ಆ್ಯಪ್ನಗರ

ಸಂಭಾಪುರದಲ್ಲಿ ಜಾನುವಾರುಗಳ ಚಿಕಿತ್ಸಾ ಶಿಬಿರ

ಗದಗ: ತಾಲೂಕಿನ ಸಂಭಾಪುರದಲ್ಲಿಇತ್ತೀಚೆಗೆ ಕೃಷಿ ಇಲಾಖೆ ಮತ್ತು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಆಶ್ರಯದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಜಲಾನಯನ)ಯಡಿ ಜಾನುವಾರುಗಳ ಚಿಕಿತ್ಸಾ ಶಿಬಿರ ನಡೆಯಿತು.

Vijaya Karnataka 30 Nov 2019, 5:00 am
ಗದಗ: ತಾಲೂಕಿನ ಸಂಭಾಪುರದಲ್ಲಿಇತ್ತೀಚೆಗೆ ಕೃಷಿ ಇಲಾಖೆ ಮತ್ತು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಆಶ್ರಯದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಜಲಾನಯನ)ಯಡಿ ಜಾನುವಾರುಗಳ ಚಿಕಿತ್ಸಾ ಶಿಬಿರ ನಡೆಯಿತು.
Vijaya Karnataka Web livestock assistance camp in sambapura
ಸಂಭಾಪುರದಲ್ಲಿ ಜಾನುವಾರುಗಳ ಚಿಕಿತ್ಸಾ ಶಿಬಿರ


ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ಎಸ್‌.ಎಸ್‌.ಹೊಸಮಠ ಮಾತನಾಡಿ, ರೈತರು ಈ ಶಿಬಿರದ ಪ್ರಯೋಜನೆ ಪಡೆಯಬೇಕು. ಎಲ್ಲರೈತರು ಜಾನುವಾರುಗಳನ್ನು ಸಾಕಿದರೆ ಹೊಲಕ್ಕೆ ಗೊಬ್ಬರ ಮತ್ತು ಹೈನುಗಾರಿಕೆಯಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗಲು ಸಹಕಾರಿಯಾಗುವದು ಎಂದರು.

ಕೃಷಿ ವಿಜ್ಞಾನ ಕೇಂದ್ರದ ಮಣ್ಣು ಆರೋಗ್ಯ ವಿಜ್ಞಾನಿ ಡಾ.ಎನ್‌.ಎಚ್‌.ಬಂಡಿ ಮಾತನಾಡಿ, ರೈತರು ಶಗಣಿ ಗೊಬ್ಬರ, ಎರೆಹುಳು ಗೊಬ್ಬರವನ್ನು ತಮ್ಮ ಜಮೀನಿಗೆ ಹಾಕುವುದರಿಂದ ಮಣ್ಣಿನ ಆರೋಗ್ಯ ಸುಧಾರಿಸುವುದಲ್ಲದೇ ಮಣ್ಣಿನಲ್ಲಿನೀರು ಹಿಡಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಿಸುವುದು. ಆದ್ದರಿಂದ ಪ್ರತಿಯೊಬ್ಬ ರೈತರು ಜಾನುವಾರುಗಳನ್ನು ಸಾಕುವುದು ಅನಿವಾರ್ಯವಾಗಿದೆ ಎಂದರು.

ಜಾನುವಾರುಗಳು ಕೃಷಿ ಅವಿಭಾಜ್ಯ ಅಂಗಗಳಾಗಿವೆ. ರೈತರು ಅದನ್ನು ಅರಿಯಬೇಕು. ಕೃಷಿ ಜತೆ ಕೃಷಿಯೇತರ ಚಟುವಟಿಕೆಗಳಾದ ಹೈನುಗಾರಿಕೆ, ತೋಟಗಾರಿಕೆ, ಆಡು-ಕುರಿ ಸಾಕಾಣಿಕೆ , ರೇಷ್ಮೆ ಕೃಷಿ ಮುಂತಾದವುಗಳನ್ನು ಅಳವಡಿಸಿ ವರ್ಷ ಪೂರ್ತಿ ಆದಾಯ ಬರುವ ಹಾಗೆ ಯೋಜನೆ ರೂಪಿಸಿ ಅಳವಡಿಸಬೇಕು ಎಂದರು.

ಲಕ್ಕುಂಡಿ ಪಶು ವೈದ್ಯ ಡಾ.ಎ.ಕೆ.ಗಾಣಿಗೇರ, ಆಸ್ಪತ್ರೆ ವೈದ್ಯಕೀಯ ಪರೀಕ್ಷಕ ಎಂ.ಟಿ.ಬಂಡಿವಡ್ಡರ, ವೈ.ಎ. ಭಾಗವಾನ ಅವರೊಂದಿಗೆ ಜಾನುವಾರಗಳಿಗೆ ಚಿಕಿತ್ಸೆ ನೀಡಿ, ಜಂತು ನಾಶಕ, ಜೀವ ರಕ್ಷಕ ಮತ್ತು ಶಕ್ತಿ ವರ್ದಕ ಔಷದಿಗಳನ್ನು ರೈತರಿಗೆ ನೀಡಿದರು.

ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಪಿ.ಜಿ.ಉಂಡಿಗೇರಿ, ಕೃಷಿ ಅಧಿಕಾರಿ ಹೇಮಾ ಮೊರಬ, ನಾರಾಯನಗೌಡ ಪಾಟೀಲ, ಅಶೋಕ ಬಂಡಿ, ಕುಸುಮಾ ಬಂಡಿ, ದೇವಪ್ಪ ಕುರುಬರ, ರಾಯಪ್ಪ ನಾಗನೂರ, ಹನಮರಡ್ಡಿ ಬಿದರಳ್ಳಿ, ಬಸವರಡ್ಡಿ ಕುರಹಟ್ಟಿ, ವಾಸುದೇವ ನಾಗನೂರ, ಗೋವಿಂದಪ್ಪ ಪೂಜಾರ, ದೇವರಡ್ಡಿ ಕುರಹಟ್ಟಿ, ಗೋವಿಂದಪ್ಪ ನಾಗನೂರ, ದೇವನಗೌಡ ಕಿರೇಸೂರ, ಯಶವಂತರಡ್ಡಿ ನಾವಳ್ಳಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ