ಆ್ಯಪ್ನಗರ

ಚನ್ನಬಸವಣ್ಣವರ ಚರಿತಾಮೃತ ಪ್ರವಚನ ಮಂಗಲೋತ್ಸವ

ಮುಂಡರಗಿ : ಇಲ್ಲಿಯ ಜ.ತೋಂಟದಾರ್ಯ ಶಾಖಾಮಠದಲ್ಲಿ ಕಳೆದ ತಿಂಗಳಿಂದ ನಡೆಯುತ್ತಿರುವ ಚನ್ನಬಸವಣ್ಣನವರ ಚರಿತಾಮೃತ ಪ್ರವಚನ ಮಂಗಲೋತ್ಸವ ಜು. 29 ರಂದು ಜ.ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿದೆ. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಗುರುಸಿದ್ದೇಶ್ವರ ಸಂಸ್ಥಾನಮಠ ಯಶವಂತನಗರ ಗಂಗಾಧರ ಸ್ವಾಮಿಗಳಿಗೆ ಗುರುವಂದನೆ ನಡೆಯುವದು. ಶರಣಬಸವೇಶ್ವರ ದೇವರು ಪ್ರವಚನ ಸಾದರ ಪಡಿಸುವರು ಎಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

Vijaya Karnataka 28 Jul 2019, 5:00 am

Vijaya Karnataka Web mangalotsavam of the charitamrita discourse of channabasavanna
ಚನ್ನಬಸವಣ್ಣವರ ಚರಿತಾಮೃತ ಪ್ರವಚನ ಮಂಗಲೋತ್ಸವ

ಶನಿವಾರ ಸಂಜೆ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿ, ಪ್ರವಚನಗಳು ಜೀವನಕ್ಕೆ ಮಾರ್ಗದರ್ಶನ ಮತ್ತು ಪ್ರಸಾದ ರೂಪದಲ್ಲಿರುತ್ತವೆ, ಇದರಿಂದ ಬೌದ್ಧಿಕ ಮಟ್ಟ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಕೊಟ್ರೇಶ ಅಂಗಡಿ ಮಾತನಾಡಿ, ಹಾವೇರಿ ಸಂಸದ ಶಿವಕುಮಾರ ಉದಾಸಿ, ಶಾಸಕ ರಾಮಣ್ಣ ಲಮಾಣಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಜಿಪಂ ಸದಸ್ಯರಾದ ವಿ.ಐ.ನಾಡಗೌಡ್ರ, ಶೋಭಾ ಮೇಟಿ, ಶಕುಂತಲಾ ಚವ್ಹಾಣ ಪಾಲ್ಗೊಳ್ಳುವರು.

ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಕೊಪ್ಪಳದ ಸಿದ್ದನಗೌಡ ಪಾಟೀಲ, ಆರ್‌.ಎಚ್‌.ಅತ್ತನೂರ, ರೇಣುಕಾ ಅತ್ತನೂರ ಅವರ ಸತ್ಕಾರ ಇದೆ.

ಜು.29 ರಂದು ಬೆಳಗ್ಗೆ 8.30 ಕ್ಕೆ ಶ್ರೀ ಮಠದಿಂದ ವಚನಧರ್ಮಗ್ರಂಥ, ವಿಶ್ವಗುರು ಬಸವಣ್ಣನವರ ಹಾಗೂ ತೋಂಟದ ಸಿದ್ದಲಿಂಗ ಶಿವಯೋಗಿಗಳ ಭಾವಚಿತ್ರ ಪಲ್ಲಕ್ಕಿ ಉತ್ಸವ ನಡೆಯುವದು. ಮದ್ಯಾಹ್ನ 12.30 ರಿಂದ ಮಹಾದಾಸೋಹ, ಸಂಜೆ 7.30 ರಿಂದ ಪ್ರವಚನ ಮಂಗಲೋತ್ಸವ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.

ಪ್ರವಚನ ಸಮಿತಿ ಅಧ್ಯಕ್ಷ ದೇವೇಂದ್ರಪ್ಪ ರಾಮೇನಹಳ್ಳಿ, ಉಪಾಧ್ಯಕ್ಷ ರಾದ ಶಿವಯೋಗಿ ಕೊಪ್ಪಳ, ವೀರಣ್ಣ ಗಟ್ಟಿ, ಕಾರ್ಯದರ್ಶಿ ಬಸವರಾಜ ದೇಸಾಯಿ, ಎಚ್‌. ವಿರುಪಾಕ್ಷ ಗೌಡ, ಸದಾಶಿವಯ್ಯ ಗಬ್ಬೂರಮಠ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ