ಆ್ಯಪ್ನಗರ

ಬಾಬಾ ಮಂದಿರದಲ್ಲಿ ಸಂಗೀತದ ರಸದೌತಣ

ಗದಗ: ಇಲ್ಲಿನ ಸಾಯಿ ನಗರದಲ್ಲಿರುವ ಪುಟ್ಟಪರ್ತಿ ಸಾಯಿಬಾಬಾ ಮಂದಿರದಲ್ಲಿಶಾರದಾ ಸಂಗೀತ ಸಾಂಸ್ಕೃತಿಕ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿಸಂಗೀತ ಕಾರ್ಯಕ್ರಮ ಜರುಗಿತು.

Vijaya Karnataka 18 Jan 2020, 5:00 am
ಗದಗ: ಇಲ್ಲಿನ ಸಾಯಿ ನಗರದಲ್ಲಿರುವ ಪುಟ್ಟಪರ್ತಿ ಸಾಯಿಬಾಬಾ ಮಂದಿರದಲ್ಲಿಶಾರದಾ ಸಂಗೀತ ಸಾಂಸ್ಕೃತಿಕ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿಸಂಗೀತ ಕಾರ್ಯಕ್ರಮ ಜರುಗಿತು.
Vijaya Karnataka Web musical dessert at baba mandir
ಬಾಬಾ ಮಂದಿರದಲ್ಲಿ ಸಂಗೀತದ ರಸದೌತಣ


ಡಾ.ಶ್ರೀಕಾಂತ ಪಾಠಕ ಮಾತನಾಡಿ, ಸತತ ಸಂಗೀತ ಅಧ್ಯಯನದಿಂದ ನಿರಂತರ ಚಟುವಟಿಕೆಯಿಂದ ಇರಲು ಸಾಧ್ಯ. ಮನಸ್ಸಿಗೆ ಮುದ ನೀಡುವ ಸಂಗೀತ ಮನದ ವ್ಯಾಕುಲತೆ ಕಳೆದು ಕ್ರಿಯಾಶೀಲತೆಯನ್ನು ತುಂಬುತ್ತದೆ ಎಂದರು.

ಪ್ರೊ.ಎಚ್‌.ಎನ್‌.ಕಾಳೆ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ಶಿಕ್ಷಕಿ ದೀಪ್ತಿ ಪಾಠಕ, ಪರಶುರಾಮ ಮಂಗಳಗುಡ್ಡ ಅವರನ್ನು ಸನ್ಮಾನಿಸಲಾಯಿತು. ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿವೆಂಕಟೇಶ ಕುಲಕರ್ಣಿ ಹಾಗೂ ಸಂಗಡಿಗರು, ದೀಪ್ತಿ ಪಾಠಕ, ಪರಶುರಾಮ ಮಂಗಳಗುಡ್ಡ, ರಾಜೇಶ್ವರಿ ಸಜ್ಜನರ ಅವರು ಸುಗಮ ಸಂಗೀತ, ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆ ಹಾಡುವ ಮೂಲಕ ಸಂಗೀತದ ರಸದೌತಣ ನೀಡಿದರು. ಪ್ರೊ.ಎಸ್‌.ಬಿ.ಸಜ್ಜನರ ನಿರೂಪಿಸಿದರು. ಸಂಘದ ಅಧ್ಯಕ್ಷೆ ರಾಜೇಶ್ವರಿ ಸಜ್ಜನರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ