ಆ್ಯಪ್ನಗರ

ಅಲ್ಪಸಂಖ್ಯಾತ ಸಮುದಾಯದ ಸಭೆ ಇಂದು

ಗದಗ : ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಆಶ್ರಯದಲ್ಲಿ ಏ. 15ರಂದು ಸಂಜೆ 5 ಕ್ಕೆ ನಗರದ ಕಾಟನ್‌ ಸೇಲ್‌ ಸೊಸೈಟಿ ಆವರಣದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸಭೆ ಆಯೋಜಿಸಲಾಗಿದೆ ಎಂದು ಅಲ್ಪಸಂಖ್ಯಾತ ಸಮುದಾಯದ ಮುಖಂಡ ಅಕ್ಬರಸಾಬ್‌ ಬಬರ್ಚಿ ಹೇಳಿದರು.

Vijaya Karnataka 15 Apr 2019, 5:00 am
ಗದಗ : ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಆಶ್ರಯದಲ್ಲಿ ಏ. 15ರಂದು ಸಂಜೆ 5 ಕ್ಕೆ ನಗರದ ಕಾಟನ್‌ ಸೇಲ್‌ ಸೊಸೈಟಿ ಆವರಣದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸಭೆ ಆಯೋಜಿಸಲಾಗಿದೆ ಎಂದು ಅಲ್ಪಸಂಖ್ಯಾತ ಸಮುದಾಯದ ಮುಖಂಡ ಅಕ್ಬರಸಾಬ್‌ ಬಬರ್ಚಿ ಹೇಳಿದರು.
Vijaya Karnataka Web minority community meeting today
ಅಲ್ಪಸಂಖ್ಯಾತ ಸಮುದಾಯದ ಸಭೆ ಇಂದು


ಭಾನುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏ. 15ರಂದು ನಡೆಯುವ ಅಲ್ಪಸಂಖ್ಯಾತರ ಸಭೆಯಲ್ಲಿ ಜಿಲ್ಲೆಯ ಅಲ್ಪಸಂಖ್ಯಾತ ಮುಖಂಡರು, ಮಹಿಳೆಯರು, ಯುವಕರು ಮತ್ತು ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಚ್‌.ಕೆ. ಪಾಟೀಲ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷರು ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಅಲ್ಪಸಂಖ್ಯಾತರ ಶಕ್ತಿ ಪ್ರದರ್ಶನ ಮಾಡುವ ಜತೆಗೆ ಡಿ.ಆರ್‌. ಪಾಟೀಲ ಅವರನ್ನು ಬೆಂಬಲಿಸಲು ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಗದಗ ಬೆಟಗೇರಿ ಅವಳಿ ನಗರದಲ್ಲಿ ಕೆಲವರು ತಪ್ಪು ತಿಳಿವಳಿಕೆಯಿಂದ ಬಿಜೆಪಿ ಸೇರಿದ್ದಾರೆ. ಅವರೆಲ್ಲರ ಮನವೊಲಿಸಿ ಮತ್ತೆ ಕಾಂಗ್ರೆಸ್‌ ಕಡೆಗೆ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಸಲೀಂ ಅಹ್ಮದ್‌ ಅವರಿಗೆ ಟಿಕೆಟ್‌ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನ ಮುನಿಸಿಕೊಂಡಿದ್ದಾರೆ ಎನ್ನುವುದು ಕೇವಲ ವದಂತಿ. ಪಕ್ಷ ಯಾರಿಗೆ ಟಿಕೆಟ್‌ ನೀಡಿದರೂ ಅದನ್ನು ಬೆಂಬಲಿಸಿ ಅವರ ಪರವಾಗಿ ಕೆಲಸ ಮಾಡಲಾಗುವುದು. ಸಲೀಂ ಅಹ್ಮದ್‌ ಅವರು ಪಕ್ಷ ಸಂಘಟನೆ ಕಾರ್ಯದಲ್ಲಿ ನಿರತರಾದ ಕಾರಣ ಪ್ರಚಾರದಲ್ಲಿ ಬಂದಿಲ್ಲ, ಶೀಘ್ರವೇ ಗದಗನಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದರು.

ಕಾಂಗ್ರೆಸ್‌ ಅಲ್ಪಸಂಖ್ಯಾತ ಮುಖಂಡರಿಗೆ ಯಾವ ಸ್ಥಾನಮಾನ ಕೊಟ್ಟಿಲ್ಲ ಎನ್ನುವುದು ತಪ್ಪು. ನಗರಸಭೆ, ತಾಪಂ ಸಹಿತ ರಾಜ್ಯಮಟ್ಟದ ಹುದ್ದೆ ನೀಡಿದೆ. ಬರುವ ದಿನಗಳಲ್ಲಿ ಇನ್ನಷ್ಟು ಸ್ಥಾನಮಾನ ಕೊಡುವಂತೆ ಪಕ್ಷದ ಮುಖಂಡರಲ್ಲಿ ಮನವಿ ಮಾಡಿಕೊಳ್ಳಲಾಗುವುದು ಎಂದರು.

ರಜಾಕ್‌ ಡಂಕೇದ, ಯುಸೂಫ್‌ ನಮಾಜಿ, ಸಾದಿಕ್‌ ನರಗುಂದ, ಉಮರ್‌ ಫಾರೂಕ್‌ ಹುಬ್ಬಳ್ಳಿ ಇತರರು ಉಪಸ್ಥಿತರಿದ್ದರು.

ಬೃಹತ್‌ ಸಭೆ :

ಏ.15ರಂದು ಕಾಟನ್‌ ಸೇಲ್‌ ಸೊಸೈಟಿಯಲ್ಲಿ ನಡೆಯಲಿರುವ ಅಲ್ಪಸಂಖ್ಯಾತ ಸಮುದಾಯದ ಸಭೆಗೆ ಜಿಲ್ಲೆಯ ಎಲ್ಲ ಅಲ್ಪಸಂಖ್ಯಾತ ಮುಖಂಡರು ಭಾಗವಹಿಸಿ, ಕಾಂಗ್ರೆಸ್‌ ಪರ ಬೆಂಬಲ ಸೂಚಿಸಲಿದ್ದಾರೆ ಎಂದು ಮುಖಂಡ ಬಾಷಾಸಾಬ ಮಲ್ಲಸಮುದ್ರ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಅಲ್ಪಸಂಖ್ಯಾತರನ್ನು ಗೌರವದಿಂದ ನಡೆಸಿಕೊಂಡಿದೆ. ಅಲ್ಪಸಂಖ್ಯಾತ ಮುಖಂಡರಿಗೆ ಅನೇಕ ಸ್ಥಾನಮಾನಗಳನ್ನು ನೀಡಿದೆ. ಹೀಗಾಗಿ ಎಲ್ಲರೂ ಕೂಡಿಕೊಂಡು ಕಾಂಗ್ರೆಸ್‌ ಬೆಂಬಲಿಸಿ, ಡಿ.ಆರ್‌. ಪಾಟೀಲ ಗೆಲುವು ಸಾಧಿಸಲು ಶ್ರಮ ವಹಿಸಬೇಕಿದೆ ಎಂದರು.

ಅಸ್ಲಂ ನರೇಗಲ್‌, ಯುಸೂಫ್‌ ನಮಾಜಿ, ಜಿ.ಎಂ. ದಂಡಿನ, ಮಹಮ್ಮದ ಮಾಳೆಕೊಪ್ಪ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ