ಆ್ಯಪ್ನಗರ

ಗ್ರಾಮಸ್ಥರಿಗೆ ಕ್ಯಾನ್ಸರ್‌ ತಿಳಿವಳಿಕೆ ಜಾಥಾ

ಗದಗ: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದಿಂದ ತಾಲೂಕಿನ 5 ಗ್ರಾಮಗಳಲ್ಲಿವಿಶ್ವ ಕ್ಯಾನ್ಸರ್‌ ದಿನಾಚರಣೆ ಅಂಗವಾಗಿ ಜಾಥಾ, ಜನ ಜಾಗೃತಿ ಮೂಡಿಸಲಾಯಿತು.

Vijaya Karnataka 8 Feb 2020, 5:00 am
ಗದಗ: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದಿಂದ ತಾಲೂಕಿನ 5 ಗ್ರಾಮಗಳಲ್ಲಿವಿಶ್ವ ಕ್ಯಾನ್ಸರ್‌ ದಿನಾಚರಣೆ ಅಂಗವಾಗಿ ಜಾಥಾ, ಜನ ಜಾಗೃತಿ ಮೂಡಿಸಲಾಯಿತು.
Vijaya Karnataka Web knowing cancer for villagers
ಗ್ರಾಮಸ್ಥರಿಗೆ ಕ್ಯಾನ್ಸರ್‌ ತಿಳಿವಳಿಕೆ ಜಾಥಾ


ವಿಶ್ವವಿದ್ಯಾಲಯದ ದತ್ತು ಗ್ರಾಮಗಳಾದ ಹುಲಕೋಟಿ, ಕುರ್ತಕೋಟಿ, ಬಿಂಕದಕಟ್ಟಿ, ನಾಗಾವಿ, ಕಳಸಾಪುರ ಗ್ರಾಮಗಳಲ್ಲಿವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುಥ್‌ ರೆಡ್‌ ಕ್ರಾಸ್‌ ಘಟಕಗಳು ಹಾಗೂ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳ ಆಶ್ರಯದಲ್ಲಿಏಕ ಕಾಲದಲ್ಲಿಎಲ್ಲಗ್ರಾಮಗಳಲ್ಲಿಜನ ಜಾಗೃತಿ ಕಾರ‍್ಯಕ್ರಮ ಜರುಗಿಸಲಾಯಿತು. ಬಿಂಕದಕಟ್ಟಿಯಲ್ಲಿಗ್ರಾಪಂ ಅಧ್ಯಕ್ಷ ರಂಗಪ್ಪ ಜಾಥಾ ಉದ್ಘಾಟಿಸಿದರು.ನಂತರ ಸ್ನಾತಕೋತ್ತರ ವಿದ್ಯಾರ್ಥಿಗಳು ಗ್ರಾಮದ ಆರೋಗ್ಯ ಇಲಾಖೆಯ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ‍್ಯಕರ್ತ ಸ್ಥಳೀಯ ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಮೆರವಣಿಗೆ ಮೂಲಕ ಕ್ಯಾನ್ಸರ್‌ ಕುರಿತು ಜನಜಾಗೃತಿ ಮೂಡಿಸಿದರು.

ತಾಲೂಕಿನ ಹುಲಕೋಟಿಯಲ್ಲಿಜರುಗಿದ ಜಾಥಾ ಮೆರವಣಿಗೆಯನ್ನು ಗ್ರಾಪಂ ಅಧ್ಯಕ್ಷೆ ರೇಣುಕಾ ಹಡಪದ ಉದ್ಘಾಟಿಸಿದರು. ಪ್ರಾಧ್ಯಾಪಕ ಡಾ.ಎಂ.ಡಿ.ಗೂಳಪ್ಪ ಮಾತನಾಡಿ, ಭಾರತದಲ್ಲಿಅತಿ ಹೆಚ್ಚು ಕಂಡು ಬಂದಿರುವ ಐದು ವಿಧದ ಕ್ಯಾನ್ಸರ್‌ಗಳನ್ನು ತಡೆಯಲು ಸಕಾಲಿಕವಾಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿ ಎಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕೆಂದರು. ತಂಬಾಕು ಸೇವನೆ, ಧೂಮಪಾನ ಮುಂತಾದ ದುಶ್ಚಟಗಳಿಂದ ದೂರವಿದ್ದು ಕ್ಯಾನ್ಸರ್‌ನಿಂದ ರಕ್ಷಿಸಿಕೊಳ್ಳಬಹುದು ಎಂದು ಹೇಳಿದರು. ಎನ್‌ಎಸ್‌ಎಸ್‌ ಸಂಯೋಜಕ ಡಾ.ವೀರೇಶಕುಮಾರ ಇದ್ದರು.

ತಾಲೂಕಿನ ಕುರ್ತಕೋಟಿಯಲ್ಲಿಜರುಗಿದ ಜಾಥಾ ಮೆರವಣಿಗೆ ನಡೆಯಿತು. ಕಳಸಾಪುರ ಗ್ರಾಮದಲ್ಲಿಜರುಗಿದ ಜಾಥಾವನ್ನು ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಕೃಷ್ಣ ಚವ್ಹಾಣ ಉದ್ಘಾಟಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ