ಆ್ಯಪ್ನಗರ

ಮಧ್ವಾಚಾರ್ಯರ ಬದರಿಕಾಶ್ರಮ ಪ್ರವೇಶ ದಿನಾಚರಣೆ

ಮುಂಡರಗಿ: ದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶ್ರೀ ಜಗದ್ಗುರು ಮನ್ಮಧ್ವಾಚಾರ್ಯರು( ಶ್ರೀಮಧ್ವನಮಿ) ಬದರಿಕಾಶ್ರಮ ಪ್ರವೇಶ ದಿನಾಚರಣೆಯನ್ನು ಇಲ್ಲಿಯ ಇಲ್ಲೂರ ತೋಟದಲ್ಲಿರುವ ನಂಜನಗೂಡ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಫೆ. 3 ರಂದು ಆಚರಿಸಲಾಗುವುದು ಎಂದು ರಾಘವೇಂದ್ರ ಸ್ವಾಮಿಗಳ ಮಠದ ಗೌರವ ವಿಚಾರಣಾಕರ್ತ ನಾರಾಯಣ ಇಲ್ಲೂರ ಹೇಳಿದರು.

Vijaya Karnataka 18 Jan 2020, 5:00 am
ಮುಂಡರಗಿ: ದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶ್ರೀ ಜಗದ್ಗುರು ಮನ್ಮಧ್ವಾಚಾರ್ಯರು( ಶ್ರೀಮಧ್ವನಮಿ) ಬದರಿಕಾಶ್ರಮ ಪ್ರವೇಶ ದಿನಾಚರಣೆಯನ್ನು ಇಲ್ಲಿಯ ಇಲ್ಲೂರ ತೋಟದಲ್ಲಿರುವ ನಂಜನಗೂಡ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಫೆ. 3 ರಂದು ಆಚರಿಸಲಾಗುವುದು ಎಂದು ರಾಘವೇಂದ್ರ ಸ್ವಾಮಿಗಳ ಮಠದ ಗೌರವ ವಿಚಾರಣಾಕರ್ತ ನಾರಾಯಣ ಇಲ್ಲೂರ ಹೇಳಿದರು.
Vijaya Karnataka Web madhvacharya badarikashashrama admission day
ಮಧ್ವಾಚಾರ್ಯರ ಬದರಿಕಾಶ್ರಮ ಪ್ರವೇಶ ದಿನಾಚರಣೆ


ಅವರು ಮಠದಲ್ಲಿಸುದ್ದಿಗಾರರೊಂದಿಗೆ ಮಾತನಾಡಿ,ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರತೀರ್ಥ ಶ್ರೀಪಾದಂಗಳ ಸೂಚನೆ ಮೇರೆಗೆ ಪಟ್ಟಣದ ರಾಯರ ಮಠದಲ್ಲಿಆಚರಿಸಲಾಗುವುದು ಎಂದು ನಂಜನಗೂಡು ಮಂತ್ರಾಲಯ ಶ್ರೀ ಮಧ್ವಾಚಾರ್ಯರು ಸುಮಾರು 800 ವರ್ಷಗಳ ಹಿಂದೆಯೇ ದ್ವೈತ ಸಿದ್ಧಾಂತ ಪ್ರತಿಪಾದಿಸಿದರು. ಅಂದಿನಿಂದ ಇಂದಿನ ತನಕ ಮಧ್ವಾಚಾರ್ಯರ ದ್ವೈತ ಸಿದ್ಧಾಂತವನ್ನು ಮಧ್ವ ಪರಂಪರೆಯ ಅನೇಕ ವಿಪ್ರಮಠಗಳು ಪ್ರಚಾರ ಮಾಡುತ್ತ ಬಂದಿವೆ. ಅಂತಹ ಆಚಾರ್ಯರ ಆಚರಣೆಯನ್ನು ಮಠದಲ್ಲಿಆಚರಿಸಲಾಗುವದೆಂದರು.

ಜ. 25 ರಂದು ಬೆಳಗ್ಗೆ 11 ಕ್ಕೆ ಇಲ್ಲಿಯ ನಂಜನಗೂಡ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಸಭಾಂಗಣದಲ್ಲಿ ಮಧ್ವನವರಾತ್ರಿ ಉತ್ಸವ ಉದ್ಘಾಟನೆಗೊಳ್ಳಲಿದೆ. ಫೆ.3 ರಂದು ಮಧ್ವನವಮಿ ಉತ್ಸವ ಜರುಗಲಿದೆ.

ಮಧ್ವನವಮಿ ಉತ್ಸವ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ವೃಂದಾವನ ವಿಶೇಷ ಪೂಜೆ, ಪಂಚಾಮೃತ ಅಭೀಷೇಕ, ಅಲಂಕಾರ, ವಾಯುಸ್ತುತಿ ಪಠಣ, ಅಷ್ಟೋತ್ತರ ಪಠಣ, ಮಹಾರಥೋತ್ಸವ ಪಂಡಿತರಿಂದ ಉಪನ್ಯಾಸ, ತಾರತಮ್ಯ ಪ್ರಕಾರ ಭಜನಾ ಕಾರ್ಯಕ್ರಮ ಪಾಲಕಿ ಉತ್ಸವ , ಹೀಗೆ ಹತ್ತು ಹಲವು ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ ಎಂದರು.

ಮಠದ ವ್ಯವಸ್ಥಾಪಕ ಆಶೋಕಆಚಾರ್ಯ ನಂಜನಗೂಡ, ಅರ್ಚಕ ಗುರಾಚಾರ್ಯ ಗೊಗ್ಗಿ, ಎಚ್‌ ಕೆ ಕೃಷ್ಣಮೂರ್ತಿ, ನಾಗಪ್ಪ ಶೇಡದ, ಸಿ ಬಿ ಚನ್ನಳ್ಳಿ, ತಿರುಮಲರಾವ ದೇಶಪಾಂಡೆ, ಕಾಂತರಾಜ ಹಿರೇಮಠ, ರಘೋತ್ತಮ ಡಂಬಳ, ಸುಧೀರ ಪದಕಿ, ವಿಶ್ವನಾಥ ಜೋಶಿ, ಗುರುರಾಜ ಅಪರಂಜಿ, ಪ್ರಸನ್ನ ಅಪರಂಜಿ, ಹನಮಂತರಾವ್‌ ದಫ್ತರದಾರ, ಕೃಷ್ಣ ಗಂಭೀರ, ಗೋವಿಂದರಾಜ ಹೆಗ್ಗಡಾಳ, ದಿಲೀಪಕುಮಾರ ಆರ್‌ ಜೋಶಿ, ಗೋವಿಂದರಾವ ಜೋಶಿ, ರಾಘವೇಂದ್ರ ಚಿನ್ನಿ, ಪ್ರಶಾಂತ ತಾವರಗೇರಿ, ದತ್ತಾತ್ರೇಯ ಹೆಗ್ಗಡಾಳ, ಫಣಿರಾಜ ಅಳವಂಡಿ, ಸಾಯಿನಾಥ ಅಳವಂಡಿ, ರಾಘವೇಂದ್ರ ಎ ಪಾಟೀಲ, ಅಶೋಕ ಶಿದ್ಲಿಂಗ, ಸಂತೋಷ ಹಿರೇಮನಿ, ರಾಜಾಭಕ್ಷಿ ಬೆಟಗೇರಿ, ದುರಗಪ್ಪ ಮೊರನಾಳ, ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ