ಆ್ಯಪ್ನಗರ

ನೀರಿಗಾಗಿ ಹೆದ್ದಾರಿ ತಡೆದು ಆಕ್ರೋಶ

Outrage over the highway for water

Vijaya Karnataka 18 Jan 2019, 5:00 am
ರೋಣ: ಕಳೆದ ಹದಿನೈದು ದಿನಗಳಿಂದ ಪುರಸಭೆಯವರು ಜನ, ಜಾನುವಾರುಗಳಿಗೆ ಕುಡಿಯಲು ಹನಿ ನೀರು ಪೂರೈಸಿಲ್ಲ. ಕುಡಿಯುವ ನೀರಿಗಾಗಿ ಜನ ಪಟ್ಟಣದ ಸುತ್ತಮುತ್ತಲಿನ ತೋಟ, ಗದ್ದೆಗಳಿಗೆ, ಅಲ್ಲದೇ ದೂರದ ಕೆರೆಗಳಿಗೆ ನಿತ್ಯ ಅಲೆದಾಡುವಂಆಗಿದೆ. ಸಮಸ್ಯೆ ಪುರಸಭೆಯ ಅಧಿಕಾರಿಗಳ ಗಮನಕ್ಕೆ ಬಂದರೂ ಜಾಣಮೌನ ತೋರುತ್ತಿದ್ದಾರೆ ಎಂದು ಆಕ್ರೋಶಗೊಂಡ ಪಟ್ಟಣದ 16, 17, 18 ನೇ ವಾರ್ಡ್‌ನ ನಿವಾಸಿಗಳು ಗದಗ ಬಾಗಲೋಟ ಹೆದ್ದಾರಿಯ ಮೇಲೆ ಖಾಲಿ ಕೊಡಗಳನ್ನು ಇಟ್ಟು ರಸ್ತೆ ತಡೆ ನಡೆಸುವ ಮೂಲಕ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿದ ಘಟನೆ ಗುರುವಾರ ನಡೆಯಿತು.
Vijaya Karnataka Web outrage over the highway for water
ನೀರಿಗಾಗಿ ಹೆದ್ದಾರಿ ತಡೆದು ಆಕ್ರೋಶ


ಪ್ರತಿಭಟನೆಯ ನೇತೃತ್ವವಹಿಸಿದ್ದ ಶಿವಬಸಮ್ಮ ಕುಂಬಾರ ಮಾತನಾಡಿ, ಕಳೆದ ಹದಿನೈದು ದಿನಗಳಿಂದ ನಮ್ಮ ವಾರ್ಡುಗಳಲ್ಲಿನ ಸಾರ್ವಜನಿಕರಿಗೆ ಪುರಸಭೆಯವರು ಕಡಿಯುವ ನೀರು ಪೂರೈಸುತ್ತಿಲ್ಲಾ, ಪುರಸಭೆ ಅಧಿಕಾರಿಗಳ ಈ ವರ್ತನೆಯಿಂದ ಸಾರ್ವಜನಿಕರು ಕುಡಿಯುವ ನೀರಿಗಾಗಿ ಕೈಯಲ್ಲಿ ಖಾಲಿ ಕೊಡ ಹಿಡಿದು ಸುಡು ಬಿಸಿಲನ್ನು ಲೆಕ್ಕಿಸದೆ ಬೊರೆವೆಲ್‌ ಇರುವ ಹೊಲ ಹೊಲ ತಿರುಗುವಂತಾಗಿದೆ ಎಂದು ದೂರಿದ ಅವರು, ನಮ್ಮ ವಾರ್ಡುಗಳಿಗೆ ಪುರಸಭೆಯವರು ನೀರು ಬಿಡುವವರೆಗೂ ಈ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲಾ, ಉಳ್ಳವರು ಫಿಲ್ಟರ್‌ ನೀರು ಮತ್ಯಾವುದೋ ತಂದು ನಿತ್ಯ ಜೀವನ ನಡೆಸುತ್ತಾರೆ. ಬಡವರು, ಕೂಲಿ ಕಾರ್ಮಿಕರು ಏನು ಮಾಡಬೇಕು. ಜನ, ಜಾನುವಾರುಗಳು ಕುಡಿಯುವ ನೀರು ಇಲ್ಲವೆಂದರೆ ಬದುಕುವುದಾದರೂ ಹೇಗೆ. ಕನಿಷ್ಠ ಸೌಜನ್ಯವನ್ನೂ ಪುರಸಭೆಯ ಅಧಿಕಾರಿಗಳು ಮಾಡುತ್ತಿಲ್ಲ. ಸಮಸ್ಯೆ ಹೇಳಿಕೊಂಡು ಹೋದರೇ ಅಪಹಾಸ್ಯ ಮಾಡುವ ಮೂಲಕ ಪುರಸಭೆಯಿಂದ ಸಾರ್ವಜನಿಕರನ್ನು ಹೊರಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರದಾಡಿದ ಪ್ರಯಾಣಿಕರು:
ಪ್ರತಿಭಟನಾ ನಿರತರು ಎರಡು ಗಂಟೆಗೂ ಹೆಚ್ಚು ಕಾಲ ರೋಣ- ಬದಾಮಿ ರಾಜ್ಯ ಹೆದ್ದಾರಿ ತಡೆದ ಪರಿಣಾಮ ಸಂತೆ ದಿನವಾದ ಗುರುವಾರ ಪ್ರಯಾಣಿಕರು ಪರದಾಡಿದರು. ಇದರಿಂದ ಎಚ್ಚೆತ್ತುಗೊಂಡ ಪುರಸಭೆಯವರು ಪ್ರತಿಭಟನಾ ನಿರತರ ಪ್ರತಿಭಟನೆಗೆ ಮಣಿದು ನೀರನ್ನು ಬಿಟ್ಟ ಘಟನೆಯೂ ನಡೆಯಿತು. ಪ್ರತಿಭಟನೆಯಲ್ಲಿ ರಹಿಮಾನಭೀ ಹೊಸಮನಿ, ಜಯರಾ ನಧಾಪ್‌, ಪುತಿಜಾ ರಾಮದುರ್ಗ, ಗೋದಾವರಿ ಕಬರಳ್ಳಿ, ಬಸವರಾಜ ಕುಂಬಾರ, ಹಣಮಂತ ಗಡಗಿ, ಶೇಖಪ್ಪ ಬಾಬಜಿ. ಯಲ್ಲಪ್ಪ ಬೂಟಣ್ಣವರ ಸೇರಿದಂತೆ ಅನೇಕರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ