ಆ್ಯಪ್ನಗರ

ಉದ್ಯೋಗಕ್ಕಿಲ್ಲದ ಖಾತರಿ: ತಪ್ಪದ ವಲಸೆ

ರೋಣ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಎಂಎನ್‌ಆರ್‌ಇಜಿಎ) ತಾಲೂಕಿನ ಮಟ್ಟಿಗೆ ಖಾತ್ರಿ ಕಳೆದುಕೊಂಡಿದೆ. ಉದ್ಯೋಗ ಅರಸಿ ವಲಸೆ ಹೋಗುವ ಕಾರ್ಮಿಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ತಾಲೂಕಿನಾದ್ಯಂತ ಈ ಉಪಯುಕ್ತ ಯೋಜನೆ ಕಾಟಾಚಾರಕ್ಕೆ ಎಂಬಂತೆ ನಡೆಯುತ್ತಿದ್ದು ಭರವಸೆ ಕಳೆದುಕೊಳ್ಳುತ್ತಿದೆ.

Vijaya Karnataka 31 Dec 2018, 5:00 am
ರೋಣ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಎಂಎನ್‌ಆರ್‌ಇಜಿಎ) ತಾಲೂಕಿನ ಮಟ್ಟಿಗೆ ಖಾತ್ರಿ ಕಳೆದುಕೊಂಡಿದೆ. ಉದ್ಯೋಗ ಅರಸಿ ವಲಸೆ ಹೋಗುವ ಕಾರ್ಮಿಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ತಾಲೂಕಿನಾದ್ಯಂತ ಈ ಉಪಯುಕ್ತ ಯೋಜನೆ ಕಾಟಾಚಾರಕ್ಕೆ ಎಂಬಂತೆ ನಡೆಯುತ್ತಿದ್ದು ಭರವಸೆ ಕಳೆದುಕೊಳ್ಳುತ್ತಿದೆ.
Vijaya Karnataka Web GDG-30 RON 1A
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದ ಕಾಮಗಾರಿ.(ಸಾಂದರ್ಬಿಕ ಚಿತ್ರ)


ಈ ಯೋಜನೆಯಡಿ ಕಾಮಗಾರಿ ನಡೆಸಿದರೆ ಅಧಿಕಾರಿ ವರ್ಗಕ್ಕಾಗಲಿ, ಜನಪ್ರತಿನಿಧಿಗಳಿಗಾಗಲಿ ಒಂದು ಪೈಸೆ ಗಿಟ್ಟುವುದಿಲ್ಲ ಈ ಕಾರಣಕ್ಕಾಗಿಯೇ ಯೋಜನೆ ಹಾದಿ ತಪ್ಪದೆ. ಉದ್ಯೋಗ ಖಾತ್ರಿ ಅನುಷ್ಠಾನದ ವಿಚಾರದಲ್ಲಿ ಬರ ಪೀಡಿತ ರೋಣ ತಾಲೂಕು ಆಟಕ್ಕುಂಟು ಲೆಕ್ಕಕ್ಕಿಲ್ಲವೆಂಬಂತಾಗಿದೆ.

ಸತತ ಬರ ಪೀಡಿತ ಹಣೆ ಪಟ್ಟಿ ಕಟ್ಟಿಕೊಂಡು ಮತ್ತೆ ಈ ಬಾರಿಯೂ ಪಟ್ಟಿಯಲ್ಲಿ ಸ್ಥಾನ ಪಡೆದ ರೋಣ ತಾಲೂಕಿನಲ್ಲಿ ಹೇಳಿಕೊಳ್ಳುವಂತಹ ಯಾವುದೇ ಕೈಗಾರಿಕೆಗಳಿಲ್ಲ. ಕೃಷಿ ಅವಲಂಬಿತರೇ ಹೆಚ್ಚು ಆದರೆ ಮಳೆ ಕೈಕೊಟ್ಟ ಪರಿಣಾಮ ರೈತರು ಹಾಗೂ ರೈತ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ವೇಳೆಯಲ್ಲಿ ಎನ್‌ಆರ್‌ಇಜಿಎ ವರವಾಗಿ ಪರಿಣಮಿಸಬೇಕಾಗಿತ್ತು. ಅನುಷ್ಠಾನದ ವಿಚಾರದಲ್ಲಿ ಗದಗ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆಯಬೇಕಿತ್ತು. ಆದರೆ 'ನುಂಗಲು' ಯಾವುದೇ ಮಾರ್ಗವಿಲ್ಲದ ಎಂಬ ಕಾರಣಕ್ಕೆ ಬಹುತೇಕ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲೂ ಯೋಜನೆ ಬಗ್ಗೆ ನಿರಾಸಕ್ತಿ. ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಹುತೇಕ ಎಲ್ಲ ಇಲಾಖೆಗಳ ವ್ಯಾಪ್ತಿಗೂ ಬರುತ್ತದೆ ಇದಕ್ಕೆ ಅನುಷ್ಠಾನದ ಮಿತಿ ಇಲ್ಲ. ಎಷ್ಟೇ ಮೊತ್ತಕ್ಕೆ ಕ್ರಿಯಾ ಯೋಜನೆ ತಯಾರಿಸಿದರೂ ಅಷ್ಟು ಅನುದಾನ ಸಿದ್ದ ಇರುತ್ತದೆ. ಹೀಗಿದ್ದರೂ ಸಂಬಂಧಪಟ್ಟ ಯಾವ ಇಲಾಖೆಯೂ ಸಮರ್ಪಕವಾದ ಕಾರ್ಯಗಳನ್ನು ರೈತರ, ರೈತ ಕಾರ್ಮಿಕರ ಹಿತದೃಷ್ಠಿಯಲ್ಲಿ ಅನುಷ್ಠಾನಗೊಳಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ.

ತಪ್ಪದ ಕಾರ್ಮಿಕರ ವಲಸೆ :

ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಉದ್ಯೋಗ ನೀಡಬೇಕು. ಆ ಮೂಲಕ ಆಯಾ ಪ್ರದೇಶದ ಅಭಿವೃದ್ಧಿಯೂ ಆಗಬೇಕು ಎಂಬುದು ಯೋಜನೆ ಮೂಲ ಉದ್ದೇಶವಾಗಿದೆ.ಆದರೆ, ಯೋಜನೆ ಸಮರ್ಪಕವಾಗಿ ಜಾರಿಗೊಳ್ಳದ ಕಾರಣ ಬೇರೆ ರಾಜ್ಯ ಹಾಗೂ ಇತರ ಜಿಲ್ಲೆಗೆ ವಲಸೆ ಹೋಗುವ ಕಾರ್ಮಿಕರ ಸಂಖ್ಯೆ ತಗ್ಗಿಸಲು ಸಹ ಯೋಜನೆ ಮುನ್ನಡೆಸುವ ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ಇಂದಿಗೂ ಗಜೇಂದ್ರಗಡ ಭಾಗದ ಹಲವು ತಾಂಡಾ ಮತ್ತು ಗ್ರಾಮಗಳಿಂದ ಒಟ್ಟಾರೆ ಸಹಸ್ರಾರು ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಮಂಗಳೂರ, ಗೋವಾ, ಬೆಂಗಳೂರಿಗೆ ಕೆಲಸಕ್ಕಾಗಿ ಗುಳೆ ಹೋಗುವುದು ನಿಂತಿಲ್ಲ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎ.ತರಪದಾರ ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಹೇಳಿದ್ದರು.

ಗುರಿ ಬಲು ದೂರ :

ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ 35 ಕಾಮಗಾರಿಗಳಿಗೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಈ ಪೈಕಿ 32 ಕಾಮಗಾರಿ ಮಂಜೂರಾಗಿವೆ. ತಾಲೂಕಿನಲ್ಲಿ 3600 ಕುಟುಂಬಗಳು ಉದ್ಯೋಗ ಅರಸಿ ಹೆಸರು ನೋಂದಾಯಿಸಿಕೊಂಡಿವೆ. ಆದರೆ, ಈವರೆಗೆ 284 ಕುಟುಂಬ ಮಾತ್ರ ನೂರು ದಿನದ ಕೆಲಸ ಮಾಡಿವೆ. ಇವರೆಗೆ ಕೆಲಸ ಕೊಟ್ಟಿರುವುದು 15600 ಕುಟುಂಬಕ್ಕೆ ಅದರಲ್ಲೂ ನೂರು ದಿನ ಕೆಲಸ ಮಾಡಿರುವ ಕುಟುಂಬಗಳ ಸಂಖ್ಯೆ ಕೇವಲ 284 ಎನ್ನುವುದು ವಿಪರ್ಯಾಸ. ತಾಲೂಕಿನಲ್ಲಿ 35 ಗ್ರಾಪಂ ವ್ಯಾಪ್ತಿಯಲ್ಲೂ ಉದ್ಯೋಗ ಖಾತ್ರಿ ಬಗ್ಗೆ ಹೆಚ್ಚಿಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ.ಅದರ ಈ ಬಗ್ಗೆ ನಿರ್ಲಕ್ಷ ್ಯ ಮಾಡುತ್ತಿರುವವರೇ ಹೆಚ್ಚು ತಾಲೂಕಿನ 35 ಗ್ರಾಪಂ ಗಳಲ್ಲಿ ಯಾವಗಲ್ಲ, ಹುಲ್ಲೂರ,ನಿಡಗುಂದಿ, ಸೂಡಿ ಗ್ರಾಪಂ ಹೊರತುಪಡಿಸಿದರೆ ಉಳಿದೆಲ್ಲವೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮಾತುಗಳು ಅಧಿಕಾರಿಗಳ ವಲಯದಿಂದಲೆ ಕೇಳಿ ಬರುತ್ತಿದ್ದು, ಬರಗಾಲದ ಸಂಕಷ್ಟಕ್ಕೆ ಸಿಲುಕಿರುವ ಜನ ಗುಳೆ ಹೋಗುವುದು ತಪ್ಪಿಲ್ಲ ಎಂಬ ಮಾತು ರಾರಾಜಿಸುತ್ತಿವೆ.

ದಿನಕ್ಕೆ 249 ರೂ.:

ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದಿನಕ್ಕೆ 249 ರೂ.ನೀಡುತ್ತಾರೆ. ಅದಕ್ಕೂ ಕೆಲಸ ಮಾಡಿ ತಿಂಗಳ ಗಟ್ಟಲೇ ಕಾಯಬೇಕು. ಗೋವಾ, ಮಂಗಳೂರ, ಸೇರಿದಂತೆ ದಕ್ಷಿಣ ಕನ್ನಡದ ಕಾಫಿ ಎಸ್ಟೇಟ್‌ಗಳಲ್ಲಿ ದಿನವೊಂದಕ್ಕೆ 350 ರಿಂದ 400 ರೂ.ಕೂಲಿ ನೀಡುವುದಲ್ಲದೇ ಮಾಲೀಕರೆ ಉಪಹಾರ, ಊಟದ ವ್ಯವಸ್ಥೆಯನ್ನು ಮಾಡುತ್ತಾರೆ.ಹೀಗಾಗಿ ಉದ್ಯೋಗ ಖಾತ್ರಿ ಯೋಜನೆ ವಲಸೆ ಕಾರ್ಮಿಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗುತ್ತದೆ ಎನ್ನುವುದು ಕಾರ್ಮಿಕರ ಮಾತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ