ಆ್ಯಪ್ನಗರ

ಸಕಾಲ ಸೇವೆಗಳ ವರದಿ ಸಲ್ಲಿಸಲು ಸೂಚನೆ

ಗದಗ: ಜಿಲ್ಲೆಯಲ್ಲಿನ ಎಲ್ಲಇಲಾಖೆಗಳು ಸರಕಾರದ ಸಕಾಲ ಸೇವೆಗಳ ಅರ್ಜಿಗಳನ್ನು ಪಟ್ಟಿ ಮಾಡಿ ಸೆ. 28ರ ಒಳಗಾಗಿ ನಿಗದಿತ ಸಮಯಕ್ಕೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಅಧಿಕಾರಿಗಳಿಗೆ ಸೂಚಿಸಿದರು.

Vijaya Karnataka 16 Sep 2019, 5:00 am
ಗದಗ: ಜಿಲ್ಲೆಯಲ್ಲಿನ ಎಲ್ಲಇಲಾಖೆಗಳು ಸರಕಾರದ ಸಕಾಲ ಸೇವೆಗಳ ಅರ್ಜಿಗಳನ್ನು ಪಟ್ಟಿ ಮಾಡಿ ಸೆ. 28ರ ಒಳಗಾಗಿ ನಿಗದಿತ ಸಮಯಕ್ಕೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಅಧಿಕಾರಿಗಳಿಗೆ ಸೂಚಿಸಿದರು.
Vijaya Karnataka Web notice to submit timely service report
ಸಕಾಲ ಸೇವೆಗಳ ವರದಿ ಸಲ್ಲಿಸಲು ಸೂಚನೆ


ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಜರುಗಿದ ಸಕಾಲ ಸೇವೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿಮಾತನಾಡಿದ ಅವರು, ಸರಕಾರದ ಸಕಾಲ ಸೇವೆಗಳ ಪ್ರಮಾಣ ಪತ್ರ ಹಾಗೂ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಹಾಗೂ ಇತರ ಇಲಾಖೆಗಳ ಸೇವೆಗಳಾಗಿ ಸ್ವೀಕೃತವಾಗುತ್ತಿರುವ ಅರ್ಜಿಗಳ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲೆಗೆ ಸಂಬಂಧಿಸಿದ ಎಲ್ಲಇಲಾಖೆಗಳ ಕಾರಾರ‍ಯಲಯದಲ್ಲಿಸಾರ್ವಜನಿಕರು ಮಾಹಿತಿಗಾಗಿ ಸಕಾಲ ಯೋಜನೆಯ ಸೂಚನಾ ಫಲಕ ಅಳವಡಿಸಬೇಕು ಎಂದರು.

ಜಿಪಂ ಉಪಕಾರ್ಯದರ್ಶಿ ಪ್ರಾಣೇಶ ರಾವ್‌ ಮಾತನಾಡಿ, ಗ್ರಾಪಂ ಮಟ್ಟದಲ್ಲಿಸರಕಾರದ ಸಕಾಲ ಸೇವೆಗಳ ಅರ್ಜಿಗಳನ್ನು ವಿಳಂಬ ಮಾಡದೇ ವಿಲೇವಾರಿ ಮಾಡಬೇಕು ಎಂದರು. ಜಿಲ್ಲಾಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆಯಲ್ಲಿಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ