ಆ್ಯಪ್ನಗರ

ಮೋದಿ ಟೀಂ ಇಂಡಿಯಾ ಹಾಸ್ಯಾಸ್ಪದ

ಗದಗ: ದೇಶದಲ್ಲಿ 40 ಕೋಟಿಗೂ ಅಧಿಕ ಮುಸ್ಲಿಂ, ಹಿಂದುಳಿದ ಮತ್ತು ಆದಿವಾಸಿ ಜನ ಈಗಲೂ ಭಯದಲ್ಲೇ ವಾಸವಾಗಿದ್ದಾರೆ. ಆದರೆ ಪ್ರಧಾನಿ ಮೋದಿ ಟೀಂ ಇಂಡಿಯಾ ಬಗ್ಗೆ ಮಾತನಾಡುತ್ತಿದ್ದಾರೆ. ದೇಶದ 130 ಕೋಟಿ ಜನ ಒಗ್ಗಟ್ಟಾಗಿದ್ದಾರೆ ಎನ್ನುವುದು ಹಾಸ್ಯಾಸ್ಪದ ಎಂದು ರಾಷ್ಟ್ರೀಯ ಸೇವಾದಳದ ಅಧ್ಯಕ್ಷ ಡಾ. ಸುರೇಶ ಖೈರ್ನಾರ್‌ ಆರೋಪಿಸಿದರು.

Vijaya Karnataka 30 Nov 2018, 5:00 am
ಗದಗ: ದೇಶದಲ್ಲಿ 40 ಕೋಟಿಗೂ ಅಧಿಕ ಮುಸ್ಲಿಂ, ಹಿಂದುಳಿದ ಮತ್ತು ಆದಿವಾಸಿ ಜನ ಈಗಲೂ ಭಯದಲ್ಲೇ ವಾಸವಾಗಿದ್ದಾರೆ. ಆದರೆ ಪ್ರಧಾನಿ ಮೋದಿ ಟೀಂ ಇಂಡಿಯಾ ಬಗ್ಗೆ ಮಾತನಾಡುತ್ತಿದ್ದಾರೆ. ದೇಶದ 130 ಕೋಟಿ ಜನ ಒಗ್ಗಟ್ಟಾಗಿದ್ದಾರೆ ಎನ್ನುವುದು ಹಾಸ್ಯಾಸ್ಪದ ಎಂದು ರಾಷ್ಟ್ರೀಯ ಸೇವಾದಳದ ಅಧ್ಯಕ್ಷ ಡಾ. ಸುರೇಶ ಖೈರ್ನಾರ್‌ ಆರೋಪಿಸಿದರು.
Vijaya Karnataka Web modi team india is ridiculous
ಮೋದಿ ಟೀಂ ಇಂಡಿಯಾ ಹಾಸ್ಯಾಸ್ಪದ


ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೇಶದ ಜನ, ನ್ಯಾಯಾಂಗ ವ್ಯವಸ್ಥೆ ಮತ್ತು ಮಾಧ್ಯಮವನ್ನು ಭಯದಲ್ಲಿಟ್ಟು ಅಧಿಕಾರ ನಡೆಸುವ ಕೀಳು ಪ್ರವೃತ್ತಿ ನಡೆಸುತ್ತಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳುವುದನ್ನು ಬಿಟ್ಟು ಧರ್ಮದ ವಿಚಾರ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಕೇಂದ್ರ ಸರಕಾರಕ್ಕೆ ಮುಂಬರುವ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಬೇಕು ಎಂದರು.

ಅಯೋಧ್ಯೆ ರಾಮಜನ್ಮಭೂಮಿ ವಿವಾದ ಇನ್ನೂ ನ್ಯಾಯಾಲಯದಲ್ಲಿದೆ. ಆದರೂ ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಸಂಘ ಪರಿವಾರದ ಅಂಗ ಸಂಸ್ಥೆಗಳು ಜನಾಗ್ರಹ ಸಭೆಗಳ ಮೂಲಕ ಬಿಜೆಪಿ ಗಟ್ಟಿಗೊಳಿಸುವ ಹುನ್ನಾರ ನಡೆಸುತ್ತಿದೆ. ಅಲ್ಲದೇ ಶಬರಿ ಅಯ್ಯಪ್ಪ ಸನ್ನಿಧಿಗೆ ಮಹಿಳೆಯರ ಪ್ರವೇಶ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಜನರ ಭಾವನೆಗಳಿಗೆ ಮನ್ನಣೆ ನೀಡಿ ತೀರ್ಪು ನೀಡಬೇಕು ಎನ್ನುವ ಮೂಲಕ ನ್ಯಾಯದಾನವನ್ನೇ ಅಣುಕಿಸುತ್ತಿದ್ದಾರೆ. ಚುನಾವಣೆ ಆಯೋಗ ಅಮಿತ್‌ ಶಾ ಅವರ ರಾಜ್ಯಸಭಾ ಸದಸ್ಯತ್ವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರಕಾರ ಈಶಾನ್ಯ ರಾಜ್ಯಗಳಲ್ಲಿ ಜಮ್ಮು ಕಾಶ್ಮೀರದ ವಾತಾವರಣ ಸೃಷ್ಟಿಸುತ್ತಿವೆ. ಅಲ್ಲಿನ ಭೂಮಿಯನ್ನು ಕಬಳಿಸಿ, ಅದಾನಿ, ಅಂಬಾನಿಯಂಥ ಕಾರ್ಪೋರೇಟ್‌ ಉದ್ಯಮಿಗಳಿಗೆ ಧಾರೆ ಎರೆಯಬೇಕೆಂಬ ಕೇಂದ್ರ ಸರಕಾರದ ವಿರುದ್ಧ ಜನ ಬೀದಿಗಿಳಿದಿದ್ದಾರೆ. ಆದರೆ, ಹೋರಾಟ ದಮನ ಮಾಡಲು ಕೇಂದ್ರ ಸರಕಾರ ನಕಲಿ ನಕ್ಸಲಿಸಂ, ಟೆರರಿಸಂ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.

ಹಗಲು ದರೋಡೆ:
ಸಾಮಾಜಿಕ ಹೋರಾಟಗಾರ ಎಸ್‌.ಆರ್‌.ಹಿರೇಮಠ ಮಾತನಾಡಿ, ಭ್ರಷ್ಟಾಚಾರ, ಕಪ್ಪು ಹಣದ ಮೇಲೆ ಸಮರ ಸಾರಿದೆವು ಎಂದು ಹೇಳುವವರ ಮೂಗಿನ ಕೆಳಗೆ ಭ್ರಷ್ಟಾಚಾರವಿದೆ. ಗಾಲಿ ಜನಾರ್ದನ ರೆಡ್ಡಿ 40 ಸಾವಿರ ಕೋಟಿ ರೂ. ಹಗಲು ದರೋಡೆ ನಡೆಸಿದರೂ ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬದಲಾಗಿ ನ್ಯಾಯಾಧೀಶರಿಗೆ 60 ಕೋಟಿ ರೂ. ನೀಡಿ ಬೇಲ್‌ ತಂದ ಸೋಮಶೇಖರ ರಡ್ಡಿ ಜತೆ ಸ್ನೇಹ ಬೆಳೆಸಿದ ಮೋದಿ ಸರಕಾರಕ್ಕೆ ನಾಚಿಕೆ ಆಗಬೇಕು ಎಂದು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು.

ಪ್ರಧಾನಿ ಮೋದಿ ಮಾತು ಮತ್ತು ನಡವಳಿಕೆಯಲ್ಲಿ ಸಾಕಷ್ಟು ಅಂತರವಿದೆ. ನಾನು ದೇಶದ ಪ್ರಥಮ ಸೇವಕ ಎಂದು ಹೇಳಿಕೊಳ್ಳುವ ಮೋದಿ, ದೇಶದ ಒಳಿತಿಗೆ ಸೇವೆ ಮಾಡುತ್ತಿಲ್ಲ. ಕಾರ್ಪೋರೇಟ್‌ ಹಣದಿಂದ 2014ರಲ್ಲಿ ಪ್ರಧಾನಿ ಹುದ್ದೆಗೆ ಏರಿದವರು ನರೇಂದ್ರ ಮೋದಿ. ಹೀಗಾಗಿ 2019ರಲ್ಲಿ ಜನವಿರೋಧಿ, ಸಂವಿಧಾನ ವಿರೋಧಿ ಸರಕಾರವನ್ನು ಮನೆಗೆ ಕಳುಹಿಸಬೇಕಿದೆ ಎಂದರು.

ಬಂಡಾಯ ಸಾಹಿತಿ ಬಸವರಾಜ ಸೂಳಿಬಾವಿ, ಲಿಂಗಾಯತ ಪ್ರಗತಿ ಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕವಳಿಕಾಯಿ, ಮುತ್ತು ಬಿಳಿಯಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ