ಆ್ಯಪ್ನಗರ

ಸರಕಾರಿ ಯೋಜನೆ ಸದುಪಯೋಗ ಮಾಡಿಕೊಳ್ಳಿ

ಡಂಬಳ: ಸಾರ್ವಜನಿಕರು ಸ್ವಚ್ಛತೆ, ಆರೋಗ್ಯ, ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಸರಕಾರದ ಯೋಜನೆಗಳನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು.ಮಕ್ಕಳನ್ನು ತಪ್ಪದೇ ಶಾಲೆಗೆ ಕಳಹಿಸುವುದರ ಜತೆಗೆ ಶಿಕ್ಷಣದ ಕಡೆ ಗಮನ ಗಮನ ಹರಿಸಬೇಕು ಎಂದು ಡೋಣಿಯ ಸರಕಾರ ಪಬ್ಲಿಕ್‌ ಕಾಲೇಜಿನ ಉಪನ್ಯಾಸಕ ಎಚ್‌.ಎಸ್‌. ತಾಸಿನ್‌ ಹೇಳಿದರು.

Vijaya Karnataka 19 Oct 2019, 5:00 am
ಡಂಬಳ: ಸಾರ್ವಜನಿಕರು ಸ್ವಚ್ಛತೆ, ಆರೋಗ್ಯ, ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಸರಕಾರದ ಯೋಜನೆಗಳನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು.ಮಕ್ಕಳನ್ನು ತಪ್ಪದೇ ಶಾಲೆಗೆ ಕಳಹಿಸುವುದರ ಜತೆಗೆ ಶಿಕ್ಷಣದ ಕಡೆ ಗಮನ ಗಮನ ಹರಿಸಬೇಕು ಎಂದು ಡೋಣಿಯ ಸರಕಾರ ಪಬ್ಲಿಕ್‌ ಕಾಲೇಜಿನ ಉಪನ್ಯಾಸಕ ಎಚ್‌.ಎಸ್‌. ತಾಸಿನ್‌ ಹೇಳಿದರು.
Vijaya Karnataka Web make use of government planning
ಸರಕಾರಿ ಯೋಜನೆ ಸದುಪಯೋಗ ಮಾಡಿಕೊಳ್ಳಿ


ಡೋಣಿ ಗ್ರಾಮದ ಕರ್ನಾಟಕ ಪಬ್ಲಿಕ್‌ ಕಾಲೇಜು ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿಗ್ರಾಮ ಸಂಪರ್ಕ ಯೋಜನೆಯಡಿ ಜಾನಪದ ಮತ್ತು ನಾಟಕದ ಮೂಲಕ ಸರಕಾರದ ಯೋಜನೆಯ ಕುರಿತು ಜನರಿಗೆ ಜಾಗೃತಿ ಮೂಡಿಸುವ ಕ್ಷೇತ್ರ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಿದ್ಧಲಿಂಗೇಶ್ವರ ಜಾನಪದ ಕಲಾತಂಡ ಅಡವಿಸೋಮಾಪುರ ಹಾಗೂ ಗುರು ಶಿಷ್ಯ ಪರಂಪರೆ ಜಾನಪದ ಕಲಾತಂಡ ಲಕ್ಕುಂಡಿ ಜಾನಪದ ಕಲಾ ತಂಡದವರು ಗ್ರಾಮದ ಸ್ವಚ್ಛತೆ ಹಾಗೂ ಸರಕಾರದ ವಿವಿಧ ಜನಪರ ಯೋಜನೆಗಳಾದ ಕಿಸಾನ್‌ ಸಮ್ಮಾನ್‌, ಸಹಾಯಧನ, ನೇಕಾರರು, ಮೀನುಗಾರರ ಸಾಲಮನ್ನಾ, ರೈತರ ಸಾಲಮನ್ನಾ, ಸಮ್ಮಾನ್‌ ಯೋಜನೆ,ಆಯುಷ ಸಮ್ಮಾನ್‌ ಕಾರ್ಡ್‌ ಯೋಜನೆ, ವಿದ್ಯಾಶ್ರೀ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ, ಭಾಗ್ಯಶ್ರೀ ಯೋಜನೆ, ಗಂಗಾ ಕಲ್ಯಾಣ ಯೋಜನೆ ಕುರಿತು ಆಯಾ ಇಲಾಖೆಯಲ್ಲಿಮಾಹಿತಿ ಪಡೆದು ರೈತರು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಜಾನಪದ ಗೀತೆ ಹಾಗೂ ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ಜನಜಾಗೃತಿ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

ಡಿ.ಆರ್‌. ಹಾಳಕೇರಿ, ಎಸ್‌.ಎನ್‌.ಸೋಮಣ್ಣವರ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ