ಆ್ಯಪ್ನಗರ

ಮಹರ್ಷಿ ವಾಲ್ಮೀಕಿ ಜಗದ ಆದಿ ಕವಿ

ರೋಣ : ವೇದಗಳ ಸಾರ್ವಕಾಲಿಕ ಮೌಲ್ಯಗಳನ್ನು ಕಥನ, ಕಾವ್ಯದ ಮೂಲಕ ರಚಿಸಿದ ಮಹಾ ಪುರುಷ ಮಹರ್ಷಿ ವಾಲ್ಮೀಕಿ ಜಗದ ಆದಿ ಕವಿ. ಪ್ರಪಂಚ ಕಂಡ ಸಾರ್ವಕಾಲಿಕ ಆದರ್ಶ ಪುರುಷರಾಗಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆ ಸುವರ್ಣಾ ತಿಗರಿ ಹೇಳಿದರು.

Vijaya Karnataka 15 Oct 2019, 5:00 am
ರೋಣ : ವೇದಗಳ ಸಾರ್ವಕಾಲಿಕ ಮೌಲ್ಯಗಳನ್ನು ಕಥನ, ಕಾವ್ಯದ ಮೂಲಕ ರಚಿಸಿದ ಮಹಾ ಪುರುಷ ಮಹರ್ಷಿ ವಾಲ್ಮೀಕಿ ಜಗದ ಆದಿ ಕವಿ. ಪ್ರಪಂಚ ಕಂಡ ಸಾರ್ವಕಾಲಿಕ ಆದರ್ಶ ಪುರುಷರಾಗಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆ ಸುವರ್ಣಾ ತಿಗರಿ ಹೇಳಿದರು.
Vijaya Karnataka Web maharishi was the admiral of the valmiki era
ಮಹರ್ಷಿ ವಾಲ್ಮೀಕಿ ಜಗದ ಆದಿ ಕವಿ


ತಾಲೂಕಿನ ನಾಗೇಂದ್ರಗಡ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿಏರ್ಪಡಿಸಿದ್ದ ಮಹರ್ಷಿ ವಾಲ್ಮಿಕಿ ಜಯಂತಿಯಲ್ಲಿಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಈ ಮಹಾನ್‌ ಕವಿಯ ಕಾವ್ಯ ಕಲ್ಪನೆಯ ಕಾವ್ಯವಲ್ಲ. ಅದೊಂದು ಅಪೂರ್ವ ಐತಿಹಾಸಿಕ ದಾಖಲೆ. ನೈತಿಕ, ರಾಜಕೀಯ, ಅಧ್ಯಾತ್ಮಿಕ, ಮಾನವೀಯ ಮೌಲ್ಯಸಾರುವ ಮಹಾನ್‌ ಗ್ರಂಥವಾಗಿದೆ. ಈ ಗ್ರಂಥವನ್ನು ನಮ್ಮ ದೇಶದಲ್ಲಿಅಷ್ಟೆ ಅಲ್ಲ, ಹೊರ ದೇಶಗಳಲ್ಲಿಅತ್ಯಂತ ಜನಪ್ರಿಯವಾಗಿರುವದಕ್ಕೆ ಕಾವ್ಯಗಳಲ್ಲಿನ ವಿಷಯ ಗಂಭಭೀರತೆ, ಛಂದೋಬಂಧ ನಿರೂಪಣೆ ಸಾಕ್ಷಿಯಾಗಿದೆ ಎಂದರು.

ಮೌಲ್ಯಗಳ ಬೋಧನೆ, ಕಾವ್ಯಾತ್ಮಕ ಪ್ರಭುದ್ಧತೆ ಎಲ್ಲವೂಗಳಿಂದ ಕೂಡಿದ ಈ ಕಾವ್ಯಕ್ಕೆ ನನ್ನ ಕಲ್ಪನೆಯಲ್ಲಿಬೇರೊಂದಿಲ್ಲ. ಇದೊಂದು ಕಥೆ ಎನಿಸಿದರೂ ಮುಂದಿನ ಜನಾಂಗಕ್ಕೆ ನೀಡಬೇಕಾದ ಮಹತ್ವ ಸಂದೇಶಗಳು ಇದರಲ್ಲಿವೆ ಎಂದರು.

ಈ ಸಮಯದಲ್ಲಿಪಾಲಕರು,ಪೋಷಕರು, ಅಂಗನವಾಡಿ ಮಕ್ಕಳು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ