ಆ್ಯಪ್ನಗರ

ಕೊಣ್ಣೂರ: ಮತದಾನ ಕಡ್ಡಾಯ, ಹಕ್ಕು

ಕೊಣ್ಣೂರ: ಮತದಾನ ಕಡ್ಡಾಯ ಮತ್ತು ಹಕ್ಕು. ಕೊಣ್ಣೂರು ಇಲ್ಲಿನ ಸ್ಥಳಿಯ ಗದಗ ಜಿಲ್ಲಾ ಆಡಳಿತ ಲೋಕಸಭಾ ಚುನಾವಣೆ 2019 ನಮ್ಮ ಮತ ನಮ್ಮ ಶಕ್ತಿ ಕಡ್ಡಾಯವಾಗಿ ಮತ ಚಲಾಯಿಸೋಣ ಎಂಬ ವಾಕ್ಯದೊಂದಿಗೆ ಕೊಣ್ಣೂರಿನ ಗ್ರಾಪಂ ವತಿಯಿಂದ ಹಾಗೂ ಸ್ಥಳಿಯ ಎಲ್ಲ ಕಲಾವಿದರ ತಂಡದವರು ಕೊಣ್ಣೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

Vijaya Karnataka 31 Mar 2019, 5:00 am
ಕೊಣ್ಣೂರ: ಮತದಾನ ಕಡ್ಡಾಯ ಮತ್ತು ಹಕ್ಕು. ಕೊಣ್ಣೂರು ಇಲ್ಲಿನ ಸ್ಥಳಿಯ ಗದಗ ಜಿಲ್ಲಾ ಆಡಳಿತ ಲೋಕಸಭಾ ಚುನಾವಣೆ 2019 ನಮ್ಮ ಮತ ನಮ್ಮ ಶಕ್ತಿ ಕಡ್ಡಾಯವಾಗಿ ಮತ ಚಲಾಯಿಸೋಣ ಎಂಬ ವಾಕ್ಯದೊಂದಿಗೆ ಕೊಣ್ಣೂರಿನ ಗ್ರಾಪಂ ವತಿಯಿಂದ ಹಾಗೂ ಸ್ಥಳಿಯ ಎಲ್ಲ ಕಲಾವಿದರ ತಂಡದವರು ಕೊಣ್ಣೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
Vijaya Karnataka Web GDG-30KNR PHOTO 2A
ಕೊಣ್ಣೂರಿನ ಗ್ರಾಪಂ ಹಾಗೂ ವಿವಿಧ ಕಲಾ ತಂಡದವರು ಸೇರಿ ಮತದಾನ ಜಾಗೃತಿ ಮೂಡಿಸಿದರು.

ಕೊಣ್ಣೂರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಯಲ್ಲಪ್ಪಗೌಡ ಸಂಕನಗೌಡ್ರ ಮಾತನಾಡಿ, ಭಾರತ ಪ್ರಜಾಪ್ರಭುತ್ವದ ಸಾರ್ವಭೌಮ ರಾಷ್ಟ್ರವಾಗಿದೆ. ಪ್ರಜಾಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ, ಮತ ಚಲಾಯಿಸುವ ಹಕ್ಕು 18 ವರ್ಷ ದಾಟಿದ ಪ್ರತಿ ವ್ಯಕ್ತಿಗೂ ಇದೆ. ಮತದಾನದ ಮೂಲಕ ಎಲ್ಲರೂ ತಪ್ಪದೇ ಮತ ಹಾಕಬೇಕು. ಯಾವುದೆ ಕಾರಣಕ್ಕೂ ಮತ ಮಾರಿಕೊಳ್ಳಬಾರದು. 18 ವರ್ಷ ದಾಟಿದ ಯುವಕ ಯುವತಿಯರು ತಪ್ಪದೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣೆ ಮಾಡಿಸಿಕೊಳ್ಳಬೇಕು. ಈ ಕುರಿತು ಸಂಬಂಧಪಟ್ಟಂತೆ ಇನ್ನೂ ಪ್ರಕ್ರಿಯೆ ಜಾರಿಯಲ್ಲಿದೆ. ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು ಎಂದರು.

ಕೊಣ್ಣೂರಿನ ಪ್ರಮುಖ ಬೀದಿಗಳಲ್ಲಿ ಕೊಣ್ಣೂರಿನ ವಿವಿಧ ಕಲಾತಂಡದವರು ಹಾಗೂ ಮಹಿಳಾ ಸಂಘಟನೆಗಳು ಸೇರಿದಂತೆ ನಾಗರಿಕರು ಬೀದಿಗಳಲ್ಲಿ ಮತದಾನ ಜಾಥಾ ಮಾಡಿ ಗ್ರಾಮಸ್ಥರಿಗೆ ತಿಳಿಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ