ಆ್ಯಪ್ನಗರ

29ರಿಂದ ನಮ್ಮೂರ ದಸರಾ ಉತ್ಸವ

ಗದಗ: ನಗರದ ಜಗದಂಬಾ ದೇವಸ್ಥಾನ, ತುಳಜಾಭವಾನಿ ದೇವಸ್ಥಾನದಲ್ಲಿಸೆ.29 ರಿಂದ 8ರವರೆಗೆ ಸೋಮವಂಶ ಸಹಸ್ರಾರ್ಜುನ P್ಷÜತ್ರೀಯ ಸಮಾಜ, ಜಗದ್ಗುರು ವಿಠ್ಠಲಾರೂಢ ಸಂಸ್ಥಾನಮಠದ ಹುಡ್ಕೋ ಬಡಾವಣೆ, ಅಂಬಾಭವಾನಿ ಮಂದಿರ, ಪಂಚ ಕಮೀಟಿ, ತರುಣ ಸಂಘ, ಮಹಿಳಾ ಮಂಡಳ ಹಾಗೂ ದಸಾರ ಉತ್ಸವ ಸಮಿತಿ ಸಹಯೋಗದೊಂದಿಗೆ ನಾಡಹಬ್ಬ ನಮ್ಮೂರ ದಸರಾ ಉತ್ಸವ ಹಮ್ಮಿಕೊಳ್ಳಲಾಗಿದೆ.

Vijaya Karnataka 28 Sep 2019, 5:00 am
ಗದಗ: ನಗರದ ಜಗದಂಬಾ ದೇವಸ್ಥಾನ, ತುಳಜಾಭವಾನಿ ದೇವಸ್ಥಾನದಲ್ಲಿಸೆ.29 ರಿಂದ 8ರವರೆಗೆ ಸೋಮವಂಶ ಸಹಸ್ರಾರ್ಜುನ P್ಷÜತ್ರೀಯ ಸಮಾಜ, ಜಗದ್ಗುರು ವಿಠ್ಠಲಾರೂಢ ಸಂಸ್ಥಾನಮಠದ ಹುಡ್ಕೋ ಬಡಾವಣೆ, ಅಂಬಾಭವಾನಿ ಮಂದಿರ, ಪಂಚ ಕಮೀಟಿ, ತರುಣ ಸಂಘ, ಮಹಿಳಾ ಮಂಡಳ ಹಾಗೂ ದಸಾರ ಉತ್ಸವ ಸಮಿತಿ ಸಹಯೋಗದೊಂದಿಗೆ ನಾಡಹಬ್ಬ ನಮ್ಮೂರ ದಸರಾ ಉತ್ಸವ ಹಮ್ಮಿಕೊಳ್ಳಲಾಗಿದೆ.
Vijaya Karnataka Web nammura dasara festival from the 29th
29ರಿಂದ ನಮ್ಮೂರ ದಸರಾ ಉತ್ಸವ

ಸೆ. 29 ರಂದು ಬೆಳಗ್ಗೆ 5ಕ್ಕೆ ಸಂತ ಮಂಡಳಿಯವರಿಂದ ಕಾಕಡಾರತಿ, ಭಜನೆ ನಡೆಯುವದು. 7 ರಿಂದ ಕಾಳಪ್ಪ ಪತ್ತಾರ ಅವರಿಂದ ನಿತ್ಯ ದೇವಿ ಪುರಾಣ ಪ್ರವಚನ, ಪಾಂಡುರಂಗ ಕುರ್ತಕೋಟಿ ತಬಲಾ ವಾದ್ಯ ಭಕ್ತಿ ಸಂಗೀತ ಸೇವೆ ಜರುಗುವದು. ಹುಡ್ಕೋ ಬಡಾವಣೆ ಅಂಬಾಭವಾನಿ ಮಂದಿರದಲ್ಲಿಸಂಜೆ 7 ರಿಂದ 8 ರವರೆಗೆ ಅಶೋಕ ಸುತಾರ ಅವರಿಂದ ಪುರಾಣ ಪ್ರವಚನ ಹಾಗೂ ಮಹಾಮಂಗಳಾರತಿ ನಡೆಯುವುದು.

ಸೆ. 29 ರಂದು ಬೆಳಗ್ಗೆ 9ಕ್ಕೆ ಎಸ್‌ಎಸ್‌ಕೆ ಸಮಾಜ ಬಾಂಧವರಿಗಾಗಿ ಕ್ರಿಕೆಟ್‌ ಟೋರ್ನಾಮೆಂಟ್‌ನ್ನು ನಗರದ ವಿಡಿಎಸ್‌ಟಿಸಿ ಮೈದಾನದಲ್ಲಿಆಯೋಜಿಸಲಾಗಿದೆ. ಸೆ.3 ರಂದು ಲಲಿತ ಪಂಚಮಿ (ಪುಲಾರೆ ಕಟ್ಟುವದು), ಸೆ.4ರಂದು ಸಂಜೆ 6ಕ್ಕೆ ಎಸ್‌ಎಸ್‌ಕೆ ಬಾಂಧವರಿಗಾಗಿ ಆದರ್ಶ ದಂಪತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸೆ.6 ರಂದು ದುರ್ಗಾಷ್ಠಮಿ ನಿಮಿತ್ತ ಬೆಳಗ್ಗೆ 8 ರಿಂದ ರತ್ನಾಕರಭಟ್ಟ ಜೋಶಿ ಅವರಿಂದ ಲಲಿತ ಸಹಸ್ರನಾಮಪೂರ್ವಕ ನವಗ್ರಹ ಶಾಂತಿ ಹೋಮ-ಹವನ, ಪೂರ್ಣಾಹುತಿ ನೆರವೇರುವುದು. ಸೆ.8 ರಂದು ಸಾಯಂಕಾಲ 4 ಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿಆನೆಯ ಮೇಲೆ ಅಂಬಾರಿ ಮೆರವಣಿಗೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ