ಆ್ಯಪ್ನಗರ

ಲಾಕ್‌ ಡೌನ್‌; 10ಕ್ಕೂ ಹೆಚ್ಚು ಬೈಕ್‌ ವಶ ,ಲಾಠಿ ರುಚಿ

ನರಗುಂದ: ತಾಲೂಕಿನಲ್ಲಿಕೊರೊನಾ ಸೊಂಕಿತರ ಸಂಖ್ಯೆ ದಿನೆ ದಿನೆ ಏರಿಕೆಯಾಗುತ್ತಿದ್ದರೂ ಜನ ಸಂಚಾರ ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರ ಸಂಜೆ ವ್ಯಾಪಾರ ವಹಿವಾಟು ಪೊಲೀಸರು ಸ್ಥಗಿತಗೊಳಿಸಿದರು. ಲಾಕ್‌ ಡೌನ್‌ ಉಲ್ಲಂಘಿಘಿಸಿ ಸಂಚರಿಸುತ್ತಿದ್ದ ಬೈಕ್‌ ಸವಾರರಿಗೆ ಪೊಲೀಸರು ಲಾಠಿ ಬಿಸಿ ತೋರಿಸಿ ಬೈಕ್‌ ವಶ ಪಡಿಸಿಕೊಂಡು ದಂಡ ಹಾಕಿದರು.

Vijaya Karnataka 6 Jul 2020, 5:00 am
ನರಗುಂದ: ತಾಲೂಕಿನಲ್ಲಿಕೊರೊನಾ ಸೊಂಕಿತರ ಸಂಖ್ಯೆ ದಿನೆ ದಿನೆ ಏರಿಕೆಯಾಗುತ್ತಿದ್ದರೂ ಜನ ಸಂಚಾರ ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರ ಸಂಜೆ ವ್ಯಾಪಾರ ವಹಿವಾಟು ಪೊಲೀಸರು ಸ್ಥಗಿತಗೊಳಿಸಿದರು. ಲಾಕ್‌ ಡೌನ್‌ ಉಲ್ಲಂಘಿಘಿಸಿ ಸಂಚರಿಸುತ್ತಿದ್ದ ಬೈಕ್‌ ಸವಾರರಿಗೆ ಪೊಲೀಸರು ಲಾಠಿ ಬಿಸಿ ತೋರಿಸಿ ಬೈಕ್‌ ವಶ ಪಡಿಸಿಕೊಂಡು ದಂಡ ಹಾಕಿದರು.
Vijaya Karnataka Web 5NRD1_25
ಲಾಕ್‌ಡೌನ್‌ದಲ್ಲಿಹೊರ ಬಂದ ಜನರಿಗೆ ನರಗುಂದ ಶಿವಾಜಿ ಸರ್ಕಲ್‌ ಬಳಿ ಪೊಲೀಸರು ಬೈಕ್‌ ಸವಾರರನ್ನು ವಿಚಾರಿಸಿದರು.

ಲಾಕ್‌ ಡೌನ್‌ ಸಂದರ್ಭದಲ್ಲಿಮನೆ ಬಿಟ್ಟು ಹೊರಬಾರದಂತೆ ಮೈಕ್‌ ಮೂಲಕ ಎಚ್ಚರಿಕೆ ನೀಡಿದರೂ ಜನ ಬೈಕ್‌ನಲ್ಲಿಸಂಚರಿಸುತ್ತಿದ್ದ, ಮಾಸ್ಕ್‌ ಧರಿಸದವರಿಗೆ ಪೊಲೀಸರು ಲಾಠಿ ಬಿಸಿ ತೋರಿಸಿ ಎಚ್ಚರಿಕೆ ನೀಡಿದರು.

ಹುಬ್ಬಳ್ಳಿ - ವಿಜಯಪುರ ಹೆದ್ದಾರಿಗೆ ಹೊಂದಿಕೊಂಡು ಶಿವಾಜಿ ಸರ್ಕಲ್‌ ಬಳಿ ಬರುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ ಪೊಲೀಸರು ಲಾರಿ ಚಾಲಕರಿಗೂ ಲಾಠಿ ರುಚಿ ತೊರಿಸಿದರು. ಬೆಳಗ್ಗೆ ವಾಯು ವಿವಾರಕ್ಕೆ ಹೋದವರು, ಬಯಲು ಬಹಿರ್ದೆಸೆಗೆ ಹೋದವರಿಗೂ ಪೊಲೀಸರು ಖಡಕ್ಕೆ ಎಚ್ಚರಿಕೆ ನೀಡಿದರು.

ಔಷಧ ಅಂಗಡಿ, ಹಾಲಿನ ಕೇಂದ್ರ, ಪೆಟ್ರೋಲ್‌ ಬಂಕ್‌ ಹೊರತು ಪಡಿಸಿ ಎಲ್ಲಅಂಗಡಿಗಳು ಬಂದಾಗಿದ್ದರಿಂದ ಮಾರುಕಟ್ಟೆ, ರಸ್ತೆಗಳು, ಬಸ್‌ ನಿಲ್ದಾಣ ಬಿಕೋ ಎನ್ನುತ್ತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ