ಆ್ಯಪ್ನಗರ

ಮಾದರಿ ಬದಲಾವಣೆ, ಬಿಜೆಪಿ ಗೆಲುವಿಗೆ ಕಾರಣ

ಮುಂಡರಗಿ : ಕಳೆದ ಹಲವು ದಶಕಗಳಿಂದ ರಾಜಕಾರಣದಿಂದ ರೋಸಿ ಹೋಗಿದ್ದ ಜನತೆಗೆ ಕಳೆದ ಐದು ವರ್ಷಗಳ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಾರದರ್ಶಕ ಆಡಳಿತ ಮತ್ತು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕವಾಗಿ ಮಾದರಿ ಬದಲಾವಣೆಯಿಂದ ಮತದಾರರು ನಂಬಿಕೆ ವಿಶ್ವಾಸದಿಂದ ಬೆಂಬಲಿಸಿದ್ದು ಬಿಜೆಪಿ ಗೆಲುವಿಗೆ ಕಾರಣವಾಯಿತು ಎಂದು ಸಂಸದ ಶಿವಕುಮಾರ ಉದಾಸಿ ಅಭಿಪ್ರಾಯ ಪಟ್ಟರು.

Vijaya Karnataka 8 Jun 2019, 5:00 am
ಮುಂಡರಗಿ : ಕಳೆದ ಹಲವು ದಶಕಗಳಿಂದ ರಾಜಕಾರಣದಿಂದ ರೋಸಿ ಹೋಗಿದ್ದ ಜನತೆಗೆ ಕಳೆದ ಐದು ವರ್ಷಗಳ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಾರದರ್ಶಕ ಆಡಳಿತ ಮತ್ತು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕವಾಗಿ ಮಾದರಿ ಬದಲಾವಣೆಯಿಂದ ಮತದಾರರು ನಂಬಿಕೆ ವಿಶ್ವಾಸದಿಂದ ಬೆಂಬಲಿಸಿದ್ದು ಬಿಜೆಪಿ ಗೆಲುವಿಗೆ ಕಾರಣವಾಯಿತು ಎಂದು ಸಂಸದ ಶಿವಕುಮಾರ ಉದಾಸಿ ಅಭಿಪ್ರಾಯ ಪಟ್ಟರು.
Vijaya Karnataka Web GDG-7MDR1A UDASI U
ಮುಂಡರಗಿ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪಕ್ಷ ದಿಂದ ಶುಕ್ರವಾರ ನಡೆದ ಅಭಿನಂದನಾ ಸಮಾರಂಭ ಹಾಗೂ ಪುರಸಭೆ ನೂತನ ಸದಸ್ಯರ ಸನ್ಮಾನ ಸಮಾರಂಭವನ್ನು ಸಂಸದ ಶಿವಕುಮಾರ ಉದಾಸಿ ಉದ್ಘಾಟಿಸಿದರು.


ಸ್ಥಳೀಯ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿ ಮತದಾರರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಪುರಸಭೆ ನೂತನ ಸದಸ್ಯರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಚ್ಛ ಭಾರತ ಪರಿಲ್ಪನೆಯ ಸಾಮಾಜಿಕ ಪರಿವರ್ತನೆ, ನೋಟು ಅಮಾನ್ಯೀಕರಣ, ಜನಸಾಮಾನ್ಯರು ಬ್ಯಾಂಕ್‌ ವಹಿವಾಟು ಮಾಡಲು ನೇರ ಬಡವರ ಖಾತೆಗೆ ಹಣ ಜಮಾ ಆಗುವಂತಹ ಡಿಜಿಟಲ್‌ ಆರ್ಥಿಕ ವ್ಯವಸ್ಥೆ , ಸಾಂಸ್ಕೃತಿಕವಾಗಿ ಜಗತ್ತಿಗೆ ಯೋಗ ಪರಿಚಯಿಸಿ ಹೆಚ್ಚು ಆದ್ಯತೆ ನೀಡಿದ್ದು ಸೇರಿದಂತೆ ಪ್ರಮುಖವಾಗಿ ದೇಶದ ಭದ್ರತೆಯ ದೃಷ್ಟಿಯಿಂದ ಸಮರ್ಥ ನಾಯಕತ್ವದ ಅರಿವು ಹಾಗೂ ಕಾಂಗ್ರೆಸ್‌ ಅಪ್ರಚಾರ ಮಾಡಿದ್ದು ಬಿಜೆಪಿಗೆ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಯಿತು.

ಮುಂಬರುವ ದಿನಗಳಲ್ಲಿ ಮಾತುಕೊಟ್ಟಂತೆ ರೈತರ ನೀರಾವರಿಗೆ ಆದ್ಯತೆ, ಈ ಭಾಗದ ರೈಲ್ವೆ ಯೋಜನೆ, ಬೆಳೆ ವಿಮೆ ಹೊಸ ಯೋಜನೆಯಲ್ಲಿ ಮಾರ್ಪಾಡು, ಅವೈಜ್ಞಾನಿಕ ಬೆಳೆ ವಿಮೆ ಮಾಡದೆ ರೈತರ ಹಾನಿಗೊಳಗಾದ ಪ್ರದೇಶವನ್ನು ವಿಮೆ ಅಡಿಗೆ ಸ್ಯಾಟ್‌ ಲೈಟ್‌ ಮೂಲಕ ಕಂಡು ಹಿಡಿದು ಪರಿಹಾರ ಕೊಡುವದು ಸೇರಿದಂತೆ ಗದಗ ಹಾವೇರಿ ಜಿಲ್ಲೆಯಲ್ಲಿ ಆಹಾರ ಸಂಸ್ಕರಣ ಘಟಕ ಸ್ಥಾಪಿಸುವ ಕುರಿತು ಪ್ರಯತ್ನಿಸಲಾಗುವದು ಎಂದರು.

ಹಾವೇರಿ ಲೋಕಸಭಾ ಚುನಾವಣೆ ಉಸ್ತುವಾತಿ ಎಂ.ಎಸ್‌.ಕರಿಗೌಡರ, ಶಾಸಕ ರಾಮಣ್ಣ ಲಮಾಣಿ, ಮಂಡಳ ಬಿಜೆಪಿ ಅಧ್ಯಕ್ಷ ದೇವಪ್ಪ ಕಂಬಳಿ ಅಧ್ಯಕ್ಷ ತೆ ವಹಿಸಿದ್ದರು. ಶಿವನಗೌಡ ಮಾತನಾಡಿದರು.

ಶಿವಕುಮಾರ ಉದಾಸಿ ಹಾಗೂ ನೂತನ ಪುರಸಭೆ ಸದಸ್ಯರಾದ ಗಂಗಿಮಾಳವ್ವ ಮೋರನಾಳ, ಶಿವಪ್ಪ ಚಿಕ್ಕಣ್ಣವರ, ಟಿ.ಬಿ.ದಂಡಿನ, ಕವಿತಾ ಉಳ್ಳಾಗಡ್ಡಿ, ಪವನ ಮೇಟಿ, ರುಕ್ಮಿಣಿ ಸುಣಗಾರ, ನಿರ್ಮಲಾ ಕೊರ್ಲಹಳ್ಳಿ, ಪ್ರಲ್ಹಾದ ಹೊಸಮನಿ, ಶಿವಾನಂದ ಬಾರಕೇರ, ನಾಗೇಶ ಹುಬ್ಬಳ್ಳಿ, ವೀಣಾದೇವಿ ಸೋನಿ, ಲಿಂಗರಾಜಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ದೇವೇಗೌಡರು ದಾರವಾಹಿ ನೋಡುತ್ತಿದ್ದಾರೆ

ಚುನಾವಣೆಯಲ್ಲಿ ಹೌದೆನ್ನುವ ಮಾಜಿ ಪ್ರಧಾನಿ ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೋಯ್ಲಿ ಇತರ ಮುಖಂಡರೇ ಸೋತು ಮನೆಯಲ್ಲಿ ಈಗ ದಾರವಾಹಿ ನೋಡುತ್ತಿದ್ದಾರೆ, ಎಷ್ಟು ಗಂಟೆಗೆ ಯಾವ ದಾರವಾಹಿ ಮೂಡಿ ಬರುತ್ತದೆ ಎಂಬುದನ್ನು ಸರಿಯಾಗಿ ಹೇಳುತ್ತಾರೆ ಎಂದು ಎಂ.ಎಸ್‌.ಕರಿಗೌಡರ ವ್ಯಂಗ್ಯವಾಡಿದ್ದಾರೆ.

ಕರಬಸಪ್ಪ ಹಂಚಿನಾಳ, ರವೀಂದ್ರ ಉಪ್ಪಿನಬೆಟಗೇರಿ, ಹೇಮಗಿರೀಶ ಹಾವಿನಾಳ, ಆನಂದಗೌಡ ಪಾಟೀಲ, ಭೀಮಸಿಂಗ್‌ ರಾಠೋಡ, ಎಸ್‌.ವಿ.ಪಾಟೀಲ, ರಜನಿಕಾಂತ ದೇಸಾಯಿ, ಚಿನ್ನಪ್ಪ ವಡ್ಡಟ್ಟಿ, ಕುಮಾರಸ್ವಾಮಿ, ಸೀತಾರಾಮ ರಾಜು, ದೇವಪ್ಪ ಇಟಗಿ ರಾಘವೇಂದ್ರ ಚಿನ್ನಿ ಇತರರು ಪಾಲ್ಗೊಂಡಿದ್ದರು. ಶಿವು ನಾಡಗೌಡ್ರ ನಿರೂಪಿಸಿದರು.

ಪೋಟೊ ಶಿರ್ಷಿಕೆ7ಎಂಡಿಆರ್‌1 ಮುಂಡರಗಿ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪಕ್ಷ ದಿಂದ ಶುಕ್ರವಾರ ನಡೆದ ಅಭಿನಂದನಾ ಸಮಾರಂಭ ಹಾಗೂ ಪುರಸದಸ್ಯರ ನೂತನ ಸನ್ಮಾನ ಸಮಾರಂಭದಲ್ಲಿ ಶಿವಕುಮಾರ ಉದಾಸಿ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ