ಆ್ಯಪ್ನಗರ

ಪ್ರಪಂಚದಲ್ಲಿ ಕನ್ನಡ ಶ್ರೀಮಂತ ಭಾಷೆ

ಶಿರಹಟ್ಟಿ: ದ್ರಾವಿಡ ಭಾಷೆಗಳಲ್ಲಿಕನ್ನಡ ಭಾಷೆ ಅತೀ ಮಹತ್ವದ ಸ್ಥಾನ ಹೊಂದಿ ಕವಿರಾಜ ಮಾರ್ಗ ಅತೀ ಮಹತ್ವದ ಕೃತಿಯಾಗಿ ಕನ್ನಡ ನಾಡು, ನಾಡವರು ಛಂದಸ್ಸು ವ್ಯಾಕರಣ, ಅಲಂಕಾರ ಮುಂತಾದ ಮೌಲಿಕ ವಿಷಯ ಹೊಂದುವುದರ ಮೂಲಕ ಜಗತ್ತಿನ ಅತೀ ಶ್ರೀಮಂತ ಭಾಷೆಯಾಗಿದೆ ಎಂದು ಸಿಸಿಎನ್‌ ವಿದ್ಯಾಪ್ರಸಾರ ಸಂಸ್ಥೆ ಅಧ್ಯಕ್ಷ ಸಿ.ಸಿ.ನೂರಶೆಟ್ಟರ ಹೇಳಿದರು.

Vijaya Karnataka 24 Nov 2019, 5:00 am
ಶಿರಹಟ್ಟಿ: ದ್ರಾವಿಡ ಭಾಷೆಗಳಲ್ಲಿಕನ್ನಡ ಭಾಷೆ ಅತೀ ಮಹತ್ವದ ಸ್ಥಾನ ಹೊಂದಿ ಕವಿರಾಜ ಮಾರ್ಗ ಅತೀ ಮಹತ್ವದ ಕೃತಿಯಾಗಿ ಕನ್ನಡ ನಾಡು, ನಾಡವರು ಛಂದಸ್ಸು ವ್ಯಾಕರಣ, ಅಲಂಕಾರ ಮುಂತಾದ ಮೌಲಿಕ ವಿಷಯ ಹೊಂದುವುದರ ಮೂಲಕ ಜಗತ್ತಿನ ಅತೀ ಶ್ರೀಮಂತ ಭಾಷೆಯಾಗಿದೆ ಎಂದು ಸಿಸಿಎನ್‌ ವಿದ್ಯಾಪ್ರಸಾರ ಸಂಸ್ಥೆ ಅಧ್ಯಕ್ಷ ಸಿ.ಸಿ.ನೂರಶೆಟ್ಟರ ಹೇಳಿದರು.
Vijaya Karnataka Web kannada is the richest language in the world
ಪ್ರಪಂಚದಲ್ಲಿ ಕನ್ನಡ ಶ್ರೀಮಂತ ಭಾಷೆ


ಅವರು ಶನಿವಾರ ಸಿಸಿಎನ್‌ ಸರಕಾರಿ ಪ್ರೌಢ ಶಾಲೆಯಲ್ಲಿತಾಲೂಕು ಕಸಾಪ ವತಿಯಿಂದ ಎಚ್‌.ಎಂ.ದೇವಗಿರಿ ಅವರು ಕೊಡಮಾಡಿದ ದತ್ತಿ ಉಪನ್ಯಾಸ ಉದ್ಘಾಟಿಸಿ ಮಾತನಾಡಿದರು.

ದತ್ತಿ ಉಪನ್ಯಾಸ ನೀಡಿ ಮಾತನಾಡಿದ ಸುಧಾ ಹುಚ್ಚಣ್ಣವರ, ಸಾಹಿತ್ಯ ಕ್ಷೇತ್ರಕ್ಕೆ ಕವಿಗಳ ಕೊಡುಗೆ ಅಪಾರವಾಗಿದೆ. ಜಗತ್ತಿನ ಯಾವ ಭಾಷೆಯಲ್ಲಿಯೂ ಇಷ್ಟೊಂದು ವಿಪುಲವಾದ ಕನ್ನಡ ಭಾಷೆಯಲ್ಲಿಸಾಹಿತ್ಯಿಕವಾಗಿ ಕೃಷಿಯಾಗಿರುವುದು ಮಹತ್ವದ ಸಂಗತಿಯಾಗಿದೆ. ಕನ್ನಡ ಸಾಹಿತ್ಯವು ಜಗತ್ತಿನ ಭಾಷಾ ಪ್ರಪಂಚದಲ್ಲಿಅತೀ ಶ್ರೀಮಂತ ಭಾಷೆಯಾಗಿದೆ. ಆರಂಭದಲ್ಲಿಆದಿಕವಿ ಪಂಪ, ಪೊನ್ನ, ರನ್ನ ರಿಂದ ಚಂಪು ಸಾಹಿತ್ಯ ಬೆಳೆದು ಬಂದು ಕನ್ನಡ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು. ಜತೆಗೆ ಮಹಾಕಾವ್ಯ ರಚಿಸಿ ಲೋಕದ ಜನತೆಗೆ ತಮ್ಮ ಕಾವ್ಯದ ಮುಖಾಂತರ ಅನೇಕ ಪಾತ್ರಗಳ ಮೂಲಕ ಲೋಕಾನುಭವ ತೋರಿಸಿ ಕೊಟ್ಟಂತ ಮಹಾನ್‌ ಕವಿಗಳ ಕೊಡುಗೆ ಕನ್ನಡಕ್ಕೆ ಅಪಾರವಾಗಿದೆ. ನಂತರ 12ನೇ ಶತಮಾನದ ಶಿವ ಶರಣರಿಂದ ರಚನೆಯಾದ ವಚನ ಸಾಹಿತ್ಯ ವಿಶ್ವಕ್ಕೆ ಮೌಲಿಕವಾದ ಕೊಡುಗೆ ನೀಡಿ ಜನಸಾಮಾನ್ಯರ ಸಾಹಿತ್ಯವಾಗಿ ಶ್ರೇಷ್ಠ ಸಾಹಿತ್ಯವೆಂದು ತೋರಿಸಿಕೊಟ್ಟಿತು. ಹಳಗನ್ನಡ ಷಟ್ಪದಿ ರಗಳೆ ತ್ರಿಪದಿ ಸಾಂಗತ್ಯ, ಕೀರ್ತನೆ ಮುಂತಾದ ರೂಪದಲ್ಲಿನಮ್ಮ ಕನ್ನಡ ಸಾಹಿತ್ಯ ಸರಳ ಭಾಷೆಯಲ್ಲಿರಚನೆಗೊಳ್ಳುತ್ತ ಬಂದಿದೆ. ಹರಿಹರ ರಾಘವಾಂಕ, ಕುಮಾರವ್ಯಾಸ, ವಾಲ್ಮೀಕಿ, ಲಕ್ಷಿತ್ರ್ಮೕಶ, ಸರ್ವಜ್ಞ, ಹರಿದಾಸ ಪರಂಪರೆಯ ಸಾಹಿತ್ಯ ಜಾನಪದ ಸಾಹಿತ್ಯ ನವಯುಗದ ಹೊಸಗನ್ನಡ ಸಾಹಿತ್ಯದ ಕವಿಗಳಾದ ಬೇಂದ್ರೆ, ಶಿವರಾಮ ಕಾರಂತ, ಕುವೆಂಪು, ಡಿ.ಎಸ್‌.ಕರ್ಕಿ, ಚನ್ನವೀರ ಕಣವಿ, ಡಾ. ಜಿ.ಎಸ್‌.ಶಿವರುದ್ರಪ್ಪ ಮುಂತಾದ ಕವಿಗಳು ಕನ್ನಡ ಸಾಹಿತ್ಯಕ್ಕೆ ಕೊಟ್ಟಂತಹ ಕೊಡುಗೆ ಅಪಾರ ಎಂದರು.

ತಾಲೂಕು ಅಧ್ಯಕ್ಷ ಎಂ.ಕೆ.ಲಮಾಣಿ ಅಧ್ಯಕ್ಷತೆ ವಹಿಸಿ, ಕನ್ನಡ ಸಾಹಿತ್ಯ ಅಪಾರವಾದ ಕಾವ್ಯ ಸುಧೆ ಒಳಗೊಂಡಿದ್ದು, ಕಾವ್ಯ ಸಂಸಾರದಲ್ಲಿಕವಿಯೇ ಬ್ರಹ್ಮ ಅವನ ಇಷ್ಟದಂತೆ ಇಡೀ ವಿಶ್ವವೇ ಪರಿವರ್ತನೆ ಪಡೆಯುತ್ತಿದೆ. ಕನ್ನಡದ ಪಂಪ ಪೊನ್ನ, ರನ್ನರ ಕೊಡುಗೆ ಅಪಾರ, ರನ್ನನ ಗದಾಯುದ್ಧ, ಕೇಶಿರಾಜದ ಶಬ್ದಮಣಿ ದರ್ಪಣ, ಜನ್ನನ ಯಶೋಧರ ಚರಿತೆ, ದುರ್ಗಸಿಂಹನ ಪಂಚತಂತ್ರ ಕಥೆಗಳು ಹಲವಾರು ಸಾಹಿತ್ಯಕ ರಚನೆ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ ಎಂದರು.

ಕೆ.ಎ.ಬಳಿಗೇರ, ನಿವೃತ್ತ ಮುಖ್ಯೋಪಾಧ್ಯಾಯ ಆರ್‌.ಬಿ.ಕಮತ ನಾಡು-ನುಡಿ ಚಿಂತನೆಯ ಕುರಿತು ಮಾತನಾಡಿದರು.

ವಿ.ಎಸ್‌.ಶೆಟವಾಜಿ, ಎಂ.ಎ.ಮಕಾನದಾರ, ವೆಂಕಟೇಶ ಅರ್ಕಸಾಲಿ, ಗುರಪ್ಪ ಲಿಂಬಿಕಾಯಿ, ಎಲ್‌.ಟಿ. ತಪಾಲ, ಜಿ.ಡಿ.ಈರಕ್ಕನವರ, ಷಣ್ಮುಖಪ್ಪ ಪಿ.ಎಂ., ಟಿ.ದಾಮೋದರ, ಈರಣ್ಣ ರಿತ್ತಿ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ