ಆ್ಯಪ್ನಗರ

ಮುಳಗುಂದ: ಹತ್ತು ಕೆಜಿ ಪ್ಲಾಸ್ಟಿಕ್ ವಶಕ್ಕೆ

ಮುಳಗುಂದ:ಪಟ್ಣದ ವ್ಯಾಪ್ತಿಯ ವಿವಿಧ ಅಂಗಡಿಗಳ ಮೇಲೆ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎಸ್.ಡಿ.ಅಗಡಿ ನೇತತ್ವದ ತಂಡವು ದಾಳಿ ನಡೆಸಿ 10 ಕೆ.ಜಿ.ಪ್ಲಾಸ್ಟಿಕ್

ವಿಕ ಸುದ್ದಿಲೋಕ 2 Jun 2016, 5:06 am
ಮುಳಗುಂದ:ಪಟ್ಣದ ವ್ಯಾಪ್ತಿಯ ವಿವಿಧ ಅಂಗಡಿಗಳ ಮೇಲೆ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎಸ್.ಡಿ.ಅಗಡಿ ನೇತತ್ವದ ತಂಡವು ದಾಳಿ ನಡೆಸಿ 10 ಕೆ.ಜಿ.ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ವಶಪಡಿಸಿಕೊಂಡು ದಂಢ ವಿಧಿಸಿತು.
Vijaya Karnataka Web mulagunda ten kg of plastic detained
ಮುಳಗುಂದ: ಹತ್ತು ಕೆಜಿ ಪ್ಲಾಸ್ಟಿಕ್ ವಶಕ್ಕೆ


ಬಳಿಕ ಮಾತನಾಡಿದ ಎಸ್.ಡಿ.ಅಗಡಿ, ಪರಿಸರ ಸಂರಕ್ಷಣೆ ಕಾಯ್ದೆ 1986 ಸೆಕ್ಷನ್ 5ರಡಿ ಯಾವುದೇ ರೀತಿಯ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಭಿತ್ತಿ ಪತ್ರ, ತೋರಣ, ಪ್ಲೆಕ್ಸ್, ತಟ್ಟೆ, ಲೋಟ, ಚಮಚ್, ಕ್ಲಿಂಗ್ ಫಿಲ್ಮ್ ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ ಮತ್ತು ಪ್ಲಾಸ್ಟಿಕ್ ಮೆಕ್ರೋಬಿಡ್‌ನಿಂದ ತಯಾರಾದಂತಹ ವಸ್ತುಗಳ ಬಳಕೆ ಮತ್ತು ಮಾರಾಟವನ್ನು ರಾಜ್ಯಾದ್ಯಂತ ನಿಷೇಧಿಸಲಾಗಿದೆ.

ಈ ಸಂಬಂಧ ಈಗಾಗಲೇ ತಿಳಿವಳಿಕೆ ಮತ್ತು ಜಾಗತಿ ಕಾರ್ಯಕ್ರಮ ಮಾಡಲಾಗಿದೆ. ಇದಕ್ಕೆ ತಪ್ಪಿದಲ್ಲಿ ಅಂಗಡಿ ಜಪ್ತ ಮಾಡಿ ದಂಡ ವಿಧಿಸಲಾಗುವುದು. ಅಲ್ಲದೆ ಅಂತಹ ಅಂಗಡಿಗಳ ಮೇಲೆ ಕಾನೂನು ರೀತ್ಯ ಕ್ರಮಕೆಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದರೂ ಬಹುತೇಕ ಜನತೆ ಇನ್ನೂ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಸುವುದು ಬೇಸರದ ವಿಷಯ ಎಂದು ತಿಳಿಸಿದರು.

ಪರಿಸರ ಸಂರಕ್ಷಣೆಯ ಹಿತದಷ್ಠಿಯಿಂದ ಜನರು ಸಹ ಪ್ಲಾಸ್ಟಿಕ್ ಬಳಕೆ ಬಿಟ್ಟು, ಬಟ್ಟೆಯ ಚೀಲ ಉಪಯೋಗಿಸಬೇಕು. ಖಾನಾವಳಿ, ಹೋಟಲ್‌ಗಳಿಂದ ತಿಂಡಿಗಳನ್ನು ಬಾಳೆ ಎಲೆ, ಪತ್ರೋಳೆ, ಕಾಬಾಲೆ ಇತರೆ ಎಲೆಗಳಿಂದ ಪ್ಯಾಕ್ ಮಾಡಿ ಗ್ರಾಹಕರಿಗೆ ವಿತರಿಸಬೇಕು. ಮಾಂಸ ಖರೀದಿಸುವವರು ಕಡ್ಡಾಯ ಡಬ್ಬಿ ಉಪಯೋಗಿಸಿ ಪ್ಲಾಸ್ಟಿಕ್ ನಿಷೇಧಕ್ಕೆ ಸಹಕರಿಸಬೇಕು ಎಂದರು.

ಆರೋಗ್ಯ ನೀರಿಕ್ಷಕ ಎಂ.ಸಿ.ಸಜ್ಜನ, ಪಪಂ ಸಿಬ್ಬಂದಿ ಮುನಿರ್ ನದ್ದಿಮುಲ್ಲಾ, ಕೆ.ಎಂ.ಜಮಾಲಸಾಬನವರ, ಗಾಯತ್ರಿ ಚಲವಾದಿ, ಅರ್ಜುನ ಮ್ಯಾಗೇರಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ