ಆ್ಯಪ್ನಗರ

ಮೀಸಲಿಗೆ ಡೆಡ್‌ಲೈನ್‌ ನೀಡಿದ ವಾಲ್ಮೀಕಿ ಪೀಠದ ಶ್ರೀಗಳು

ಗದಗ: ವಾಲ್ಮೀಕಿ ಸಮುದಾಯ ರಾಜ್ಯದ ನಾಲ್ಕನೇ ದೊಡ್ಡ ಸಮುದಾಯವಾಗಿದೆ. 72 ವರ್ಷಗಳಿಂದ ರಾಜಕೀಯ ಪಕ್ಷಗಳು ವಾಲ್ಮೀಕಿ ಸಮುದಾಯವನ್ನು ವೋಟ್‌ ಬ್ಯಾಂಕ್‌ ಆಗಿ ಬಳಸಿಕೊಂಡಿವೆ. ಮೀಸಲಾತಿ ಕುರಿತು ಸರಕಾರ ಯಾವುದೇ ವಿಚಾರ ಮಾಡಿಲ್ಲಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಶ್ರೀಗಳು ಆರೋಪಿಸಿದರು.

Vijaya Karnataka 18 Dec 2019, 8:09 pm
ಗದಗ: ವಾಲ್ಮೀಕಿ ಸಮುದಾಯ ರಾಜ್ಯದ ನಾಲ್ಕನೇ ದೊಡ್ಡ ಸಮುದಾಯವಾಗಿದೆ. 72 ವರ್ಷಗಳಿಂದ ರಾಜಕೀಯ ಪಕ್ಷಗಳು ವಾಲ್ಮೀಕಿ ಸಮುದಾಯವನ್ನು ವೋಟ್‌ ಬ್ಯಾಂಕ್‌ ಆಗಿ ಬಳಸಿಕೊಂಡಿವೆ. ಮೀಸಲಾತಿ ಕುರಿತು ಸರಕಾರ ಯಾವುದೇ ವಿಚಾರ ಮಾಡಿಲ್ಲಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಶ್ರೀಗಳು ಆರೋಪಿಸಿದರು.
Vijaya Karnataka Web mr valmiki seated the deadline for the reservation
ಮೀಸಲಿಗೆ ಡೆಡ್‌ಲೈನ್‌ ನೀಡಿದ ವಾಲ್ಮೀಕಿ ಪೀಠದ ಶ್ರೀಗಳು

ನಗರದಲ್ಲಿಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ''ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿಯನ್ನು ಮುಖ್ಯಮಂತ್ರಿಗಳು ಫೆಬ್ರವರಿ 8, 9 ರಂದು ನಡೆಯುವ ಜಾತ್ರೆಯಲ್ಲಿಘೋಷಿಸಬೇಕು. ಇಲ್ಲವಾದಲ್ಲಿಸಿಎಂ ಅವರ ಮನೆ, ವಿಧಾನಸೌಧಕ್ಕೆ ನುಗ್ಗಿ ಪ್ರತಿಭಟನೆ ಮಾಡುತ್ತೇವೆ'' ಎಂದು ಎಚ್ಚರಿಸಿದರು.

''ಈಚೆಗೆ ನಡೆದ ವಿಧಾನಸಭೆ, ಲೋಕಸಭೆ ಚುನಾವಣೆ ಸಂದರ್ಭದಲ್ಲಿಬಿಜೆಪಿ ಮುಖಂಡರು ಶ್ರೀರಾಮುಲು ಅವರನ್ನು ಡಿಸಿಎಂ ಮಾಡುತ್ತೇ್ತವೆ ಎಂದಿದ್ದರು. ಈವರೆಗೂ ಶ್ರೀರಾಮುಲು ಅವರನ್ನು ಡಿಸಿಎಂ ಮಾಡಿಲ್ಲ. ಇನ್ನು ಮುಂದಾದರೂ ವಾಲ್ಮೀಕಿ ಸಮುದಾಯದ ನಾಯಕನನ್ನು ಡಿಸಿಎಂ ಮಾಡಬೇಕು ಎಂದು ಮತ್ತೊಮ್ಮೆ ಒತ್ತಾಯಿಸುವೆ'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ