ಆ್ಯಪ್ನಗರ

ಅಭಿವೃದ್ಧಿಯಲ್ಲಿ ಲಾಭದ ಯೋಚನೆ ಬಿಡಿ

ಮುಂಡರಗಿ : ಹತ್ತಾರು ವರ್ಷಗಳಿಂದ ಗದಗ ,ಮುಂಡರಗಿ, ಹಡಗಲಿ, ಹರಪನಹಳ್ಳಿ ರೈಲ್ವೆ ಮಾರ್ಗಕ್ಕಾಗಿ ಇಲ್ಲಿಯ ಅನೇಕ ಸಂಘಟನೆಗಳು ಹೋರಾಡುತ್ತ ಬಂದಿದ್ದರೂ ಈವರೆಗೆ ಸಕಾರಾತ್ಮಕ ಉತ್ತರ ಸಿಕ್ಕಿಲ್ಲ. ಹೀಗಾಗಿ ಸಂಸದರ ಮೇಲೆ ಒತ್ತಡ ಹೇರುವ ಕೆಲಸ ಆಗಬೇಕು ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್‌.ಗೌಡರ ಹೇಳಿದರು.

Vijaya Karnataka 23 Jul 2019, 5:00 am
ಮುಂಡರಗಿ : ಹತ್ತಾರು ವರ್ಷಗಳಿಂದ ಗದಗ ,ಮುಂಡರಗಿ, ಹಡಗಲಿ, ಹರಪನಹಳ್ಳಿ ರೈಲ್ವೆ ಮಾರ್ಗಕ್ಕಾಗಿ ಇಲ್ಲಿಯ ಅನೇಕ ಸಂಘಟನೆಗಳು ಹೋರಾಡುತ್ತ ಬಂದಿದ್ದರೂ ಈವರೆಗೆ ಸಕಾರಾತ್ಮಕ ಉತ್ತರ ಸಿಕ್ಕಿಲ್ಲ. ಹೀಗಾಗಿ ಸಂಸದರ ಮೇಲೆ ಒತ್ತಡ ಹೇರುವ ಕೆಲಸ ಆಗಬೇಕು ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್‌.ಗೌಡರ ಹೇಳಿದರು.
Vijaya Karnataka Web leave the idea of profit in development
ಅಭಿವೃದ್ಧಿಯಲ್ಲಿ ಲಾಭದ ಯೋಚನೆ ಬಿಡಿ


ಇಲ್ಲಿಯ ಗದಗ ರಸ್ತೆಯಲ್ಲಿ (ಕೋರ್ಟ್‌ ಸಮೀಪ) ಸೋಮವಾರ ರೈಲ್ವೆ ಮಾರ್ಗ ಜಂಟಿ ಹೋರಾಟದ ನಾಮಫಲಕ ಉದ್ಘಾಟಿಸಿ ನಂತರ ತಹಸೀಲ್ದಾರರಿಗೆ ಮನವಿ ಸಲ್ಲಿದ ನಂತರ ಮಾತನಾಡಿದರು.

ರೈಲ್ವೆ ಅಧಿಕಾರಿಗಳು ಈ ಯೋಜನೆ ತುಂಬಾ ವೆಚ್ಚದಾಯಕವಾಗಿದ್ದು ಆದಾಯ ಕಡಿಮೆ ತರುವ ಮಾರ್ಗವಾಗಿದೆ ಎಂಬ ಸಬೂಬು ಹೇಳುತ್ತಿದ್ದಾರೆ. ಸಾರ್ವಜನಿಕ ಹಿತದೃಷ್ಟಿ ಮತ್ತು ಅಭಿವೃದ್ಧಿ ವಿಷಯದಲ್ಲಿ ಲಾಭ ನಷ್ಟಗಳ ಲೆಕ್ಕಾಚಾರ ಹಾಕದೆ ಅವಶ್ಯಕತೆಗೆ ಅನುಗುಣವಾಗಿ ರೈಲ್ವೆ ಮಾರ್ಗ ಮಂಜೂರು ಮಾಡಬೇಕು. ಬ್ರಿಟಿಷರ ಕಾಲದಲ್ಲಿಯೇ ಈ ಭಾಗದಲ್ಲಿ ರೈಲ್ವೆ ಮಾರ್ಗದ ಪಾಯಿಂಟ್‌ ಗುರುತಿಸಲ್ಪಟ್ಟಿದೆ. ಹೀಗಾಗಿ ಅಧಿಕಾರಿಗಳ ದೋರಣೆ ಖಂಡನೀಯ. ಗದಗ ವಾಡಿ ಮಾರ್ಗ ಮಾಡಿದಂತೆ ಗದಗ -ಹರಪನಹಳ್ಳಿ ರೈಲ್ವೆ ಮಾರ್ಗ ತುರ್ತಾಗಿ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು.

ತಾಲೂಕು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ ಕಾಗನೂರಮಠ ಮಾತನಾಡಿ, ಈವರೆಗಿನ ಹೋರಾಟದ ಸ್ವರೂಪವೇ ಬೇರೆ ಇನ್ನು ರೈಲ್ವೆ ಹೋರಾಟವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು. ತಾಲೂಕಿನ 52 ಗ್ರಾಮಗಳಲ್ಲಿಯೂ ನಾಮಫಲಕ ಹಾಕುವುದರ ಜತೆಗೆ ಸಮಿತಿ ಮಾಡಿ ರೈಲ್ವೆ ಮಾರ್ಗಕ್ಕಾಗಿ ಆಗಷ್ಟ 26 ರಂದು ಬೆಂಗಳೂರು ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದರ ಜತೆಗೆ ರಾಜ್ಯಪಾಲರ ಭವನಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.

ಜಂಟಿ ಸಮಿತಿ ಸಂಚಾಲಕ ಬಸವರಾಜ ನವಲಗುಂದ ರೈಲ್ವೆ ಹೋರಾಟವನ್ನು ಎಲ್ಲ ರೀತಿಯಿಂದಲೂ ಹಮ್ಮಿಕೊಳ್ಳುತ್ತ ಬಂದರೂ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ಹೋರಾಟ ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದರು.

ಪ್ರಾಂತ ರೈತ ಸಂಘದ ಅಧ್ಯಕ್ಷ ವಿ.ಎಸ್‌.ಘಟ್ಟಿ, ಕೊಟ್ರಗೌಡ ಪಾಟೀಲ, ಕನ್ನಡ ಕ್ರಾಂತಿ ಸೇನೆಯ ಮಂಜುನಾಥ ಮುಧೋಳ, ಬಿ.ವಿ.ಮುದ್ದಿ, ರವಿಗೌಡ ಪಾಟೀಲ, ಎ.ಐ.ಮಾರನಬಸರಿ ಇತರರು ಮಾತನಾಡಿದರು.

ಕಾರ್ಯದರ್ಶಿ ದೃವಕುಮಾರ ಹೂಗಾರ, ಪುರಸಭೆ ಸದಸ್ಯರಾದ ಪವನ ಮೇಟಿ, ಅಬ್ದುಲ್‌ ರಫೀಕ ಮುಲ್ಲಾ, ನಾಗರಾಜ ಹೊಂಬಳಗಟ್ಟಿ, ಮಲ್ಲಿಕಾರ್ಜುನ ಹಣಗಿ, ಎಂ.ಯು.ಮಕಾನದಾರ, ಮೌಲಾಸಾಬ ಬಾಗವಾನ, ಕಸ್ತೂರವ್ವ ಅರಕೇರಿ, ಮಲ್ಲೇಶ ಹರಿಜನ, ಅಡಿವೆಪ್ಪ ಚಲವಾದಿ, ಬಸಪ್ಪ ವಡ್ಡರ, ಈರಣ್ಣ ಕವಲೂರ, ಲಕ್ಷ ್ಮವ್ವ ಕೊರ್ಲಹಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ತಹಸೀಲ್ದಾರ ಡಾ.ವೆಂಕಟೇಶ ನಾಯಕ ಮನವಿ ಸ್ವೀಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ