ಆ್ಯಪ್ನಗರ

ಅಧ್ಯಾತ್ಮದಿಂದ ಮನಸ್ಸಿಗೆ ನೆಮ್ಮದಿ

ಗದಗ: ಯಾರಲ್ಲಿವಿದ್ಯೆ, ವಿವೇಚನೆ, ಜ್ಞಾನ, ದಾನ, ತಪಸ್ಸು, ಕ್ಷಮೆ, ಧರ್ಮದ ಗುಣಗಳು ಇಲ್ಲವೋ ಭೂಮಿಯ ಮೇಲೆ ಮನುಷ್ಯರೂಪದಿಂದ ಸಂಚರಿಸುವ ಮೃಗಗಳು ಇದ್ದಂತೆ ಎಂದು ಇಂಚಲದ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.

Vijaya Karnataka 23 Feb 2020, 5:00 am
ಗದಗ: ಯಾರಲ್ಲಿವಿದ್ಯೆ, ವಿವೇಚನೆ, ಜ್ಞಾನ, ದಾನ, ತಪಸ್ಸು, ಕ್ಷಮೆ, ಧರ್ಮದ ಗುಣಗಳು ಇಲ್ಲವೋ ಭೂಮಿಯ ಮೇಲೆ ಮನುಷ್ಯರೂಪದಿಂದ ಸಂಚರಿಸುವ ಮೃಗಗಳು ಇದ್ದಂತೆ ಎಂದು ಇಂಚಲದ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.
Vijaya Karnataka Web 21RUDRAGOUD8_25
ಗದಗ ಶಿವಾನಂದ ಕಲ್ಯಾಣ ಮಂಟಪದಲ್ಲಿಜರುಗಿದ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಸದ್ಧರ್ಮಪರಿಷತ್‌ ಕಾರ್ಯಕ್ರಮದಲ್ಲಿಡಾ.ಶಿವಾನಂದ ಭಾರತಿ ಸ್ವಾಮೀಜಿ ಮಾತನಾಡಿದರು.


ನಗರದ ಶಿವಾನಂದ ಕಲ್ಯಾಣ ಮಂಟಪದಲ್ಲಿಜರುಗಿದ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಸದ್ಧರ್ಮಪರಿಷತ್‌ ಕಾರ್ಯಕ್ರಮದಲ್ಲಿಮಾತನಾಡಿದರು.
ರೂಪ ಸುಂದರವಲ್ಲನಿಜವಾದ ಸುಂದರತೆ ಎಂದರೆ ಅದು ವಿದ್ಯೆ. ಅಧ್ಯಾತ್ಮದಿಂದ ಮನಸ್ಸಿಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು.

ತ್ರಿವಿದ ದಾಸೋಹ ಮೂರ್ತಿ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ ಶಿವ ಚಿಂತನ, ಶಿವ ಧ್ಯಾನ ಮಾಡದಿದ್ದರೆ ಅವನು ಪ್ರಾಣಿಗಳಿಗೆ ಸಮಾನ. ಆದ್ದರಿಂದ ಅನುಭಾವಿಗಳು ಹೇಳಿದ ಮಾತನ್ನು ಜೀವನದಲ್ಲಿಅಳವಡಿಸಿಕೊಂಡು ಮನುಷ್ಯನಂತೆ ಬದುಕಬೇಕೆಂದರು.

ಸಾನ್ನಿಧ್ಯ ಜಗದ್ಗುರು ಅಭಿನವ ಶಿವಾನಂದ ಸ್ವಾಮೀಜಿ ಮಾತನಾಡಿ, ಚಾರಿತ್ರ್ಯವಿಲ್ಲದ ಬದುಕು ಪಶುವಿಗೆ ಸಮಾನ. ಸದ್ಗುಣಗಳನ್ನು ಅಳವಡಿಸಿಕೊಂಡು ಸದ್ಧರ್ಮದಿಂದ ಬಾಳಬೇಕು ಎಂದರು. ಕೈವಲ್ಯಾನಂದ ಸ್ವಾಮೀಜಿ ಮಾತನಾಡಿ, ಏನಾದರೂ ಆಗು ಮೊದಲು ಮಾನವನಾಗುವ ಮಾನವೀಯ ಮೌಲ್ಯದಿಂದ ಬದುಕಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಡಾ.ಬಸವರಾಜ ಸ್ವಾಮೀಜಿ ಮಾತನಾಡಿ, ಜ್ಞಾನೇಂದ್ರೀಯ ಮತ್ತು ಕರ್ಮೇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಬದುಕಬೇಕು ಎಂದರು.
ಅಕ್ಕಮಹಾದೇವಿ ಮಾತನಾಡಿ, ಮನುಷ್ಯನಾಗಿ ಹುಟ್ಟಿ ಬಂದ ಮೇಲೆ ತನ್ನನ್ನು ತಾನು ತಿಳಿಯದಿದ್ದರೆ ಮೃಗಗಳಿಗೆ ಸಮಾನ ಎಂದರು.

ಡಾ.ಉಮೇಶ ಪುರದ, ಮೋನಿಕಾ, ವೆನಿಲಾ, ಡಾ.ಜಯರಾಜ ಬಸರಿಗಿಡದ, ಡಾ.ಕುಮಾರ ಕಂಠಿಮಠ, ಎಸ್‌.ಬಿ.ಸಂಶಿ, ಬಿ.ಎಸ್‌.ಪಾಟೀಲ, ನಂದಪ್ಪ ಗುಡಸಾಲಿ, ಅಶೋಕ ಸಂಶಿ, ಬಿ.ಬಿ. ಭಾವಿಕಟ್ಟಿ, ಡಾ.ಜಿ.ಬಿ.ಪಾಟೀಲ, ಸಿದ್ದು ಯಾಪಲಪರ್ವಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ