ಆ್ಯಪ್ನಗರ

ಸನ್ಮಾರ್ಗದಲ್ಲಿ ನಡೆದರೆ ಬದುಕು ಸಾರ್ಥಕ

ಮುಳಗುಂದ: ಬದುಕಿನಲ್ಲಿಉತ್ತಮ ಜೀವನ ಮೌಲ್ಯ ಅಳವಡಿಸಿಕೊಂಡು ಬದುಕಿನ ಸಾರ್ಥಕತೆ ಕಂಡುಕೊಳ್ಳಬೇಕು. ಶಿವನ ಭಕ್ತಿಯಿಂದ ಧರ್ಮದ ಸನ್ಮಾರ್ಗದಲ್ಲಿಜೀವಿಸಬೇಕು ಎಂದು ನೀಲಗುಂದ ಜ್ಞಾನಗಿರಿ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಹೇಳಿದರು.

Vijaya Karnataka 23 Feb 2020, 5:00 am
ಮುಳಗುಂದ: ಬದುಕಿನಲ್ಲಿಉತ್ತಮ ಜೀವನ ಮೌಲ್ಯ ಅಳವಡಿಸಿಕೊಂಡು ಬದುಕಿನ ಸಾರ್ಥಕತೆ ಕಂಡುಕೊಳ್ಳಬೇಕು. ಶಿವನ ಭಕ್ತಿಯಿಂದ ಧರ್ಮದ ಸನ್ಮಾರ್ಗದಲ್ಲಿಜೀವಿಸಬೇಕು ಎಂದು ನೀಲಗುಂದ ಜ್ಞಾನಗಿರಿ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಹೇಳಿದರು.
Vijaya Karnataka Web live by the way
ಸನ್ಮಾರ್ಗದಲ್ಲಿ ನಡೆದರೆ ಬದುಕು ಸಾರ್ಥಕ


ಅವರು ಸಮೀಪದ ನೀಲಗುಂದ ಜ್ಞಾನಗಿರಿ ಗುದ್ನೇಶ್ವರಮಠದಲ್ಲಿಜರುಗಿದ ಮಹಾ ಶಿವರಾತ್ರಿ ಉತ್ಸವದ ಜಾಗರಣೆ ಕಾರ್ಯಕ್ರಮದಲ್ಲಿಮಾತನಾಡಿದರು. ಇಂದು ಮಾನವೀಯ ಸಂಬಂಧಗಳು ನಶಿಸಿ ಹೋಗುತ್ತಿವೆ. ಬದುಕನ್ನು ನಾವು ಸಂತೋಷದಿಂದ ಧರ್ಮ ನಿಷ್ಠೆಯಿಂದ ಪ್ರತಿಯೊಬ್ಬರು ಸಹಬಾಳ್ವೆಯಿಂದ ಸಮಾಜ ಹಾಗೂ ದೇಶದ ಶಾಂತಿಗಾಗಿ ನಮ್ಮ ಕಾರ್ಯವನ್ನು ನಿಷ್ಠೆಯಿಂದ ನಿರ್ವಹಿಸಬೇಕು ಅಂದಾಗ ಜೀವನ ಯಶ ಕಾಣಲು ಸಾಧ್ಯ ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಮಾತನಾಡಿ, ದೇಶವು ಸುಸಂಸ್ಕೃತ,ನೈತಿಕ ಮೌಲ್ಯ, ನೀತಿ ನಿಯಮ ಎತ್ತಿ ಹೀಡಿಯುತ್ತದೆ. ಆದ್ದರಿಂದ ಸಮಾಜ ಹಾಗೂ ದೇಶ ಸುಧಾರಣೆಗೆ ಮೊದಲು ನಾವು ಸುಧಾರಣೆಯಾಗಬೇಕು ಎಂದರು.

ಅಣ್ಣಿಗೇರಿ ದಸೋಹ ಮಠದ ಶಿವಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಶಾಸಕ ಎಚ್‌.ಕೆ.ಪಾಟೀಲ್‌, ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ, ಅಪ್ಪಣ್ಣ ಇನಾಮತಿ, ಜಿಪಂ ಅಧ್ಯಕ್ಷ.ಸಿದ್ದಲಿಂಗೇಶ ಪಾಟೀಲ್‌, ದ್ಯಾಮಣ್ಣ ಚನ್ನಣ್ಣವರ, ಆರ್‌.ಎನ್‌.ದೇಶಪಾಂಡೆ, ಎಂ.ಡಿ.ಬಟ್ಟೂರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ