ಆ್ಯಪ್ನಗರ

ಅಕ್ಷರಗಳು ಸೂತಕ ಪರಂಪರೆ ಕಳಚಲಿ: ನ್ಯಾ.ಸಂಗ್ರೇಶಿ

ಗದಗ: ಸಮಾಜದ ಒಳಿತಿಗಾಗಿ ಪರರ ವಿಚಾರ, ಆಲೋಚನೆಗಳಿಗೆ ಗೌರವಿಸಿ. ಸಂಹಿಷ್ಣುತೆಯಿಂದ ಬರಹಗಾರರು ಸಾಹಿತ್ಯ ಕೃಷಿಯಲ್ಲಿತೊಡಗಿಕೊಂಡು ಮಲೀನಗೊಂಡ ಸಮಾಜದ ಕೊಳೆ ತೊಳೆಯಲು ಅಕ್ಷರಗಳಿಗೆ ಅಂಟಿದ ಸೂತಕ ಪರಂಪರೆಯಿಂದ ಆಚೆ ಬರಲು ಸೌಹಾರ್ದ ಬದುಕಿಗೆ ಪ್ರೇರಣೆ ನೀಡುವಂತಹ ಸಾಹಿತ್ಯ ರಚಿಸಬೇಕೆಂದು ಪ್ರಧಾನ ಜಿಲ್ಲಾಮತ್ತು ಸತ್ರ ನ್ಯಾಯಾಧೀಶ ಜಿ.ಎಸ್‌.ಸಂಗ್ರೇಶಿ ಅಭಿಪ್ರಾಯಪಟ್ಟರು.

Vijaya Karnataka 30 Aug 2019, 5:00 am
ಗದಗ: ಸಮಾಜದ ಒಳಿತಿಗಾಗಿ ಪರರ ವಿಚಾರ, ಆಲೋಚನೆಗಳಿಗೆ ಗೌರವಿಸಿ. ಸಂಹಿಷ್ಣುತೆಯಿಂದ ಬರಹಗಾರರು ಸಾಹಿತ್ಯ ಕೃಷಿಯಲ್ಲಿತೊಡಗಿಕೊಂಡು ಮಲೀನಗೊಂಡ ಸಮಾಜದ ಕೊಳೆ ತೊಳೆಯಲು ಅಕ್ಷರಗಳಿಗೆ ಅಂಟಿದ ಸೂತಕ ಪರಂಪರೆಯಿಂದ ಆಚೆ ಬರಲು ಸೌಹಾರ್ದ ಬದುಕಿಗೆ ಪ್ರೇರಣೆ ನೀಡುವಂತಹ ಸಾಹಿತ್ಯ ರಚಿಸಬೇಕೆಂದು ಪ್ರಧಾನ ಜಿಲ್ಲಾಮತ್ತು ಸತ್ರ ನ್ಯಾಯಾಧೀಶ ಜಿ.ಎಸ್‌.ಸಂಗ್ರೇಶಿ ಅಭಿಪ್ರಾಯಪಟ್ಟರು.
Vijaya Karnataka Web GDG-29RUDRAGOUD2


ನಗರದ ನ್ಯಾಯಾಲಯದ ಆವರಣದಲ್ಲಿಪ್ರಧಾನ ಕುಟುಂಬ ನ್ಯಾಯಾಲಯ ಮತ್ತು 1 ನೇ ಅಧಿಕ ಪ್ರಧಾನ ಕುಟುಂಬ ನ್ಯಾಯಾಲಯದ ಆಶ್ರಯದಲ್ಲಿಸಾಹಿತಿ ಎ.ಎಸ್‌.ಮಕಾನದಾರವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿಕರ್ನಾಟಕ ಅಚಿವರ್ಸ ಬುಕ್‌ ಆಫ್‌ ಪ್ರಶಸ್ತಿ ಪ್ರಧಾನ ಅಭಿನಂದನಾ ಸಮಾರಂಭದಲ್ಲಿಅವರು ಮಾತನಾಡಿದರು.

ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ಕ್ರೀಡೆಯಲ್ಲಿಸಾಧನೆ ಮಾಡುತ್ತಿರುವ ಇಲಾಖೆಯ ಸಹೋದ್ಯೋಗಿಗಳಿಗೆ ಪ್ರೋತ್ಸಾಹ, ಸಹಕಾರ, ಪ್ರೇರಣೆ ನೀಡುವುದಾಗಿ ನುಡಿದು ಅಕ್ಕಡಿಸಾಲು ಸಂಕಲನದ ಕೆಲ ಕವಿತೆ ವಾಚಿಸಿದರು.

ಇದೇ ಸಂದರ್ಭದಲ್ಲಿಪ್ರಧಾನ ಕುಟುಂಬ ನ್ಯಾಯಾಲಯ, 2 ನೇ ಅಧಿಕ ಪ್ರಧಾನ ಕುಟುಂಬ ನ್ಯಾಯಾಲಯ, ಜಿಲ್ಲಾಮತ್ತು ಸತ್ರ ನ್ಯಾಯಾಲಯ, ಜಿಲ್ಲಾನ್ಯಾಯಾಂಗ ಇಲಾಖೆ ನೌಕರರ ಸಂಘದ ಪತ್ತಿನ ಸಹಕಾರಿ ಸಂಘದ ವತಿಯಿಂದ ಸಿಂಪಿ ಲಿಂಗಣ್ಣ, ಕವಿ ವೃಕ್ಷ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕವಿ ಮಕಾನದಾರರಿಗೆ ಗೌರವಿಸಲಾಯಿತು.

ಹೆಚ್ಚುವರಿ ಜಿಲ್ಲಾನ್ಯಾಯಾಧೀಶ ಎಂ.ವಿ.ನರಸಿಂಗಸಾ , 2 ನೇ ಅಧಿಕ ಪ್ರಧಾನ ಕುಟುಂಬ ನ್ಯಾಯಾಲಯದ ನ್ಯಾಯಾಧೀಶ ಪಿ.ಜಿ.ಚೆಲುವಮೂರ್ತಿ, ನ್ಯಾಯಾಧೀಶ ಎಸ್‌.ಜಿ.ಸಲಗೇರೆ, ಶ್ರೀನಿವಾಸ, ರಾಜಣ್ಣ ಸಂಕಣ್ಣವರ, ಎ.ಎಂ.ಬಡಿಗೇರ, ಎಚ್‌.ಮಹಾದೇವಪ್ಪ, ಶ್ರೀಕಾಂತ ರವೀಂದ್ರ, ಎ.ಎಸ್‌.ಸಲ್ಮಾ, ನಿಖಿತಾ ಅಕ್ಕಿ, ಡಾ.ವಿ.ಎಸ್‌.ಸಪ್ತಾಳಕರ, ಶ್ರೀನಿವಾಸ ಹುಟಗಿ, ಅಶೋಕ ಸಕ್ಕರಗೌಡರ, ಎ.ವಿ.ನಾಗಾವಿ, ಎನ್‌.ಆರ್‌. ಗುಡ್ಡದ, ಆರ್‌.ಎಂ.ನಾಯ್ಕರ, ಎ.ಎಸ್‌.ಕರ್ಜಗಿ ಇದ್ದರು.

ಎಸ್‌.ಐ.ತೆಗ್ಗಿನಮನಿ ಸ್ವಾಗತಿಸಿದರು. ಕೆ.ಎಂ.ನದಾಫ ಪ್ರಾರ್ಥಿಸಿದರು. ತನ್ವೀರ್‌ ಅಹ್ಮದ್‌ ಪರಿಚಯಿಸಿದರು. ಬಿ.ಎಂ.ಕುಕನೂರ ನಿರೂಪಿಸಿದರು. ಸಿ.ಎಸ್‌. ಮಠದ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ