಲೆಯ ನಾಟಕಗಳು ಅದರಲ್ಲಿಯು ನಾಟಕ ಕಂಪನಿಗಳು ಸಂಕಷ್ಟದ ಸ್ಥಿತಿ ಯಲ್ಲಿವೆ. ಆದ್ದರಿಂದ ಸಾರ್ವಜನಿಕರು ನಾಟಕಗಳನ್ನು ನೋಡುವುದರ ಮೂಲಕ ರಂಗ ಕಲೆ ಉಳಿಸಿ ಬೆಳೆಸಬೇಕು. ಏಕೆಂದರೆ ಇಂತಹ ಸಮಾಜಿಕ ನಾಟಕಗಳಿಂದ ನಮ್ಮ ಸಂಸ್ಕೃತಿ ಉಳಿಸಲು ಸಾಧ್ಯವಾಗುತ್ತದೆ.ಕಲೆಯನ್ನು ನಂಬಿದ ಅನೇಕ ಕಲಾವಿದರು ಬದುಕುತ್ತಾರೆ ಎಂದರು.

ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.ರಂಗ ಭೂಮಿ ಕಲಾವಿದರಾದ ವೈ.ಎನ್‌. ಗೌಡರ ಅಧ್ಯಕ್ಷತೆ ವಹಿಸಿದ್ದರು.

ಸಿಪಿಐ ಶ್ರೀನಿವಾಸ ಮೇಟಿ, ಎನ್‌.ಎಸ್‌. ಇಲ್ಲೂರು, ಕೆ.ವಿ. ಹಂಚನಾಳ, ಹೇಮಗಿರೀಶ ಹಾವಿನಾಳ, ದೃವಕುಮಾರ ಹೊಸಮನಿ, ದೇವಪ್ಪ ಕಂಬಳಿ, ನಾಗರತ್ನಮ್ಮ ಚಿಕ್ಕಮಠ, ಕಲಾವಿದರಾದ ಮಹಾಂತೇಶ ಚಿಕ್ಕಮಠ, ಮಲ್ಲಿಕಾರ್ಜುನ ಚಿಕ್ಕಮಠ, ಮಂಜುಳಾ ಗದಗ, ಸಂಗೀತ, ಗೀತಾ ಶೃಂಗೇರಿ, ಹನಮಂತಪ್ಪ ಸಿದ್ದಿಕೊಪ್ಪ, ಸುಧೀರ ಚಿಕ್ಕಮಠ, ಸೋಮೇಶ ಗುಲಬರ್ಗ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ