ಆ್ಯಪ್ನಗರ

ಮಹಿಳೆ ಪೌಷ್ಟಿಕ ಆಹಾರ ಸೇವಿಸಲಿ

ಮುಳಗುಂದ : ಮಹಿಳೆಯರು ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯದತ್ತ ಗಮನ ಹರಿಸಬೇಕು ಎಂದು ಗದಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೀನೇಶ ಹೇಳಿದರು. ಅವರು ಪಪಂ ಕಾರ್ಯಾಲಯದಲ್ಲಿಗದಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಗದಗ ಹಾಗೂ ಮುಳಗುಂದ

Vijaya Karnataka 14 Mar 2020, 5:00 am
ಮುಳಗುಂದ : ಮಹಿಳೆಯರು ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯದತ್ತ ಗಮನ ಹರಿಸಬೇಕು ಎಂದು ಗದಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೀನೇಶ ಹೇಳಿದರು.
Vijaya Karnataka Web let the woman eat nutritious food
ಮಹಿಳೆ ಪೌಷ್ಟಿಕ ಆಹಾರ ಸೇವಿಸಲಿ

ಅವರು ಪಪಂ ಕಾರ್ಯಾಲಯದಲ್ಲಿಗದಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಗದಗ ಹಾಗೂ ಮುಳಗುಂದ ಪಪಂ ಆಶ್ರಯದಲ್ಲಿಹಮ್ಮಿಕೊಂಡ ರಾಷ್ಟ್ರೀಯ ಪೋಷಣಾ ಅಭಿಯಾನದ ಉದ್ಘಾಟನೆ ಮಾಡಿ ಮಾತನಾಡಿ, ಗರ್ಭಿಣಿಯರು ಸರಿಯಾಗಿ ಆಹಾರ ಸೇವನೆ ಮಾಡದಿದ್ದರೆ ಹುಟ್ಟುವ ಮಗುವಿನ ಆರೋಗ್ಯದ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುತ್ತದೆ.ಹೀಗಾಗಿ ಗರ್ಭಿಣಿಯರು ಪೌಷ್ಟಿಕ ತರಕಾರಿ, ಹಣ್ಣುಗಳನ್ನು ಸೇವಿಸಿದಲ್ಲಿಆರೋಗ್ಯದ ಲಾಭವು ದ್ವಿಗುಣಗೊಳ್ಳುತ್ತದೆ ಎಂದರು.

ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಶ್ವೀನಿ ಕಬಾಡೆ ಮಾತನಾಡಿ, ರತ್ತ ಹೀನತೆಯಿಂದ ಬಳಲುತ್ತಿರುವ ಗರ್ಭಿಣಿ ಮತ್ತು ಬಾಣಂತಿಯರು ಪೌಷ್ಟಿಕ ಆಹಾರ ಸೇವನೆ ಮಾಡಬೇಕು ದಿನನಿತ್ಯ ತರಕಾರಿ,ಮೊಳಕೆ ಒಡೆದ ಕಾಳುಗಳನ್ನು, ಹಣ್ಣು ಹಂಪಲು ತಿನ್ನಬೇಕು ಮತ್ತು ಆಗಾಗ್ಗೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದರು.

ಪಪಂ ಸದಸ್ಯ ಎಸ್‌.ಸಿ.ಬಡ್ನಿ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಯಾಗಿ ಗದಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೀನೇಶ, ಮುಳಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಶ್ವೀನಿ ಕಬಾಡೆ, ಅಂಗನವಾಡಿ ಮೇಲ್ವೀಚಾರಕಿ ಎಸ್‌.ಆರ್‌.ಗಂದದ. ಪಪಂ ಮುಖ್ಯಾಧಿಕಾರಿ ಎಂ.ಎಸ್‌.ಬೆಂತೂರ, ಪಪಂ ಸದಸ್ಯರಾದ ಬಸವರಾಜ ಹಾರೋಗೇರಿ, ಹೊನ್ನಪ್ಪ ವಡ್ಡರ, ಇಮ್ಮಣ್ಣಾ ಚವಳಿಕಾಯಿ, ಚಂಪಾವತಿ ಗುಳೇದ, ಪಾರವ್ವ ಅಳ್ಳಣ್ಣವರ, ನೀಲಮ್ಮಾ ಅಸುಂಡಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ