ಆ್ಯಪ್ನಗರ

ಮೊಬೈಲ್‌ ಬಿಟ್ಟು ಸಾಹಿತ್ಯ ಸೃಷ್ಟಿಸಿ: ವಿಭೂತಿ

ನರಗುಂದ: ಕವನಗಳು ಯುವ ಸಮುದಾಯಕ್ಕೆ ವೈಚಾರಿಕತೆ ಮತ್ತು ಸಮಾಜ ಬೆಸೆಯುವುದರ ಜತೆಗೆ ಜಾಗೃತಗೊಳಿಸಿ ಮನಗಳನ್ನು ಕೂಡಿಸುವಂತಿರಬೇಕು. ಸಾಹಿತ್ಯ ಓದುವ ಹವ್ಯಾಸ ಇದ್ದವರು ಕವಿ, ಸಾಹಿತಿಯಾಗುವುದರ ಜತೆಗೆ ಪ್ರಜ್ಞಾವಂತ ಪ್ರಜೆಗಳಾಗುತ್ತಾರೆ ಎಂದು ಹಿರಿಯ ಸಾಹಿತಿ ಅಂದಾನಪ್ಪ ವಿಭೂತಿ ಅಭಿಪ್ರಾಯಪಟ್ಟರು.

Vijaya Karnataka 12 Apr 2019, 5:00 am
ನರಗುಂದ: ಕವನಗಳು ಯುವ ಸಮುದಾಯಕ್ಕೆ ವೈಚಾರಿಕತೆ ಮತ್ತು ಸಮಾಜ ಬೆಸೆಯುವುದರ ಜತೆಗೆ ಜಾಗೃತಗೊಳಿಸಿ ಮನಗಳನ್ನು ಕೂಡಿಸುವಂತಿರಬೇಕು. ಸಾಹಿತ್ಯ ಓದುವ ಹವ್ಯಾಸ ಇದ್ದವರು ಕವಿ, ಸಾಹಿತಿಯಾಗುವುದರ ಜತೆಗೆ ಪ್ರಜ್ಞಾವಂತ ಪ್ರಜೆಗಳಾಗುತ್ತಾರೆ ಎಂದು ಹಿರಿಯ ಸಾಹಿತಿ ಅಂದಾನಪ್ಪ ವಿಭೂತಿ ಅಭಿಪ್ರಾಯಪಟ್ಟರು.
Vijaya Karnataka Web leave a mobile and create lyrics vibhuti
ಮೊಬೈಲ್‌ ಬಿಟ್ಟು ಸಾಹಿತ್ಯ ಸೃಷ್ಟಿಸಿ: ವಿಭೂತಿ


ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್‌ ದೊರೆಸ್ವಾಮಿ ವಿರಕ್ತಮಠ ಭೈರನಹಟ್ಟಿ ಇವರ ಆಶ್ರಯದಲ್ಲಿ ನರಗುಂದದ ಸಿದ್ಧೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ವಸಂತ ವೈಭವ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಯುಗಾದಿ ಕೇವಲ ನಿಸರ್ಗದ ಪರಿವರ್ತನೆಯಲ್ಲಾ ಬದಲಾಗಿ ನಮ್ಮ ಸಂಸ್ಕೃತಿ ಭ್ರಾತೃತ್ವವನ್ನು ಬೆಳೆಸುವ ಪ್ರತೀಕವಾಗಿದೆ. ವಿದ್ಯಾರ್ಥಿಗಳಾದವರು ಮೊಬೈಲ್‌ ಸರಿಸುವುದನ್ನು ಬಿಟ್ಟು ಸಾಹಿತ್ಯ ಸೃಷ್ಠಿಸುವ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಸಾಹಿತ್ಯ ಇದ್ದವರು ಕವಿ, ಸಾಹಿತಿಯಾಗುತ್ತಾರೆ, ಪ್ರಜ್ಞಾವಂತರಾಗುತ್ತಾರೆ. ಒಂದು ಮನೆ ಕಟ್ಟಬಹುದು, ದೇವಸ್ಥಾನ ಕಟ್ಟಬಹುದು. ಅಷ್ಟೆ ಅಲ್ಲದೆ ಒಂದು ಊರನ್ನು ಕಟ್ಟಬಹುದು. ಆದರೆ ಕವಿತೆ ಕಟ್ಟುವುದು ಸುಲಭವಲ್ಲ ಅದಕ್ಕೆ ಸತತ ಅಧ್ಯಯನ, ಕಠಿಣ ಪರಿಶ್ರಮ ಬೇಕು. ಹೀಗಾಗಿ ವಿದ್ಯಾರ್ಥಿಗಳಾದವರು ಕೇವಲ ಪರೀಕ್ಷೆಗಾಗಿ ಓದದೆ ಜ್ಞಾನಕ್ಕಾಗಿ ಓದಿ ಒಳ್ಳೆಯ ಸಾಹಿತಿಗಳಾಗಿ ಹೊರಹೊಮ್ಮಬೇಕು ಎಂದರು.

ಪ್ರೊ.ಆರ್‌.ಎಚ್‌.ತಿಗಡಿ, ಶಿಕ್ಷ ಕ ಎಸ್‌.ಜಿ.ಮಣ್ಣೂರಮಠ, ಮರುತಿ ಬೋಸಲೆ, ಪ್ರೋ.ಬಿ.ಸಿ.ಹನಮಂತಗೌಡ್ರ, ಶಿವಪ್ಪ ಯಲಿಗಾರ, ಸಂತೋಷ ಹರನಟ್ಟಿ, ಶ್ವೇತಾ ಸೂಳಿಬಾವಿ, ಬಿ.ಡಿ.ಕೊಣ್ಣೂರ, ಜ್ಯೋತಿ ಮ್ಯಾಗೇರಿ, ಚೈತ್ರಾ ಮಣಕವಾಡ, ಸಂಗೀತಾ ತಿಗಡಿ ಕವನ ವಾಚಿಸಿದರು. ಪ್ರಾಚಾರ್ಯ ಎಂ.ಡಿ.ಕಮತಗಿ, ಕಸಾಪ ಅಧ್ಯಕ್ಷ ಮೋಹನ ಕಲಹಾಳ,ಪ್ರೋ.ಹೆಚ್‌.ಬಿ.ಅಸೂಟಿ ಮಾತನಾಡಿದರು. ವೇದಿಕೆ ಮೇಲೆ ಪ್ರೋ.ಪಿ.ಎಸ್‌.ಅಣ್ಣಿಗೇರಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ