ಆ್ಯಪ್ನಗರ

ಕಪ್ಪೆಗೆ ಕಂಕಣ ಭಾಗ್ಯ ...!

ರೋಣ : ತಾಲೂಕಿನಲ್ಲಿ ಸತತ 4 ವರ್ಷಗಳಿಂದ ಕಾಡುತ್ತಿರುವ ಬರಗಾಲದಿಂದಾಗಿ ತತ್ತರಿಸಿರುವ ರೈತರು ಈ ಬಾರಿಯಾದರೂ ಉತ್ತಮ ಮುಂಗಾರು ಮಳೆಯಾಗಲಿ ಎಂದು ಮಳೆರಾಯನ ಕೃಪೆ ಕೋರಿ ಹಲವಾರು ಧಾರ್ಮಿಕ ಕಾರ್ಯ ಮಾಡುತ್ತಿದ್ದಾರೆ. ತಾಲೂಕಿನ ಸವಡಿ ಗ್ರಾಮದ ಕಾಳಿಕಾದೇವಿ ದೇವಸ್ಥಾನದಲ್ಲಿ ರೈತರು,ರೈತ ಮಹಿಳೆಯರು ಸೇರಿ ಕಪ್ಪೆಗಳ ಮದುವೆ ಮಾಡಿ ವರುಣನಿಗೆ ಪ್ರಾರ್ಥಿಸಿದರು.

Vijaya Karnataka 25 Jun 2019, 5:00 am
ರೋಣ : ತಾಲೂಕಿನಲ್ಲಿ ಸತತ 4 ವರ್ಷಗಳಿಂದ ಕಾಡುತ್ತಿರುವ ಬರಗಾಲದಿಂದಾಗಿ ತತ್ತರಿಸಿರುವ ರೈತರು ಈ ಬಾರಿಯಾದರೂ ಉತ್ತಮ ಮುಂಗಾರು ಮಳೆಯಾಗಲಿ ಎಂದು ಮಳೆರಾಯನ ಕೃಪೆ ಕೋರಿ ಹಲವಾರು ಧಾರ್ಮಿಕ ಕಾರ್ಯ ಮಾಡುತ್ತಿದ್ದಾರೆ. ತಾಲೂಕಿನ ಸವಡಿ ಗ್ರಾಮದ ಕಾಳಿಕಾದೇವಿ ದೇವಸ್ಥಾನದಲ್ಲಿ ರೈತರು,ರೈತ ಮಹಿಳೆಯರು ಸೇರಿ ಕಪ್ಪೆಗಳ ಮದುವೆ ಮಾಡಿ ವರುಣನಿಗೆ ಪ್ರಾರ್ಥಿಸಿದರು.
Vijaya Karnataka Web GDG-24 RON 1C
ವರುಣನ ಕೃಪೆಗಾಗಿ ಸವಡಿ ಗ್ರಾಮದ ಕಾಳಿಕಾದೇವಿ ದೇವಸ್ಥಾನದಲ್ಲಿ ಕಪ್ಪೆಗಳ ಮದುವೆ ಮಾಡಲಾಯಿತು.


ಹೀಗಾಗಿ ಕಪ್ಪೆಗಳಿಗೂ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಕಪ್ಪೆಗಳಿಗೆ ಮದುವೆ ಮಾಡಿದರೆ ಮಳೆರಾಯ ಬರುತ್ತಾನೆ ಎಂಬ ನಂಬಿಕೆಯಿಂದ ಗ್ರಾಮೀಣ ಪ್ರದೇಶದಲ್ಲಿ ಈ ರೀತಿಯ ಮದುವೆಗಳು ಶುರುವಾಗಿವೆ. ಈ ಹೊತ್ತಿಗಾಗಲೇ ಮುಂಗಾರು ಮಳೆ ಸುರಿದು ಕೆರೆ ಕಟ್ಟೆಗಳು ತುಂಬಬೇಕಾಗಿತ್ತು. ಆರಂಭದಲ್ಲಿ ಆರ್ಭಟ ತೋರಿದ ಮುಂಗಾರು ಪೂರ್ವ ಮಳೆಗಳು, ಅರ್ಧ ಮಳೆಗಾಲ ಕಳೆಯುತ್ತ ಬಂದರೂ ಪ್ರಮುಖ ಮಳೆಗಳು ಧರೆಯತ್ತ ಇಣುಕಲಿಲ್ಲ. ರೈತರು ಮುಂಗಾರು ಬಿತ್ತನೆಗಾಗಿ ಜಮೀನು ಹದ ಮಾಡಿಕೊಂಡಿದ್ದು, ಮೇಘರಾಜನ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಮಳೆ ಕೈಕೊಟ್ಟಾಗ ವರುಣನನ್ನು ಒಲಿಸಲು ಕಪ್ಪೆ ಹಾಗೂ ಕತ್ತೆಗಳ ಮದುವೆ ಮಾಡುವುದು, ಗುರ್ಜಿ ಆಡುವುದು, ಭಜನೆ ಮಾಡುವುದು ಸಂಪ್ರದಾಯ.ಅದರಂತೆ ರೈತರು ಎರಡು ಕಪ್ಪೆಗಳನ್ನು ಹಿಡಿದುಕೊಂಡು ಗಂಡು ಕಪ್ಪೆಗೆ ಕಪ್ಪರಾಯ ಮತ್ತು ಹೆಣ್ಣುಕಪ್ಪೆಗೆ ರಾಣಿ ಎಂದು ಹೆಸರಿಸಿ ಗ್ರಾಮದ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ಅದ್ದೂರಿ ಮದುವೆ ಮಾಡಿದರು. ದೇವಸ್ಥಾನದ ಆವರಣದಲ್ಲಿ ರಂಗೋಲಿ ಹಾಕಿ, ತಳಿ-ತೋರಣ ಕಟ್ಟಲಾಗಿತ್ತು. ಕಪ್ಪೆಗಳಿಗೆ ಅರಿಷಿಣ ಹಚ್ಚಿ ಸುರಿಗೆ ನೀರು ಸುರಿಯಲಾಯಿತು. ನಂತರ ಕಂಕಣ ಕಟ್ಟಿ ಒಂದು ತಾಸಿಗೂ ಹೆಚ್ಚು ಹೊತ್ತು ನಡೆದ ಮದುವೆ ಸಮಾರಂಭದಲ್ಲಿ ಮದುವೆ ಶಾಸ್ತ್ರೋಕ್ತ ಸಂಪ್ರದಾಯಗಳನ್ನು ಶ್ರೀಗಳು ನೆರವೇರಿಸಿದರು.

ಗ್ರಾಮಸ್ಥರಲ್ಲಿಯೇ ಎರಡು ಗುಂಪುಗಳನ್ನು ಮಾಡಿಕೊಂಡು ಒಂದು ಹೆಣ್ಣಿನ ಕಡೆಯುವರದು,ಮತ್ತೊಂದು ಗಂಡಿನ ಕಡೆಯವರೆಂಬಂತೆ ವರ್ತಿಸಿದರು.ಇದರಲ್ಲಿ ಹೆಣ್ಣು ಕಪ್ಪೆಯ ಕುಟುಂಬದವರು ವೀರುಪಾಕ್ಷ ಗೌಡ ದೇಸಾಯಿಗೌಡ್ರ ಮತ್ತು ಗಂಡು ಕಪ್ಪೆಯ ಕಡೆಯವರಾಗಿ ಪ್ರವೀಣಕುಮಾರ ಪೋಲಿಸಪಾಟೀಲ ಕುಟುಂಬದವರು ಜವಾಬ್ದಾರಿ ಹೊತ್ತಿದ್ದರು. ಸಂಗನಬಸಯ್ಯ ಹಿರೇಮಠ, ಶಂಕ್ರಯ್ಯ ಹಿರೇಮಠ,ಶರಣಯ್ಯ ಹಿರೇಮಠ ಸ್ವಾಮಿಗಳ ನೇತ್ರತ್ವದಲ್ಲಿ ಕಪ್ಪೆಯೊಂದಕ್ಕೆ ತಾಳಿ ಕಟ್ಟಿ ಮಂತ್ರ ಹೇಳಿ ಅಕ್ಷ ತೆ ಹಾಕಲಾಯಿತು. ನೆರೆದಿದ್ದ ನೂರಾರು ಜನರು ಕಪ್ಪೆಗಳಿಗೆ ಅಕ್ಷ ತೆ ಹಾಕಿ ಮಳೆ ಬರಲಿ ಎಂದು ಪ್ರಾರ್ಥಿಸಿದರು.

ಜಾಂಜ್‌ಮೇಳ,ಕರಡಿ ಮಜಲು, ಭಜನೆ ಹೆಚ್ಚಿನ ಮೆರಗು ತಂದವು.ಮದುವೆಗೆ ಬಂದವರಿಗೆ ದೇವಸ್ಥಾನ ಕಮೀಟಿಯವರು ಊಟೋಪಚಾರದ ವ್ಯವಸ್ಥೆ ಮಾಡಿದ್ದರು.

ಶಿವನಗೌಡ ಪೋಲಿಸಪಾಟೀಲ,ಕುಬೇರಪ್ಪ ಪರಡ್ಡಿ, ಚನ್ನವೀರಯ್ಯ ಗಣಾಚಾರಿ, ಸಂಗನಗೌಡ ಪೋಲಿಸಪಾಟೀಲ ಹಾಗೂ ಕಾಳಿಕಾದೇವಿ ದೇವಸ್ಥಾನ ಕಮೀಟಿ ಆಡಳಿತ ಮಂಡಳಿಯವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ