ಆ್ಯಪ್ನಗರ

ನೀರಿಗೆ ಬಿದ್ದು ಜಾನುವಾರು ಸಾವು

ಡಂಬಳ: ಮೇಯಲು ಹೊಗುತ್ತಿದ್ದ ಎಮ್ಮೆಯೊಂದು ಗ್ರಾಮದ ದೊಡ್ಡಬಸವೇಶ್ವರ ದೇವಸ್ಥಾನ ಬಳಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿದ ಕಿರಿದಾದ ರಸ್ತೆ ಸೇತುವೆಯಿಂದ ಬಿದ್ದು ಸಾವನಪ್ಪಿದ ಘಟನೆ ಮಂಗಳವಾರ ನಡೆದಿದೆ.

Vijaya Karnataka 28 Aug 2019, 7:48 pm
ಡಂಬಳ: ಮೇಯಲು ಹೊಗುತ್ತಿದ್ದ ಎಮ್ಮೆಯೊಂದು ಗ್ರಾಮದ ದೊಡ್ಡಬಸವೇಶ್ವರ ದೇವಸ್ಥಾನ ಬಳಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿದ ಕಿರಿದಾದ ರಸ್ತೆ ಸೇತುವೆಯಿಂದ ಬಿದ್ದು ಸಾವನಪ್ಪಿದ ಘಟನೆ ಮಂಗಳವಾರ ನಡೆದಿದೆ.
Vijaya Karnataka Web livestock deaths fall to water
ನೀರಿಗೆ ಬಿದ್ದು ಜಾನುವಾರು ಸಾವು


ಡಂಬಳ ಗ್ರಾಮದ ಕೆರೆ ಕೊಡಿ ಬಿದ್ದ ಹಿನ್ನೆಲೆಯಲ್ಲಿದೊಡ್ಡಬಸವೇಶ್ವರ ದೇವಸ್ಥಾನದ ಬಳಿ ಇರುವ ಹಳ್ಳ ತುಂಬಿ ಗದಗ-ಮುಂಡರಗಿ ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ ಕಿರಿದಾದ ಸೇತುವೆ ಮೆಲೆ ಹರಿಯುತ್ತಿದೆ. ಅರ್ಜುನಪ್ಪ ಭರಮಪ್ಪ ಪೂಜಾರ ಎಂಬವರ ಎಮ್ಮೆ ಮೇಯಲು ಹೊರಟಿದ್ದು ತುಂಬಿ ಹರಿಯುತ್ತಿರುವ ಹಳ್ಳದ ಸೇತುವೆ ಮೆಲೆ ಹೋಗುತ್ತಿರುವಾಗ ವಾಹನದ ಶಬ್ದಕ್ಕೆ ಬೆದರಿ ಹಳ್ಳಕ್ಕೆ ಬಿದ್ದು, ರಭಸವಾಗಿ ಹರಿಯುತ್ತಿರುವ ನೀರಿನ ವೇಗಕ್ಕೆ ಮೆಲೆ ಬರಲಾಗದ ಹಳ್ಳದ ಸೇತುವೆಗೆ ಅಡ್ಡಲಾಗಿ ಸಿಕ್ಕಿಕೊಂಡಿತು. ಎಮ್ಮೆಯನ್ನು ಜೀವಂತ ಹೊರತರಲು ಜನರು ಸಾಕಷ್ಟು ಶ್ರಮಿಸಿದರಾದರು ಪ್ರಯೋಜನವಾಗಲಿಲ್ಲ.

ಟ್ರ್ಯಾಕ್ಟರ್‌ ಸಹಾದಿಂದ ಸತ್ತ ಎಮ್ಮೆಯನ್ನು ಹೊರತರಲಾಯಿತು. ಗದಗ-ಮುಂಡರಗಿಗೆ ಡಂಬಳ ಮಾರ್ಗವಾಗಿ ಸಾಗುವ ಮುಖ್ಯ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಈ ಕಿರಿದಾದ ಸೇತುವೆಯಿಂದ ಕೆರೆ ಕೊಡಿ ಬಿದ್ದಾಗಲ್ಲೇಲ್ಲಾಹಳ್ಳ ತುಂಬಿ ರಸ್ತೆ ಮೆಲೆ ನೀರು ಹರಿಯುತ್ತದೆ. ಈ ಹಳ್ಳಕ್ಕೆ ದೊಡ್ಡದಾದ ಸೇತುವೆ ನಿರ್ಮಿಸಬೇಕೆಂಬುದು ಡಂಬಳ ಗ್ರಾಮಸ್ಥರ ಒತ್ತಾಯಿಸಿದ್ದಾರೆ.

ಪಶು ವೈದ್ಯಾಧಿಕಾರಿ ಎಂ.ಎಚ್‌.ಚಿಕ್ಕಾಡಿ, ಕಂದಾಯ ನಿರೀಕ್ಷಕ ಎಸ್‌.ಎಸ್‌.ಬಿಚಾಲಿ, ಗ್ರಾಮಲೆಕ್ಕಾಧಿಕಾರಿ ಡಿ.ಎ.ಕರಿಮನಿ ಇತತರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ