ಆ್ಯಪ್ನಗರ

ಕಲಾ ವಲಯ ಹೆಚ್ಚು ಬೆಳೆಯಲಿ

ಗದಗ: ಜಾಗತಿಕ ಮಟ್ಟದಲ್ಲಿಕಲೆ ಮತ್ತು ಕಲಾವಿದನಿಗೆ ಉತ್ತಮ ಸ್ಥಾನಮಾನವಿದ್ದು, ಸ್ಥಳೀಯ ಮಟ್ಟದಲ್ಲೂಕಲಾ ವಲಯ ಬೆಳೆಯಲಿ ಎಂದು ಗದುಗಿನ ಹಿರಿಯ ಕಲಾವಿದ ಅಶೋಕ ಅಕ್ಕಿ ಹೇಳಿದರು.

Vijaya Karnataka 19 Nov 2019, 5:00 am
ಗದಗ: ಜಾಗತಿಕ ಮಟ್ಟದಲ್ಲಿಕಲೆ ಮತ್ತು ಕಲಾವಿದನಿಗೆ ಉತ್ತಮ ಸ್ಥಾನಮಾನವಿದ್ದು, ಸ್ಥಳೀಯ ಮಟ್ಟದಲ್ಲೂಕಲಾ ವಲಯ ಬೆಳೆಯಲಿ ಎಂದು ಗದುಗಿನ ಹಿರಿಯ ಕಲಾವಿದ ಅಶೋಕ ಅಕ್ಕಿ ಹೇಳಿದರು.
Vijaya Karnataka Web let the art sector grow more
ಕಲಾ ವಲಯ ಹೆಚ್ಚು ಬೆಳೆಯಲಿ


ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪಕ್ಕದಲ್ಲಿರುವ ಎಂ.ಎ. ಚೆಟ್ಟಿ ಆರ್ಟ್‌ ಗ್ಯಾಲರಿಯಲ್ಲಿಕಲಾವಿದ ಸಲೀಮ ತೆಗ್ಗಿನಮನಿ ಅವರ ಏಕವ್ಯಕ್ತಿ ಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಈ ಧನ ಸಹಾಯ ಕಲಾವಿದರಲ್ಲಿಕಲಾಭಿವ್ಯಕ್ತತೆಯನ್ನು ಅಭಿವ್ಯಕ್ತಿಸಲು ಸಹಾಯವಾಗಿದೆ. ಶಾಲಾ ಮಟ್ಟದಿಂದಲೇ ಕಲಾ ಶಿP್ಷÜಕರ ಅವಶ್ಯಕತೆ ಇದ್ದು, ಸರಕಾರ ಈ ನಿಟ್ಟಿನಲ್ಲಿಯೂ ಸಹ ಆಲೋಚಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಅಧ್ಯP್ಷÜತೆ ವಹಿಸಿದ್ದ ಹಿರಿಯ ಕಲಾವಿದ ವಸಂತ ಅಕ್ಕಿ ಮಾತನಾಡಿ, ಕಲಾವಿದರಿಗೆ ತಮ್ಮ ಆಂತರ್ಯದಲ್ಲಿನ ಭಾವನೆ ಹೊರಹೊಮ್ಮಿಸಲು ಈ ಚಿತ್ರಕಲೆಯಿಂದ ಸಾಧ್ಯ ಎಂದರು.

ಸಾಹಿತಿ ಎಚ್‌.ವಿ. ಪೂಜಾರ, ಗದಗ ಜಿಲ್ಲಾ ಚಿತ್ರಕಲಾ ಶಿP್ಷÜಕರ ಸಂಘದ ಅಧ್ಯP್ಷÜ ವಿಜಯ ಕಿರೇಸೂರ ಮಾತನಾಡಿದರು. ಕಾವ್ಯ ಕುಂಚ ಜುಗಲ್‌ ಬಂದಿಯಲ್ಲಿದೃಶ್ಯ ಕಲಾವಿದರ ಸಂಘದ ಅಧ್ಯP್ಷÜ ಬಿ.ಎಲ್‌. ಚವ್ಹಾಣ, ಸಾಹಿತಿ ಎ.ಎಸ್‌. ಮಕಾನದಾರ, ರಾಜೇಂದ್ರ ಗಡಾದ, ಅಂದಾನಪ್ಪ ವಿಭೂತಿ, ವಿನಾಯಕ ಕಮತದ, ಮರುಳಸಿದ್ಧಪ್ಪ ದೊಡ್ಡಮನಿ, ಲಾಡಮಾ ನದಾಫ, ಮಂಜುಳಾ ವೆಂಕಟೇಶಯ್ಯಾ, ಜ್ಯೋತಿ ಹೇರಲಗಿ, ಮಂಗಳಗೌರಿ ಹಿರೇಮಠ, ಶಿಲ್ಪಾ ಮ್ಯಾಗೇರಿ ಹಾಗೂ ಕಲಾವಿದರಾದ ಬಸವರಾಜ ಕುತ್ನಿ, ಬಿ. ಜಿ. ನೆಲಜೇರಿ, ಕೃಷ್ಣಾ ಕೆ. ಎಮ್‌. ನಜೀರ ಅಹ್ಮದ ಡಂಬಳ, ವಿಜಯ ಕಿರೇಸೂರ, ವಿ. ಬಿ. ಪರ್ವತಗೌಡರ, ಮಹಾಂತ ಬೆಳ್ಳಿ, ಪಿ. ಎ. ಕುಲಕರ್ಣಿ, ಎ. ಕೆ. ಯರಗುಡಿ, ಆರ್‌. ಎಲ್‌. ಕಮ್ಮಾರ ಭಾಗವಹಿಸಿದ್ದರು.

18ಸಲೀಮ5- ಗದಗದಲ್ಲಿನಡೆದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಹಿರಿಯ ಕಲಾವಿದ ಅಶೋಕ ಅಕ್ಕಿ ಉದ್ಘಾಟಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ