ಆ್ಯಪ್ನಗರ

ಆರ್ಥಿಕ ಗಣತಿ ಸರಿಯಾಗಿ ನಿರ್ವಹಿಸಿ

ಗದಗ: ಕೃಷಿಯೇತರ ಉದ್ದಿಮೆಗಳ ಮಾಹಿತಿ ಹಾಗೂ ಅವುಗಳ ಆರ್ಥಿಕ ಚಟುವಟಿಕೆಗಳ ಮಾಹಿತಿಯನ್ನು ಸಂಗ್ರಹಿಸವುದು ಏಳನೇ ಆರ್ಥಿಕ ಗಣತಿ ಮುಖ್ಯ ಉದ್ದೇಶವಾಗಿದ್ದು ಇದನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚಿಸಿದರು.

Vijaya Karnataka 28 Dec 2019, 5:00 am
ಗದಗ: ಕೃಷಿಯೇತರ ಉದ್ದಿಮೆಗಳ ಮಾಹಿತಿ ಹಾಗೂ ಅವುಗಳ ಆರ್ಥಿಕ ಚಟುವಟಿಕೆಗಳ ಮಾಹಿತಿಯನ್ನು ಸಂಗ್ರಹಿಸವುದು ಏಳನೇ ಆರ್ಥಿಕ ಗಣತಿ ಮುಖ್ಯ ಉದ್ದೇಶವಾಗಿದ್ದು ಇದನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚಿಸಿದರು.
Vijaya Karnataka Web maintain financial census properly
ಆರ್ಥಿಕ ಗಣತಿ ಸರಿಯಾಗಿ ನಿರ್ವಹಿಸಿ


ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ 7ನೇ ಆರ್ಥಿಕ ಗಣತಿಯ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಣತಿದಾರರು ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು. ಆಯಾ ಪ್ರದೇಶದ ಸ್ಥಳೀಯರನ್ನು ಗಣತಿದಾರರನ್ನಾಗಿ ನಿಯೋಜಿಸಬೇಕು. ಆರ್ಥಿಕ ಗಣತಿಯ ಜನ ಜಾಗೃತಿಗಾಗಿ ನಗರ ಪ್ರದೇಶಗಳಲ್ಲಿಧ್ವನಿ ವರ್ಧಕದ ಮೂಲಕ ಹಾಗೂ ಗ್ರಾಮೀಣ ವಲಯದಲ್ಲಿಡಂಗುರ ಸಾರುವ ಮೂಲಕ ಜಾಗೃತಿ ಮೂಡಿಸಬೇಕು. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಗಣತಿದಾರರಿಗೆ ಅಗತ್ಯದ ಸಹಕಾರ ನೀಡಬೇಕು ಎಂದ ಜಿಲ್ಲಾಧಿಕಾರಿಗಳು ಆರ್ಥಿಕ ಚಟುವಟಿಕೆಗಳ ವಿವರಗಳನ್ನು ಗಣತಿದಾರರಿಗೆ ಒದಗಿಸಲು ಜಾಗೃತಿ ಮೂಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ವಹಿಸಲು ಸೂಚಿಸಿದರು. ಜಿಲ್ಲೆಯಲ್ಲಿನೋಂದಣಿಯಾಗಿರುವ ಕಾರ್ಖಾನೆ, ಬಾಯ್ಲರ್‌, ಉದ್ಯಮ ಘಟಕಗಳ ತಾಲೂಕುವಾರು ಪಟ್ಟಿಯನ್ನು ಜಿಲ್ಲಾಸಂಖ್ಯಾ ಸಂಗ್ರಹಣಾಧಿಕಾರಿಗಳು ಪಡೆದು ನಗರ, ಪಟ್ಟಣ ಪ್ರದೇಶಗಳಲ್ಲಿವ್ಯಾಪಾರಿ ಸಂಘ ಹಾಗೂ ವಾಣಿಜ್ಯೋದ್ಯಮ ಸಂಸ್ಥೆಗಳ ಮೂಲಕ ಸಭೆ ಜರುಗಿಸಿ ಆರ್ಥಿಕ ಗಣತಿ ಕುರಿತ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಜಿಲ್ಲಾಸಂಖ್ಯಾ ಸಂಗ್ರಹಣಾಧಿಕಾರಿ ಕಂಬಾಳಿಮಠ ಮಾತನಾಡಿ, ಆರ್ಥಿಕ ಗಣತಿ ಕಾರ್ಯಕ್ಕಾಗಿ ಜಿಲ್ಲೆಯಲ್ಲಿಒಟ್ಟು 910 ಗಣತಿದಾರರನ್ನು 150 ಮೇಲ್ವಿಚಾರಕರನ್ನು ಸಾಮಾನ್ಯ ಸೇವಾ ಕೇಂದ್ರದ ಮೂಲಕ ನೇಮಕ ಮಾಡಿಕೊಳ್ಳಲಾಗಿದೆ ಎಂದರು.

ಜಿಲ್ಲಾನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎಸ್‌.ಎನ್‌. ಡಿ.ವೈ.ಎಸ್ಪಿ ವೈ.ಎಸ್‌. ಈಗನಗೌಡ್ರ, ಗದಗ-ಬೆಟಗೇರಿ ನಗರ ಸಭೆ ಪೌರಾಯುಕ್ತ ಮನ್ಸೂರ ಅಲಿ, ತಹಸೀಲ್ದಾರರು, ಸ್ಥಳೀಯ ಸಂಸ್ಥೆ, ತಾಪಂ ಮುಖ್ಯಾಧಿಕಾರಿಗಳು, ಜಿಲ್ಲೆಯ ಎಲ್ಲತಹಸೀಲ್ದಾರರು,ವಿವಿಧ ಇಲಾಖೆ ಅಧಿಕಾರಿಗಳು, ಗಣತಿದಾರರು, ಗದಗ ಸಿಎಸ್‌ಸಿ ಮೇಲ್ವಿಚಾರಕ ನಾಸಿರಹ್ಮದ ಪಾಪನ್ನವರ, ಜಿಲ್ಲಾಸಂಯೋಜಕ ಬಸವರಾಜ ಸೊರಟೂರ, ಶಿವಶೇಖರಗೌಡರ ಪಾಟೀಲ, 7ನೇ ಆರ್ಥಿಕ ಗಣತಿಯ ಜಿಲ್ಲಾಮಟ್ಟದ ಸಮನ್ವಯ ಸಮಿತಿಯ ಸದಸ್ಯರು ಸಭೆಯಲ್ಲಿಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ7ನೇ ಆರ್ಥಿಕ ಗಣತಿಯ ಮೊಬೈಲ್‌ ಆಪ್‌ ಬಿಡುಗಡೆ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ