ಆ್ಯಪ್ನಗರ

ಬಸವತತ್ವಕ್ಕೆ ಬದುಕು ಮೀಸಲಿಟ್ಟ ಮಾತೆಮಹಾದೇವಿ

ಮುಂಡರಗಿ : 12 ನೇ ಶತಮಾನದ ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಅಕ್ಷ ರಶಃ ಪಾಲಿಸಿ ತಮ್ಮ ಇಡೀ ಬದುಕನ್ನು ಬಸವತತ್ವಕ್ಕಾಗಿ ಮೀಸಲಿಟ್ಟ ಮೊದಲ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಎಂದು ಸಾಹಿತಿ ಡಾ.ನಿಂಗು ಸೊಲಗಿ ಹೇಳಿದರು.

Vijaya Karnataka 20 Mar 2019, 5:00 am
ಮುಂಡರಗಿ : 12 ನೇ ಶತಮಾನದ ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಅಕ್ಷ ರಶಃ ಪಾಲಿಸಿ ತಮ್ಮ ಇಡೀ ಬದುಕನ್ನು ಬಸವತತ್ವಕ್ಕಾಗಿ ಮೀಸಲಿಟ್ಟ ಮೊದಲ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಎಂದು ಸಾಹಿತಿ ಡಾ.ನಿಂಗು ಸೊಲಗಿ ಹೇಳಿದರು.
Vijaya Karnataka Web mahadevi who devoted life to basavatthatva
ಬಸವತತ್ವಕ್ಕೆ ಬದುಕು ಮೀಸಲಿಟ್ಟ ಮಾತೆಮಹಾದೇವಿ


ಮುಂಡರಗಿ ತೋಂಟದಾರ್ಯ ಮಠದಲ್ಲಿ ಈಚೆಗೆ ಲಿಂಗೈಕ್ಯರಾದ ಕೂಡಲ ಸಂಗಮದ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಕನ್ನಡನಾಡಿನಲ್ಲಿ ಏಕೈಕ ಮಹಿಳಾ ಜಗದ್ಗುರುಗಳಾಗಿ ಬಸವತತ್ವದಲ್ಲಿ ತಮ್ಮದೇ ವಿಶೇಷ ಅಸ್ತಿತ್ವ ಮೂಡಿಸುವ ಮೂಲಕ ನಾಡಿನ ಉದ್ದಗಲಕ್ಕೂ ತೆರಳಿ ಬಸವಣ್ಣನವರ ಸಮಾನತೆ ತತ್ವಾದರ್ಶಗಳನ್ನು ಬೆಳೆಸಿದರು. ಪ್ರವಚನ ಪಿತಾಮಹ ಲಿಂ. ಲಿಂಗಾನಂದರ ಕಾಲದಲ್ಲಿ ಅವರೊಂದಿಗೆ ಎಲ್ಲ ಕಡೆಗೂ ತೆರಳಿ ಬಸವತತ್ವದ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಕಾರ್ಯ ಮಾಡಿದ ಹೆಗ್ಗಳಿಕೆ ಮಾತೆ ಮಹಾದೇವಿ ಅವರಿಗೆ ಸಲ್ಲುತ್ತದೆ ಎಂದರು.

ಕೊಟ್ರೇಶ ಅಂಗಡಿ ಮಾತನಾಡಿ, ಮಾತೆ ಮಹಾದೇವಿ ಅವರಿಂದ ನಾಡಿನುದ್ದಗಲಕ್ಕೂ ಸಾಕಷ್ಟು ಮಹಿಳಾ ಬಸವ ಬಳಗಗಳು ಸೃಷ್ಟಿಯಾದವು. ಅವೆಲ್ಲವೂ ಇಂದು ನಾಡಿನಾದ್ಯಂತ ಬಸವತತ್ವದ ಪ್ರಸಾರದಲ್ಲಿ ತೊಡಗಿವೆ. ಅಂತಹ ಮಾತೆಯನ್ನು ಕಳೆದುಕೊಂಡು ಲಿಂಗಾಯತ ಧರ್ಮ ಬಡವಾಗಿದೆ ಎಂದರು. ತೋಂಟದಾರ್ಯ ಸೇವಾ ಸಮಿತಿ ಅಧ್ಯಕ್ಷ ಹರಗಿನಡೋಣಿ ವಿರುಪಾಕ್ಷ ಗೌಡ, ಮಾಜಿ ಅಧ್ಯಕ್ಷ ಈಶಣ್ಣ ಬೆಟಗೇರಿ, ಧ್ರುವಕುಮಾರ ಹೊಸಮನಿ,ಅಶೋಕ ಹುಬ್ಬಳ್ಳಿ, ಎ.ಪಿ.ದಂಡಿನ, ಸುರೇಶ ಬಣಗಾರ, ಗಿರೀಶಗೌಡ ಪಾಟೀಲ, ಉಮೇಶ ಹಿರೇಮಠ ಸದಾಶಿವಯ್ಯ ಗಬ್ಬೂರಮಠ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ