ಆ್ಯಪ್ನಗರ

6 ತಿಂಗಳಿಂದ ಟಾಯ್ಲೆಟ್‌ಗೆ ಕೀಲಿ

ಯಲ್ಲಪ್ಪ ತಳವಾರ ರೋಣ: ದೀಪದ ಕೆಳಗೆ ಕತ್ತಲು ಎಂಬಂತೆ ಬಯಲು ಶೌಚಮುಕ್ತ ಯೋಜನೆ ಅನುಷ್ಠಾನ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಚೇರಿಗ ಕೇಂದ್ರ ಬಿಂದುವಾದ ತಾಲೂಕು ಆಡಳಿತದ ಶಕ್ತಿ ಕೇಂದ್ರ ಮಿನಿ ವಿಧಾನಸೌಧದಲ್ಲಿರುವ ಶೌಚಾಲಯಗಳಿಗೆ 6 ತಿಂಗಳದಿಂದ ಬೀಗ ಜಡಿಯಲಾಗಿದೆ.

Vijaya Karnataka 19 Jan 2020, 5:00 am
ಯಲ್ಲಪ್ಪ ತಳವಾರ ರೋಣ: ದೀಪದ ಕೆಳಗೆ ಕತ್ತಲು ಎಂಬಂತೆ ಬಯಲು ಶೌಚಮುಕ್ತ ಯೋಜನೆ ಅನುಷ್ಠಾನ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಚೇರಿಗ ಕೇಂದ್ರ ಬಿಂದುವಾದ ತಾಲೂಕು ಆಡಳಿತದ ಶಕ್ತಿ ಕೇಂದ್ರ ಮಿನಿ ವಿಧಾನಸೌಧದಲ್ಲಿರುವ ಶೌಚಾಲಯಗಳಿಗೆ 6 ತಿಂಗಳದಿಂದ ಬೀಗ ಜಡಿಯಲಾಗಿದೆ.
Vijaya Karnataka Web key to toilet for 6 months
6 ತಿಂಗಳಿಂದ ಟಾಯ್ಲೆಟ್‌ಗೆ ಕೀಲಿ


ಪಟ್ಟಣದಲ್ಲಿರುವ ಶಕ್ತಿ ಸೌಧವು ಎರಡು ಅಂತಸ್ತಿನ ಕಟ್ಟಡ ಹೊಂದಿದ್ದು, ತಳ ಕಟ್ಟಡದಲ್ಲಿಕಂದಾಯ, ಭೂಮಾಪನ,ಚುನಾವಣೆ ಸೇರಿದಂತೆ ಹಲವು ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಕಟ್ಟಡದ ಮದ್ಯ ಭಾಗದಲ್ಲಿರುವ ಶೌಚಾಲಯಕ್ಕೆ ಶುಚಿತ್ವ ಹಾಗೂ ನೀರಿನ ಕೊರತೆಯೊಡ್ಡಿ ಬೀಗ ಜಡಿಯಲಾಗಿದೆ. ಇಲ್ಲಿನ ಮಹಿಳಾ ಸಿಬ್ಬಂದಿ ಹಾಗೂ ಸಾರ್ವಜನಿಕರು ತೀವೃ ತೊಂದರೆ ಅನುಭವಿಸುವಂತಾಗಿದೆ. ಇನ್ನೂ ಮೇಲಂತಸ್ತಿನಲ್ಲೂಒಂದು ಶೌಚಾಲಯವಿದ್ದು,ಅದೂ ಬಾಗಿಲು ತೆರೆದಿದ್ದರೂ ಒಳ ಪ್ರವೇಶ ಮಾಡಲು ಅಲ್ಲಿನ ಅವ್ಯವಸ್ಥೆ, ದುರ್ವಾಸನೆ ತಡೆಯೊಡ್ಡುತ್ತಿದ್ದು, ಜನರು ಈ ಶೌಚಾಲಯದ ಸಹವಾಸವೇ ಬೇಡ,ಬಯಲು ಶೌಚಾಲಯವೇ ಉತ್ತಮ ಎನ್ನುವ ದುಸ್ಥಿತಿ ನಿರ್ಮಾಣವಾಗಿದೆ.

ರೋಣ ಪಟ್ಟಣದ ಬಹುತೇಕ ಕಚೇರಿಗಳಲ್ಲಿಶೌಚಾಲಯಗಳೇ ಇಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಉಪ ನೋಂದಣಾಧಿಕಾರಿಗಳ ಕಚೇರಿ, ಪಶು ಇಲಾಖೆ, ಅಬಕಾರಿ, ಕೈಗಾರಿಕೆ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸೇರಿ ಇನ್ನೂ ಹಲವು ಇಲಾಖೆಗಳಿಗೆ ಶೌಚಾಲಯ ಭಾಗ್ಯ ಲಭಿಸಿಲ್ಲ. ಲಭಿಸಿದ್ದರೂ ಕಾಟಾಚಾರದ ಶೌಚಾಲಯಗಳ ನಿರ್ಮಾಣದಿಂದ ಬಳಕೆಗೆ ದುರ್ಲಭವಾಗಿದೆ. ಸಾರ್ವಜನಿಕರು,ಅಲ್ಲಿನ ಸಿಬ್ಬಂದಿ ಶೌಚಕ್ಕಾಗಿ ನೌಕರರ ಭವನ, ಬಸ್‌ ನಿಲ್ದಾಣದಲ್ಲಿರುವ ಶೌಚಾಲ ಆಶ್ರಯಿಸಬೇಕಾಗಿದೆ.

ತಾಲೂಕು ಕಚೇರಿಯ ಸಿಬ್ಬಂದಿಯಂತೂ ಮೂತ್ರ ವಿಸರ್ಜನೆಗಾಗಿ ಮಹಡಿ ಹತ್ತಬೇಕು. ಇಲ್ಲವಾದರೇ ಅಲ್ಲಿ,ಇಲ್ಲಿಪರದಾಡಬೇಕು. ಗಂಡಸರೇನೋ ಮರೆಯಲ್ಲಿಎಲ್ಲೋ ತಮ್ಮ ಬಾಧೆ ತೀರಿಸಿಕೊಳ್ಳುತ್ತಾರೆ. ಆದರೆ ಮಹಿಳಾ ಸಿಬ್ಬಂದಿ ಸ್ಥಿತಿ ಹೇಳತೀರದಾಗಿದೆ. ಕೆಳ ಅಂತಸ್ಥಿತಿನ ಶೌಚಾಲಯ ಬೀಗ ಬಡಿದುಕೊಂಡಿರುವದರಿಂದ ಮೇಲಂತಸ್ಥಿನ ಮಾಳಗಿ ಮೇಲಿರುವ ಹಳೆ ಕಾಲದ ಸ್ಥಿತಿಯ ಚೀಲಕ ಮುರಿದು,ಗಬ್ಬು ವಾಸನೇ ಸೂಸುವ ಕಚೇರಿಯ ಮಹಿಳಾ ಸಿಬ್ಬಂದಿ ಸರತಿಯಲ್ಲಿಒಬ್ಬರು ಕಾವಲಿಗೆ ನಿಂತು ತಮ್ಮ ನೈಸರ್ಗಿಕ ಬಾಧೆ ತೀರಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ.

ಮಹಿಳೆಯರು ಎಲ್ಲಿಹೋಗಬೇಕು ?: ಮಿನಿ ವಿಧಾನಸೌಧದ ಆವರಣದಲ್ಲಿರುವ ಶೌಚಾಲಯಕ್ಕೆ ಆರು ತಿಂಗಳಿಂದ ಬೀಗ ಜಡಿದಿದ್ದು,ಮಹಿಳಾ ಸಿಬ್ಬಂದಿ ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಇನ್ನೂ ಕೆಲಸ,ಕಾರ್ಯಗಳಿಗೆ ಕಚೇರಿಗೆ ಬರುವ ಮಹಿಳೆಯರು ಶೌಚಕ್ಕೆ ಎಲ್ಲಿಹೋಗಬೇಕು ಎಂದು ಕೇಳಿದರೆ ಹೇಳಲು ಉತ್ತರವಿಲ್ಲವಾಗಿದೆ ಎಂದು ಮಹಿಳಾ ಸಿಬ್ಬಂದಿ ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ